ಪುತ್ತೂರು: ಬನ್ನೂರು ಗ್ರಾಮದ ಅಲುಂಬುಡ ಎಂಬಲ್ಲಿ ನವೀಕೃತಗೊಂಡ ಅಲುಂಬುಡ ಅನುಗ್ರಹ ನಿಲಯದಲ್ಲಿ ಜ.1ರಂದು ಶ್ರೀ ಕಲ್ಲುರ್ಟಿ, ಶ್ರೀ ರಕ್ತೇಶ್ವರಿ, ಗುಳಿಗ ದೈವಗಳ ನೇಮೋತ್ಸವ ನಡೆಯಿತು.
ಬೆಳಿಗ್ಗೆ ಗಣಪತಿ ಹೋಮ, ಆಶ್ಲೇಷ ಬಲಿ, ನಾಗತಂಬಿಲ, ದೈವಗಳಿಗೆ ತಂಬಿಲ ನಡೆದ ಬಳಿಕ ರಾತ್ರಿ ನೇಮೋತ್ಸವ ನಡೆಯಿತು. ಸುದ್ದಿ ಯು ಟ್ಯೂಬ್ ಚಾನೆಲ್ನಲ್ಲಿ ನೇಮೋತ್ಸವವನ್ನು ನೇರಪ್ರಸಾರ ಮಾಡಲಾಗಿತ್ತು.