ಮುಕ್ವೆ ಮಖಾಂ ಉರೂಸ್: 2ನೇ ದಿನದ ಧಾರ್ಮಿಕ ಮತಪ್ರಭಾಷಣ

0

ಅಲ್ಲಾಹು ನೀಡಿರುವ ಆಯುಷ್ಯ, ಆರೋಗ್ಯವನ್ನು ಒಳಿತಿನ ಕ್ಷೇತ್ರದಲ್ಲಿ ವಿನಿಯೋಗಿಸಿ-ಲುಕ್ಮಾನುಲ್ ಹಕೀಮ್ ಸಖಾಫಿ

ಪುತ್ತೂರು: ಮುಕ್ವೆ ಉರೂಸ್ ಕಾರ್ಯಕ್ರಮದ ಎರಡನೇ ದಿನವಾದ ಜ.20ರಂದು ಮುಕ್ವೆ ಮಸೀದಿಯ ಮಾಜಿ ಖತೀಬ್ ಬಿ.ಕೆ ಅಬ್ದುಲ್ ಖಾದರ್ ಹಾಜಿ ಬೆಂಗಳೂರು ದುವಾ ನೆರವೇರಿಸಿದರು. ಬಳಿಕ ಮಾತನಾಡಿ ಅವರು ಔಲಿಯಾಗಳು ಅಲ್ಲಾಹನ ಸಂಪ್ರೀತಿ ಹೊಂದಿದವರಾಗಿದ್ದು ಅವರ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸುವುದು ಪುಣ್ಯದ ಕಾರ್ಯವಾಗಿದೆ ಎಂದು ಹೇಳಿದರು.


ಮುಖ್ಯ ಪ್ರಭಾಷಣ ನಡೆಸಿದ ಲುಕ್ಮಾನುಲ್ ಹಕೀಮ್ ಸಖಾಫಿ ಪುಲ್ಲಾರರವರು ಸೃಷ್ಟಿಕರ್ತನಾದ ಅಲ್ಲಾಹನು ನಮಗೆ ನೀಡಿರುವ ಆರೋಗ್ಯ, ಆಯುಷ್ಯವನ್ನು ಒಳಿತಿನ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಮೂಲಕ ಪರಿಶುದ್ದ ಜೀವನ ನಡೆಸಲು ಪ್ರಯತ್ನಿಸಬೇಕು, ಪ್ರತಿಯೊಬ್ಬರಿಗೂ ಮರಣ ಕಡ್ಡಾಯವಾಗಿದ್ದು ಮರಣ ಹೊಂದುವ ಮೊದಲು ನಾವು ಮಾಡಿರುವ ಸತ್ಕಾರ್ಯಗಳು ಮಾತ್ರ ನಮಗೆ ಶಾಶ್ವತ ಎಂದು ಅವರು ಹೇಳಿದರು. ಅಲ್ಲಾಹು ನಮಗೆ ನೀಡಿರುವ ಅನುಗ್ರಹವನ್ನು ನೆನೆದು ನಾವು ಕೃತಜ್ಞರಾಗಬೇಕು, ಇದ್ದುದರಲ್ಲಿ ತೃಪ್ತಿ ಹೊಂದುವ ಮೂಲಕ ಐಹಿಕ ಜೀವನದ ವ್ಯಾಮೋಹವನ್ನು ಬಿಟ್ಟುಬಿಡಬೇಕು, ಶಾಶ್ವತವಾಗಿರುವ ಪಾರತ್ರಿಕ ಜೀವನದ ಬಗ್ಗೆ ಚಿಂತನೆ ನಡೆಸಿ ಜೀವನದಲ್ಲಿ ಬದಲಾಗಬೇಕು ಎಂದು ಅವರು ಹೇಳಿದರು.

ವೇದಿಕೆಯಲ್ಲಿ ಮುಕ್ವೆ ಮಸೀದಿಯ ಅಧ್ಯಕ್ಷ ಇಬ್ರಾಹಿಂ ಮುಲಾರ್, ಮುಕ್ವೆ ಮಸೀದಿಯ ಖತೀಬ್ ಇರ್ಷಾದ್ ಫೈಝಿ ಪಾಲ್ತಾಡ್, ಪಾಪೆತ್ತಡ್ಕ ಮಸೀದಿಯ ಖತೀಬ್ ಯೂಸುಫ್ ಫೈಝಿ, ಅಜ್ಜಿಕಟ್ಟೆ ಮಸೀದಿಯ ಅಧ್ಯಕ್ಷ ಅಬೂಬಕ್ಕರ್ ಮುಲಾರ್, ಸುಲೈಮಾನ್ ಕೊಡಿನೀರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here