ಪುತ್ತೂರು: ಬಲ್ನಾಡು ಗ್ರಾಮ ಪಂಚಾಯತ್‌ನ ವಿಕಲಚೇತನರ ವಿಶೇಷ ಗ್ರಾಮ ಸಭೆ ಬಲ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷೆ ಪರಮೇಶ್ವರಿರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಪುತ್ತೂರು ತಾಲೂಕು ಮಟ್ಟದ ವಿಕಲಚೇತನರ ಪುನರ್‌ವಸತಿ ಕಾರ್ಯಕರ್ತ ನವೀನ್ ಕುಮಾರ್ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಇಲಾಖೆ ಯೋಜನೆಗಳ ಮಾಹಿತಿ ನೀಡಿ ವಿಕಲಚೇತನರ 21 ವಿಧದ ವಿಕಲತೆಯ ಬಗ್ಗೆ ,2016ರ ವಿಕಲಚೇತನರ ಅಧಿನಿಯಮ ಬಗ್ಗೆ ,ಬ್ಯಾಟರಿ ಚಾಲಿತ ವೀಲ್‌ಚೇರ್ ಬಗ್ಗೆ, 4 ವಿಧದ ಆರೈಕೆದಾರರ ಪ್ರೋತ್ಸಾಹಧನ ಬಗ್ಗೆ, ಹಿರಿಯ ನಾಗರಿಕರ ಕಾಯ್ದೆ, ಹಿರಿಯ ನಾಗರಿಕರ ಗುರುತು ಚೀಟಿ ಬಗ್ಗೆ ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ದಕ್ಷಿಣ ಕನ್ನಡ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ ಮಾಜಿ ನೋಡೆಲ್ ಅಧಿಕಾರಿ ಪಿ.ವಿ. ಸುಬ್ರಮಣಿ ಮಾಹಿತಿ ನೀಡಿ ವಿಕಲಚೇತನರಿಗೆ ಅನುಕಂಪ ಬೇಡ. ಎಲ್ಲಾ ಕ್ಷೇತ್ರದಲ್ಲಿ ಸಮಾನ ಅವಕಾಶ ದೊರೆಯಬೇಕು ಎಂದು ಹೇಳಿ ವಿಕಲಚೇತನರಿಗೆ ಹಾಗೂ ವಿಕಲಚೇತನರ ಪೋಷಕರಿಗೆ ಮಾಹಿತಿ ನೀಡಿದರು. ಬಲ್ನಾಡು ಸಮುದಾಯದ ಅರೋಗ್ಯ ಕೇಂದ್ರ ವ್ಯೆಧ್ಯಾದಿಕಾರಿ ಎಂಡೋ ಪೀಡಿತ ವ್ಯಕ್ತಿಗಳ ಪಿಂಚಣಿ ಹಾಗೂ ಅರೋಗ್ಯ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ದೇವಪ್ಪ ಪಿ.ಆರ್., ಕಾರ್ಯದರ್ಶಿ ಲಕ್ಷ್ಮಿ ಎಂ. ಉಪಸ್ಥಿತರಿದ್ದರು.
ಬಲ್ನಾಡು ಆರೋಗ್ಯ ಕೇಂದ್ರ ವತಿಯಿಂದ ವಿಕಲಚೇತನರ ವ್ಯಕ್ತಿಗಳಿಗೆ ಹಾಗೂ ಎಂಡೋ ಪೀಡಿತರಿಗೆ ಆರೋಗ್ಯ ತಪಾಸಣೆ ನಡೆಯಿತು. ವಿಕಲಚೇತನರು /ವಿಕಲಚೇತನರ ಆರೈಕೆದಾರರು, ಆಶಾಕಾರ್ಯಕರ್ತರು, ಬಲ್ನಾಡು ಅರೋಗ್ಯ ಕೇಂದ್ರ ಹಿರಿಯ ಆರೋಗ್ಯ ಸಹಾಯಕರು, ಬಲ್ನಾಡು ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆ ಶಶಿಕಲಾ ಅಂಗನವಾಡಿ ಕಾರ್ಯಕರ್ತರು ಉಪಸ್ಥಿತರಿದ್ದರು.