ರಾಜಶೇಖರ್ ಜೈನ್ ನಾಮಪತ್ರ ತಿರಸ್ಕೃತ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ಹಿನ್ನೆಲೆ :ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಮುಂದೂಡಿಕೆ

0

ಪುತ್ತೂರು:ಪುತ್ತೂರು ಮತ್ತು ಕಡಬ ತಾಲೂಕಿನ 68 ಗ್ರಾಮಗಳ ವ್ಯಾಪ್ತಿಯನ್ನು ಹೊಂದಿರುವ ಪುತ್ತೂರು ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ (ಪಿಎಲ್‌ಡಿ)ಬ್ಯಾಂಕ್‌ಗೆ ಮುಂದಿನ 5 ವರ್ಷಗಳ ಅವಧಿಯ ನೂತನ ಆಡಳಿತ ಮಂಡಳಿಗೆ 14 ಮಂದಿ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದು ಜ.22ರಂದು ನೂತನ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಿಗದಿಯಾಗಿದ್ದ ನಡುವೆಯೇ, ಆಡಳಿತ ಮಂಡಳಿ ಚುನಾವಣೆಯಲ್ಲಿ ಸ್ಪರ್ಧೆ ಬಯಸಿದ್ದ ರಾಜಶೇಖರ್ ಜೈನ್ ಅವರ ನಾಮಪತ್ರವನ್ನು ತಿರಸ್ಕೃತಗೊಳಿಸಿರುವುದನ್ನು ಅಂಗೀಕರಿಸುವಂತೆ ಹೈಕೋರ್ಟ್ ನೀಡಿದ್ದ ಆದೇಶದ ಹಿನ್ನೆಲೆಯಲ್ಲಿ ಉದ್ದೇಶಿತ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆಯನ್ನು ಮುಂದೂಡಲಾಗಿದೆ.ಚುನಾವಣೆ ನಡೆಸದೆ ಇರುವ ಕುರಿತು ಸಮರ್ಪಕ ದಾಖಲೆ ನೀಡಿ,ಕಾರಣದೊಂದಿಗೆ ಹಿಂಬರಹ ನೀಡುವಂತೆ ನೂತನವಾಗಿ ಆಯ್ಕೆಯಾಗಿರುವ 14 ಮಂದಿ ನಿರ್ದೇಶಕರು, ಬ್ಯಾಂಕಿನ ಚುನಾವಣಾಧಿಕಾರಿಗೆ ಕಾರಣ ಕೇಳಿ ಮನವಿ ಸಲ್ಲಿಸಿದ್ದಾರೆ.ಈ ನಡುವೆ,ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮೇಲಾಧಿಕಾರಿಗಳ ಮೌಖಿಕ ಸೂಚನೆಯಂತೆ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಅನಿಧಿಷ್ಟಾವಧಿಗೆ ಮುಂದೂಡಲಾಗಿದೆ ಎಂದು ಸಭಾ ನಡವಳಿಯಲ್ಲಿ ಚುನಾವಣಾಽಕಾರಿಯವರು ಉಲ್ಲೇಖಿಸಿದ್ದಾರೆ.


