ಪುತ್ತೂರು: ವಿಶೇಷ ಕಾರಣಿಕ ಹೊಂದಿರುವ ಸಂಟ್ಯಾರು ಕಲ್ಲಕಟ್ಟ ಶ್ರೀ ರಾಜಗುಳಿಗ ಸಾನಿಧ್ಯದ ಪ್ರಧಾನ ಕಾರ್ಯದರ್ಶಿಗಳು ಅಯ್ಯಪ್ಪ ಭಕ್ತರಾದ ನವೀನ್ ಸಾಲಿಯಾನ್ ರವರ ನೇತೃತ್ವದಲ್ಲಿ 14 ಮಂದಿ ಶ್ರೀ ಅಯ್ಯಪ್ಪ ಸ್ವಾಮಿಯ ಮಾಲೆ ಹಾಕಿ 48 ದಿನಗಳ ಕಾಲ ಶ್ರೀ ರಾಜಗುಳಿಗನ ಸಾನಿಧ್ಯದಲ್ಲಿ ಇದ್ದು ಶಬರಿಮಲೆಗೆ ಹೋಗಿ ಬಂದ ಬಳಿಕ ರಾಜಗುಳಿಗ ಸಾನಿಧ್ಯಕ್ಕೆ ಶ್ರೀ ರಾಜಗುಳಿಗ ಅಯ್ಯಪ್ಪ ಭಕ್ತರು ಗೋಡ್ರೆಜ್‌ನ್ನು ಕೊಡುಗೆಯಾಗಿ ನೀಡಿದ್ದಾರೆ.
ಸಾನಿಧ್ಯದ ಆಡಳಿತ ಸಮಿತಿ ಅಧ್ಯಕ್ಷ ರಾಧಾಕೃಷ್ಣ ರೈ ಕುರಿಯ ಏಳ್ನಾಡುಗುತ್ತು ರವರ ಸಮಕ್ಷಮ ಸಾನಿಧ್ಯಕ್ಕೆ ಒಪ್ಪಿಸಿದರು. ಈ ಸಂದರ್ಭದಲ್ಲಿ ಸಮಿತಿ ಪದಾಧಿಕಾರಿಗಳು, ಸದಸ್ಯರು ಹಾಗೂ ಊರಿನ ಭಕ್ತರು ಉಪಸ್ಥಿತರಿದ್ದರು. ಎಸ್ ಮಾಧವ ರೈ ಕುಂಬ್ರ ಸ್ವಾಗತಿಸಿ, ಕಿರಣ್ ರೈ ಪುಂಡಿಕಾಯಿ ವಂದಿಸಿದರು.