ಕುರಿಯ ಉಳ್ಳಾಲ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಜಯರಾಮ್ ರೈ ಅಡ್ಯತ್ತಿಮಾರ್ ಆಯ್ಕೆ

0

ಪುತ್ತೂರು: ಕುರಿಯ ಗ್ರಾಮದ ಉಳ್ಳಾಲ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಜಯರಾಮ ರೈ ಅಡೈತ್ತಿಮಾರ್‌ರವರು ಆಯ್ಕೆಯಾಗಿದ್ದಾರೆ.

ದೇವಸ್ಥಾನದ ವಠಾರದಲ್ಲಿ ನಡೆದ ಸಮಿತಿಯ ಸಭೆಯಲ್ಲಿ ಈ ಆಯ್ಕೆ ನಡೆಯಿತು. ವ್ಯವಸ್ಥಾಪನ ಸಮಿತಿಯ ಸದಸ್ಯ ಹರೀಶ್ ಡಿಂಬ್ರಿ ಸೂಚಿಸಿ, ಆನಂದಕುಮಾರ್ ಉಳ್ಳಾಲ ಅನುಮೋದಿಸಿದರು. ಆಡಳಿತಾಧಿಕಾರಿ ಮೋನಪ್ಪ ಕೆ ಸಂದರ್ಭೋಚಿತವಾಗಿ ಮಾತನಾಡಿ ಅಧಿಕಾರವನ್ನು ಹಸ್ತಾಂತರಿಸಿದರು.


ಈ ಸಂದರ್ಭದಲ್ಲಿ ಸಮಿತಿ ರಚನೆಗೆ ಸಹಕರಿಸಿದ ಶಿವರಾಮ ಆಳ್ವ ಬಳ್ಳಮಜಲು ಗುತ್ತು, ಪಿಜಿನಡ್ಕ ಗುತ್ತು ರಮೇಶ್ ರೈ ಡಿಂಬ್ರಿ, ಸನತ್ ರೈ ಎಳ್ನಾಡ್ ಗುತ್ತು ಇವರನ್ನು ನೂತನ ಸಮಿತಿಯ ವತಿಯಿಂದ ಗೌರವಿಸಲಾಯಿತು. ಇದಲ್ಲದೆ ಆಡಳಿತಾಧಿಕಾರಿ ಮೋನಪ್ಪ ಕೆ.ರವರನ್ನು ಹಾಗೇ ದೇವಳದಲ್ಲಿ 15 ವರುಷಗಳಿಂದ ಅರ್ಚಕರಾಗಿ ಸೇವೆ ಸಲ್ಲಿಸಿದ್ದ ಗುರುರಾಜ್ ಮಡುಕುಲ್ಲಾಯ ಹಾಗೂ ನಿತ್ಯ ಸೇವೆಯಲ್ಲಿ ಸಹಕರಿಸುತ್ತಿರುವ ವಿಷ್ಣುಮೂರ್ತಿ ಬಡಕ್ಕಿಲ್ಲಾಯ, ವಿಷ್ಣು ಅಡಿಗ ಇವರನ್ನು ಕ್ಷೇತ್ರದ ವತಿಯಿಂದ ಗೌರವಿಸಲಾಯಿತು.

ನೂತನ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರನ್ನು ಶಿವರಾಮ ಆಳ್ವ ಬಳ್ಳಮಜಲು ಗುತ್ತು ಶಾಲು ಹಾಕಿ ಅಭಿನಂದಿಸಿ ಮಾತನಾಡಿದರು. ರಮೇಶ್ ರೈ ಡಿಂಬ್ರಿ ಸ್ವಾಗತಿಸಿ, ಶಶಿಕಲಾ ಎಸ್ ರೈ ಕುರಿಯ ಎಳ್ನಾಡ್ ಗುತ್ತು ವಂದಿಸಿದರು. ನೂತನ ಸಮಿತಿಯ ಸದಸ್ಯರಾದ ನಾರಾಯಣ್ ರೈ ಬಳ್ಳಮಜಲು ಗುತ್ತು, ಹರೀಶ್ ಡಿಂಬ್ರಿ, ಶಶಿಕಲಾ ಎಸ್ ರೈ ಕುರಿಯ ಎಳ್ನಾಡ್ ಗುತ್ತು, ಅನಿತಾ ರಮೇಶ್ ರೈ ಡಿಂಬ್ರಿ, ಆನಂದ ಕುಮಾರ್ ಉಳ್ಳಾಲ, ದಿನೇಶ್ ಸಾಲಿಯಾನ್ ಬೋಳಂತಿಮಾರ್ ಗೋಪಾಲಕೃಷ್ಣ ಕರೆಜ್ಜಾ, ಅರ್ಚಕ ಸದಸ್ಯ ಪ್ರಕಾಶ್ ಭಟ್ ಕೊಡೆಂಕಿರಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here