ಗಂಡಿಬಾಗಿಲು ಶಾಲಾ ವಿದ್ಯಾರ್ಥಿಗಳಿಂದ ಸಂಚಾರಿ ನಿಯಮ ಪಾಲನೆ ಬಗ್ಗೆ ಜಾಗೃತಿ ಜಾಥಾ

0

ರಾಮಕುಂಜ: ಕೊಯಿಲ ಗ್ರಾಮದ ಗಂಡಿಬಾಗಿಲು ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ರಸ್ತೆ ಬದಿಯಲ್ಲಿ ನಿಂತು ವಾಹನ ಚಾಲಕರು ಸಂಚಾರಿ ನಿಯಮ ಪಾಲನೆ ಮಾಡುವ ಬಗ್ಗೆ ಜಾಗೃತಿ ಜಾಥಾ ಕಾರ‍್ಯಕ್ರಮ ನಡೆಸಿ, ವಾಹನ ಚಾಲಕರ, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.


ಜ.17ರಂದು ಬೆಳಿಗ್ಗೆ ರಸ್ತೆಗೆ ಇಳಿದ ವಿದ್ಯಾರ್ಥಿಗಳು ರಸ್ತೆಯಲ್ಲಿ ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಲಾಯಿಸುವವರನ್ನು ನಿಲ್ಲಿಸಿ ಅವರಿಗೆ ಸಂಚಾರಿ ನಿಯಮದ ಪಾಠ ಹೇಳಿ, ಅಪಘಾತವನ್ನು ತಪ್ಪಿಸಿ, ಜೀವ ಉಳಿಸಿಕೊಳ್ಳುವ ಬಗ್ಗೆ ಹಿತವಚನ, ಸಲಹೆ ನೀಡಿದರು. ಹೆಲ್ಮೆಟ್ ಇಟ್ಟುಕೊಂಡು ಹೋಗುತ್ತಿದ್ದವರನ್ನೂ ನಿಲ್ಲಿಸಿ ಗುಲಾಬಿ ಹೂ ನೀಡಿ ಅಭಿನಂದನೆ ಸಲ್ಲಿಸಿದರು. ಕಾರು, ಇತರೇ ವಾಹನದಲ್ಲಿ ಹೋಗುವವರಿಗೆ ಸೀಟ್ ಬೆಲ್ಟ್ ಹಾಕುವಂತೆ, ಟೂರಿಸ್ಟ್ ವಾಹನ ಚಾಲಕರು ಸಮವಸ್ತ್ರ ಧರಿಸದೆ ಇದ್ದವರನ್ನು ಸಮವಸ್ತ್ರ ಹಾಕಿ ಹೋಗುವಂತೆ ತಿಳಿಸಿ, ಸಮವಸ್ತ್ರ ಹಾಕಿಸಿ ಮುಂದಕ್ಕೆ ಚಲಿಸಲು ಅನುವು ಮಾಡಿಕೊಟ್ಟರು. ಸಂಚಾರಿ ನಿಯಮ ಪಾಲಿಸಿದವರಿಗೆ ಗುಲಾಬಿ ಹೂ ನೀಡಿ ಅಭಿನಂದನೆ ಸಲ್ಲಿಸಿದರು.
ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ತುಳಸಿ, ಶಿಕ್ಷಕಿಯರಾದ ಶ್ರೀಮತಿ ಪೂರ್ಣಿಮಾ, ಶ್ರೀಮತಿ ಚಿತ್ರಾವತಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

LEAVE A REPLY

Please enter your comment!
Please enter your name here