ನಾಪತ್ತೆಯಾದ ಅಲಂಕಾರು 108 ಆರೋಗ್ಯ ಕವಚ ಆಂಬುಲೆನ್ಸ್

0

ಆಲಂಕಾರು: ಆಲಂಕಾರು 108 ಆರೋಗ್ಯ ಕವಚ ಕಳೆದ 15 ದಿವಸಗಳಿಂದ ನಾಪತ್ತೆಯಾಗಿದ್ದು, ಜನ ಸಾಮಾನ್ಯರು, ರೋಗಿಗಳು ಸಂಕಷ್ಟ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ.


ಅಲಂಕಾರು ಗ್ರಾಮ ಪಂಚಾಯತ್ ನಲ್ಲಿ ಕಳೆದ 10 ವರ್ಷಗಳಿಂದ ಆರೋಗ್ಯ ಕವಚ 108 ಆಂಬ್ಯುಲೆನ್ಸ್ ಸಾರ್ವಜನಿಕರಿಗೆ ತುರ್ತು ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕರೆದೊಯ್ಯುವ ಕೆಲಸವಾಗುತ್ತಿತ್ತು. ಜ.7ರಂದು ರಿಪೇರಿ ಗೆಂದು ಹೋದ ಆಂಬ್ಯುಲೆನ್ಸ್ 15 ದಿನವಾದರೂ ಇನ್ನೂ ಆಲಂಕಾರಿಗೆ ಬಂದಿಲ್ಲ, ಆಲಂಕಾರು, ಕಾಣಿಯೂರು, ಸವಣೂರು, ಬಲ್ಯ, ರಾಮಕುಂಜ, ಹಳೆನೇರೆಂಕಿ ,ಕುಂತೂರು, ಪೆರಾಬೆ, ಮಾದೇರಿ, ಮುಂತಾದ ಹಲವು ಕಡೆ ದಿನದ 24 ಗಂಟೆ ಸೇವೆ ನೀಡುತ್ತಿದ್ದು, ಆಂಬ್ಯುಲೆನ್ಸ್ ಇನ್ನೂ ರಿಪೇರಿಯಾಗಿ ಬಾರದೆ ಇರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಆಲಂಕಾರಿನಲ್ಲಿ ಸೇವೆ ಸಲ್ಲಿಸುತ್ತಿದ್ದ ಸಿಬ್ಬಂದಿಗಳು ಇದೀಗ ಕಡಬ ಮತ್ತು ಸುಬ್ರಮಣ್ಯ ಆಂಬ್ಯುಲೆನ್ಸ್ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ತಿಂಗಳು ಕಡಬ ಮತ್ತು ಪುತ್ತೂರಿನ ಆಂಬ್ಯುಲೆನ್ಸ್ ಟೈರ್ ಇಲ್ಲದೆ ನಿಂತಾಗ ಕಡಬ ಮತ್ತು ಪುತ್ತೂರುನಿಂದ ಹಲವು ರೋಗಿಗಳನ್ನು ಅಲಂಕಾರು ಆಂಬ್ಯುಲೆನ್ಸ್ ನಲ್ಲೇ ಕರೆದೊಯ್ದು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಮತ್ತು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಲಂಕಾರು ಆಂಬ್ಯುಲೆನ್ಸ್ ನ ಟೈರ್ 5700km ರನ್ ಆಗಿ ತುಂಬಾ ಸವೆದಿದ್ದು ಹೊಸ ಟೈಯರ್ ಅಳವಡಿಸುವ ಅವಶ್ಯಕತೆಯೂ ಇದೆ.


ಆರೋಗ್ಯ ಕವಚ ಸಿಬ್ಬಂದಿಗಳಿಗೆ ಸಕಾಲದಲ್ಲಿ ಸರಿಯಾದ ವೇತನವು ಸಿಗುತ್ತಿಲ್ಲ ಎನ್ನುವ ಆರೋಪಗಳೂ ಕೇಳಿಬರುತ್ತಿದೆ. 16 ವರ್ಷಗಳಿಂದ 2 ಪಾಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಗಳು ಜನವರಿ ತಿಂಗಳಿನಿಂದ ಮೂರು ಪಾಳಿಯಲ್ಲಿ ಕೆಲಸ ನಿರ್ವಹಿಸಲು ಸರಕಾರ ತಿಳಿಸಿದೆ ಎಂದು ಸಿಬ್ಬಂದಿಗಳು ತಿಳಿಸಿದ್ದಾರೆ.


ಆರೋಗ್ಯ ಕವಚ 108 ಬಡವರಪಾಲಿಗೆ ಆಶಾದಾಯಕವಾಗಿದೆ ಇದರಿಂದ ಜನರಿಗೆ ತುಂಬಾ ಪ್ರಯೋಜನ ವಾಗುತ್ತದೆ ಸಂಬಂಧಪಟ್ಟ ಇಲಾಖೆಯವರು ಅದಷ್ಟು ಬೇಗ ಬದಲಿ ವ್ಯವಸ್ಥೆ ಮಾಡಲು ಒತ್ತಾಯಿಸುತ್ತೇನೆ.
ಕುಂತೂರು ಪೆರಾಬೆ ಪರಿಸರದಲ್ಲಿ ದಿನಂಪ್ರತಿ ರಸ್ತೆ ಅಪಘಾತಗಳು ಹೆಚ್ಚಾಗುತ್ತಿದ್ದು ತುರ್ತು ಅವಶ್ಯಕತೆಗೆ ಆಂಬುಲೆನ್ಸ್ ಸೇವೆ ಇಲ್ಲದೆ ಪರದಾಡುವ ಸ್ಥಿತಿ ಎದುರಾಗಿದೆ.ಆಲಂಕಾರು ಆಂಬುಲೆನ್ಸ್ ತಿಂಗಳುಗಟ್ಟಲೆ ಕೆಟ್ಟು ನಿಂತರೂ ರಿಪೇರಿ ಮಾಡದೆ ಇರುವುದು ದುರದೃಷ್ಟಕರ.ರಿಪೇರಿ ಮಾಡಲು ಸಮಸ್ಯೆ ಇದ್ದಲ್ಲಿ ಸದ್ರಿ ಜಾಗಕ್ಕೆ ಬದಲಿ ವಾಹನ ವ್ಯವಸ್ಥೆಯಾಗಲಿ.
ಫಯಾಝ್ ಗ್ರಾ.ಪಂ ಸದಸ್ಯರು ಪೆರಾಬೆ.

LEAVE A REPLY

Please enter your comment!
Please enter your name here