ಪುತ್ತೂರು ಪಿಎಲ್‌ಡಿ ಬ್ಯಾಂಕಿಗೆ ಮುಂದಿನ ಐದು ವರ್ಷಗಳ ಅವಽಗೆ ನೂತನ ಆಡಳಿತ ಮಂಡಳಿಗೆ ಸಹಕಾರ ಭಾರತಿಯಿಂದ 12 ಮಂದಿ ಹಾಗೂ ಕಾಂಗ್ರೆಸ್ ಬೆಂಬಲಿತ ಇಬ್ಬರು ಸೇರಿದಂತೆ 14 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದರು.ಬ್ಯಾಂಕಿನ ಚುನಾವಣಾಧಿಕಾರಿಯಾಗಿರುವ ಸಹಕಾರ ಸಂಘಗಳ ಸಹಾಯಕ ನಿಬಂಧಕ ರಘು ಎಸ್.ಎಂ.ಅವರು ಜ.13ರಂದು ಅವಿರೋಧ ಆಯ್ಕೆಯನ್ನು ಘೋಷಿಸಿದ್ದರು.ಈ ನಡುವೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ಕೋಡಿಂಬಾಡಿ ವಲಯದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರಾಜಶೇಖರ ಜೈನ್, ಅರಿಯಡ್ಕ ವಲಯ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಅಶೋಕ್ ರೈ ದೇರ್ಲ ಮತ್ತು ಬಂಟ್ರ ವಲಯದ ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರ್ ಗೌಡ ಅವರ ನಾಮಪತ್ರ ‘ಕ್ರಮಬದ್ಧವಾಗಿಲ್ಲ’ ಎಂದು ಚುನಾವಣಾಽಕಾರಿ ತಿರಸ್ಕರಿಸಿದ್ದರು.ಇದರ ವಿರುದ್ಧ ರಾಜಶೇಖರ ಜೈನ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.ಅವರ ರಿಟ್ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿದ್ದ ಹೈಕೋರ್ಟ್, ಅವರ ನಾಮಪತ್ರ ತಿರಸ್ಕರಿಸಿದ್ದ ಚುನಾವಣಾಽಕಾರಿಯವರ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿತ್ತಲ್ಲದೆ,ಅವರ ನಾಮಪತ್ರವನ್ನು ಅಂಗೀಕರಿಸುವಂತೆ ನಿರ್ದೇಶನ ನೀಡಿತ್ತು.ರಿಟ್ ಅರ್ಜಿಯ ಅಂತಿಮ -ಲಿತಾಂಶವನ್ನು ಇದು ಹೊಂದಿಕೊಂಡಿರುತ್ತದೆ ಎಂದೂ ಆದೇಶದಲ್ಲಿ ಹೈಕೋರ್ಟ್ ಉಲ್ಲೇಖ ಮಾಡಿತ್ತು.


ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆಗೆ ನಿರ್ದೇಶಕರಿಗೆ ನೋಟೀಸ್:
