





ಪುತ್ತೂರು: ಬನ್ನೂರಿನ ಬನ್ನೂರುಗುತ್ತು ಬಳಿಯ ಶ್ರೀ ಮಹಾಲಕ್ಷ್ಮೀ ಮಂದಿರದಲ್ಲಿ ಶ್ರೀ ದೇವರ ಬಿಂಬ ಪ್ರತಿಷ್ಠಾ ದಿನ ಕಾರ್ಯಕ್ರಮ ಜ.21ರಂದು ನಡೆಯಿತು.


ಅರ್ಚಕ ರಘುರಾಮ ಭಟ್ ಅವರ ಪುರೋಹಿತ್ವದಲ್ಲಿ ಪೂಜಾ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ ಗಣಪತಿ ಹೋಮ, ಪಂಚಾಮೃತ ಅಭಿಷೇಕ, ಕಲಶಾಭಿಷೇಕ, ಮಹಾಪೂಜೆ ನಡೆಯಿತು. ಭಜನಾ ಕಾರ್ಯಕ್ರಮದ ಬಳಿಕ ಮಹಾಪೂಜೆ ನಡೆಯಿತು. ಈ ಸಂದರ್ಭ ಶ್ರೀ ಶಿವಪಾರ್ವತಿ ಮಂದಿರದ ಅಧ್ಯಕ್ಷ ವಿಶ್ವನಾಥ ಗೌಡ, ಕಾರ್ಯದರ್ಶಿ ಮೋಹನ್ ಜೈನ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.














