ಪುತ್ತೂರು: ಚಾಮುಂಡಿ ವಿಹಾರ ಸ್ಟೇಡಿಯಂ ಮೈಸೂರಿನಲ್ಲಿ ನಡೆದ ಕ್ರೀಡಾ ಭಾರತಿ ಕರ್ನಾಟಕ – ರಾಜ್ಯ ಕ್ರೀಡಾ ಸಮ್ಮೇಳನದಲ್ಲಿ ನಡೆದ ಘೋಷ್ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ’ಶೇಷಾದ್ರಿ-ಘೋಷ್’ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ.
ಶಾಲಾ ಕಛೇರಿ ಸಹಾಯಕ ವಿಜಯ ಕುಮಾರ್ ಇವರು ತಂಡದ ಸಂಯೋಜಕರಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಘೋಷ್ ತರಬೇತುದಾರರಾದ ವಿನೋದ್, ಉಮೇಶ್ ಹಾಗೂ ಚೇತನ್ ಅವರು ತರಬೇತು ನೀಡಿರುತ್ತಾರೆ. ಘೋಷ್ ಹಿರಿಯ ತರಬೇತುದಾರ ಅಚ್ಯುತ ಪ್ರಭುಗಳು ಸಲಹೆ ನೀಡಿರುತ್ತಾರೆ.