ಬ್ಯಾಂಕಿನ ಆಡಳಿತ ಮಂಡಳಿಗೆ ನೆಲ್ಯಾಡಿ(ಸಾಮಾನ್ಯ)-ಹಾಲಿ ಅಧ್ಯಕ್ಷ ಸಹಕಾರ ಭಾರತಿಯ ಭಾಸ್ಕರ ಎಸ್ ಗೌಡ ಇಚ್ಲಂಪಾಡಿ,ಪುತ್ತೂರು(ಸಾಮಾನ್ಯ)-ಸಹಕಾರ ಭಾರತಿಯ ಸುಜಾತರಂಜನ್ ರೈ, ಬೀಡು,ಸಾಲಗಾರರಲ್ಲದ ಕ್ಷೇತ್ರದಿಂದ(ಸಾಮಾನ್ಯ)-ಸಹಕಾರ ಭಾರತಿಯ ಯುವರಾಜ್ ಪೆರಿಯತ್ತೋಡಿ,ಕೆದಂಬಾಡಿ(ಸಾಮಾನ್ಯ)-ಸಹಕಾರ ಭಾರತಿಯ ಯತೀಂದ್ರ ಕೊಚ್ಚಿ,ಬೆಟ್ಟಂಪಾಡಿ(ಸಾಮಾನ್ಯ)-ಸಹಕಾರ ಭಾರತಿಯ ಪ್ರವೀಣ್ ರೈ ಪಂಜೊಟ್ಟು, ಅರಿಯಡ್ಕ(ಸಾಮಾನ್ಯ)-ಕಾಂಗ್ರೆಸ್ ಬೆಂಬಲಿತ ವಿಕ್ರಮ್ ರೈ ಸಾಂತ್ಯ, ಕೋಡಿಂಬಾಡಿ(ಸಾಮಾನ್ಯ)-ಸಹಕಾರ ಭಾರತಿಯ ಬಾಳಪ್ಪ ಯಾನೆ ಸುಂದರ ಪೂಜಾರಿ ಬಡಾವು,ಬೆಳಂದೂರು(ಮಹಿಳೆ)-ಸಹಕಾರ ಭಾರತಿಯ ಚಂದ್ರಾವತಿ ಅಭಿಕಾರ್,ಕಡಬ(ಮಹಿಳೆ)-ಸಹಕಾರ ಭಾರತಿಯ ಸ್ವಾತಿ ರೈ ಆರ್ತಿಲ,ನರಿಮೊಗರು(ಪರಿಶಿಷ್ಟ ಜಾತಿ)-ಸಹಕಾರ ಭಾರತಿಯ ಬಾಬು ಮುಗೇರ,ಬಲ್ಯ(ಹಿಂದುಳಿದ ವರ್ಗ ಎ)-ಸಹಕಾರ ಭಾರತಿಯ ರಾಜು ಮೋನು ಪಿ.ಉಳಿಪು,ಉಪ್ಪಿನಂಗಡಿ(ಸಾಮಾನ್ಯ)-ಸಹಕಾರ ಭಾರತಿಯ ಕುಶಾಲಪ್ಪ ಗೌಡ ಅನಿಲ,ಅಲಂಕಾರು(ಪ.ಪಂಗಡ)-ಕಾಂಗ್ರೆಸ್ ಬೆಂಬಲಿತ ನಾರಾಯಣ ನಾಯ್ಕ ಏಣಿತ್ತಡ್ಕ, ಬಂಟ್ರ(ಹಿಂದುಳಿದ ವರ್ಗ ಬಿ)-ಸಹಕಾರ ಭಾರತಿಯಿಂದ ಚೆನ್ನಕೇಶವರವರು ನೂತನ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.ಎಲ್ಲ 14 ಸ್ಥಾನಗಳಿಗೂ ಅವಿರೋಧ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ನೂತನ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಜ.22ರಂದು ನಡೆಸುವ ಕುರಿತು ಚುನಾವಣಾಧಿಕಾರಿಯವರು ನೂತನ ನಿರ್ದೇಶಕರಿಗೆ ರಿಜಿಸ್ಟರ್ ನೋಟೀಸ್ ಮಾಡಿದ್ದರು.ಅದರಂತೆ ನೂತನ ನಿರ್ದೇಶಕರು ಜ.22ರಂದು ಬ್ಯಾಂಕಿಗೆ ಆಗಮಿಸಿದ್ದರು.ಈ ವೇಳೆ, ಹೈಕೋರ್ಟ್ ಆದೇಶ ಮತ್ತು ಬಳಿಕ ಈ ಕುರಿತು ಮೇಲಾಧಿಕಾರಿಗಳು ನೀಡಿರುವ ಮೌಖಿಕ ಸೂಚನೆ ಹಿನ್ನೆಲೆಯಲ್ಲಿ ಇಂದು ಅಧ್ಯಕ್ಷ,ಉಪಾಧ್ಯಕ್ಷರ ಚುನಾವಣೆ ನಡೆಸಲಾಗುತ್ತಿಲ್ಲ ಎಂದು ಚುನಾವಣಾಧಿಕಾರಿಯವರು ನಿರ್ದೇಶಕರಿಗೆ ತಿಳಿಸಿದರು.


