ಉಪ್ಪಿನಂಗಡಿ: ಅಯೋಧ್ಯೆ ಶ್ರೀ ರಾಮ ಮಂದಿರದಲ್ಲಿ ಬಾಲ ರಾಮನ ಪ್ರತಿಷ್ಠೆಯಾಗಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಉಪ್ಪಿನಂಗಡಿಯ ಶ್ರೀ ಮಾಧವ ಶಿಶು ಮಂದಿರದಲ್ಲಿ ಪುಟಾಣಿಗಳು ಶ್ರೀ ರಾಮನ ವೇಷ ಧರಿಸಿ ಶ್ರೀ ರಾಮನಿಗೆ ಪೂಜೆ ಸಲ್ಲಿಸಿದರು.
ಶಿಶು ಮಂದಿರದ ಪೋಷಕಿ ಅಕ್ಷತಾ ಗೌರವ್ ನಾಯಕ್ ಕರಾಯಕಾರ್ಸ್‌ರವರು ಶ್ರೀ ರಾಮನ ಚಿತ್ರವನ್ನು ರಂಗೋಲಿಯಲ್ಲಿ ಆಕರ್ಷಕವಾಗಿ ಬಿಡಿಸಿದ್ದರು. ಶ್ರೀ ರಾಮನ ವೇಷ ಧರಿಸಿದ ಮಕ್ಕಳು ರಂಗೋಲಿ ಚಿತ್ರಕ್ಕೆ ಹಣತೆಯ ದೀಪ ಬೆಳಗಿಸಿ ಪೂಜೆ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಪೋಷಕ ಸಂಘದ ಅಧ್ಯಕ್ಷೆ ಶ್ರೀಮತಿ ಶ್ರೀದೇವಿ ಗೌತಮ್, ಉಪಾಧ್ಯಕ್ಷೆ ಶ್ರೀಮತಿ ಭವ್ಯ , ಶಿಶುಮಂದಿರಗಳ ಪರಿವೀಕ್ಷಕಿ ವೀಣಾ ಸರಸ್ವತಿ , ಶಿಶು ಮಂದಿರದ ಮಾತಾಜಿಗಳಾದ ಚೈತ್ರಾ , ಕಾಂತಿಮಣಿ, ಚಂದ್ರಾವತಿ ಉಪಸ್ಥಿತರಿದ್ದರು.