ಕಾರಣ ನೀಡಿ-ನಿರ್ದೇಶಕರಿಂದ ಚುನಾವಣಾಧಿಕಾರಿಗೆ ಮನವಿ:
ಈ ಬೆನ್ನಲ್ಲೇ 14 ಮಂದಿ ನೂತನ ನಿರ್ದೇಶಕರು ಸಹಿ ಮಾಡಿ ಚುನಾವಣಾಧಿಕಾರಿಯವರಿಗೆ ಮನವಿಯೊಂದನ್ನು ನೀಡಿ,ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯದೇ ಇರುವ ಕುರಿತು ಕಾರಣ ಕೇಳಿ, ಸಮರ್ಪಕ ದಾಖಲೆಗಳನ್ನು ನೀಡಿ, ಕಾರಣದೊಂದಿಗೆ ಹಿಂಬರಹ ನೀಡುವಂತೆ ವಿನಂತಿಸಿದ್ದಾರೆ.


ಸಭಾ ನಡವಳಿ:
ನೂತನ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆ ಸಂಬಂಧ ಬ್ಯಾಂಕಿನ ಆಡಳಿತ ಮಂಡಳಿ ಸಭಾಂಗಣದಲ್ಲಿ ಚುನಾವಣಾಽಕಾರಿಯವರ ಉಪಸ್ಥಿತಿಯಲ್ಲಿ ನಿರ್ದೇಶಕರ ಸಭೆ ನಡೆಯಿತು.ರಾಜಶೇಖರ್ ಜೈನ್ ಅವರ ನಾಮಪತ್ರ ತಿರಸ್ಕಾರ ವಿಚಾರದಲ್ಲಿ ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶ ಹಾಗೂ ಓರಲ್ ಆದೇಶಗಳ ಬಗ್ಗೆ ಮುಂದಿನ ಯಾವ ಕ್ರಮ ಅನುಸರಿಸಬೇಕು ಎಂಬ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡುವಂತೆ ಜ.18ರಂದು ರಾಜ್ಯ ಸಹಕಾರ ಚುನಾವಣಾ ಪ್ರಾಧಿಕಾರ ಬೆಂಗಳೂರ, ಜಿಲ್ಲಾ ಚುನಾವಣಾಧಿಕಾರಿಗಳಾದ ಸಹಕಾರ ಸಂಘಗಳ ಜಂಟಿ ನಿಬಂಧಕರು, ಮೈಸೂರು ಪ್ರಾಂತ್ಯ ಹಾಗೂ ಸಹಕಾರ ಸಂಘಗಳ ಉಪನಿಬಂಧಕರು ದ.ಕ.ಜಿಲ್ಲೆ ಮಂಗಳೂರು ಇವರಿಗೆ ಮನವಿ ಮಾಡಲಾಗಿದೆ.ಅಲ್ಲದೆ ಅಪರ ಸರ್ಕಾರಿ ವಕೀಲರು ಬೆಂಗಳೂರು ಇವರಿಗೆ ದಾಖಲೆಗಳ ಸಮೇತ ಮನವಿ ಮಾಡಲಾಗಿದೆ.ನ್ಯಾಯಾಲಯದ ಮುಂದಿನ ತೀರ್ಪು ಆಗುವವರೆಗೂ, ಈ ನ್ಯಾಯಾಲಯದ ತೀರ್ಪು/ ಮಾರ್ಗದರ್ಶನವನ್ನು ನಿರೀಕ್ಷಿಸಿ ಬ್ಯಾಂಕಿನ ಮುಂದಿನ ಐದು ವರ್ಷಗಳ ಅವಧಿಗೆ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಅನಿಧಿಷ್ಟಾವಧಿ ಮುಂದೂಡಲು ಮೇಲ್ಕಂಡ ಅಧಿಕಾರಿಗಳು ಮೌಖಿಕವಾಗಿ ತಿಳಿಸಿರುವುದರಿಂದ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಅನಿಧಿಷ್ಟಾವಧಿವರೆಗೆ ಮುಂದೂಡಲು ತೀರ್ಮಾನಿಸಿ ಸಭೆಯನ್ನು ಮುಕ್ತಾಯಗೊಳಿಸಲಾಗಿದೆ ಎಂದು ಸಭಾ ನಡವಳಿಯಲ್ಲಿ ಉಲ್ಲೇಖಿಸಿ ಚುನಾವಣಾಽಕಾರಿಯವರು ಸಹಿ ಮಾಡಿದ್ದಾರೆ.ಸಭೆಯಲ್ಲಿ ನೂತನ ನಿರ್ದೇಶಕರು ಉಪಸ್ಥಿತರಿದ್ದರು.

ಚಂದ್ರಶೇಖರ್ ಗೌಡರ ರಿಟ್ ಅರ್ಜಿ ವಿಲೇಗೊಳಿಸಿದ ಹೈಕೋರ್ಟ್
ಬಂಟ್ರ ವಲಯ ಹಿಂದುಳಿದ ವರ್ಗ ಬಿ.ಮೀಸಲು ಸ್ಥಾನದಿಂದ ನಾಮಪತ್ರ ಸಲ್ಲಿಸಿ, ತಿರಸ್ಕೃತಗೊಂಡಿದ್ದ ಚಂದ್ರಶೇಖರ ಗೌಡ ಅವರೂ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು.ತಮ್ಮ ನಾಮಪತ್ರ ತಿರಸ್ಕರಿಸಿರುವುದಕ್ಕೆ ತಡೆಯಾಜ್ಞೆ ನೀಡಬೇಕು, ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿರುವ 14 ಮಂದಿಯ ಆಯ್ಕೆ ಆದೇಶವನ್ನು ಕ್ವ್ಯಾಶ್ ಮಾಡಬೇಕು,ತನ್ನ ನಾಮಪತ್ರ ಅಂಗೀಕಾರದ ಬಳಿಕವೇ ಚುನಾವಣೆ ನಡೆಸಬೇಕು ಎಂದು ಅವರು ನ್ಯಾಯಪೀಠವನ್ನು ಕೋರಿದ್ದರು.ಆದರೆ ನ್ಯಾಯಪೀಠ ಇದಕ್ಕೆ ಅನುಮತಿಸದೆ ರಿಟ್ ಅರ್ಜಿಯನ್ನು ಮರುದಿನವೇ ವಿಲೇವಾರಿ ಮಾಡಿದೆ.

LEAVE A REPLY

Please enter your comment!
Please enter your name here