ಪುತ್ತೂರು: ಬೆಂಗಳೂರಿನ ಖ್ಯಾತ ವಿಮಾನಯಾನ ತರಬೇತಿ ಸಂಸ್ಥೆ ಸ್ಕೈ ಬರ್ಡ್ ಏವಿಯೇಷನ್ ಪುತ್ತೂರಿನ ಅಧಿಕೃತ ಪ್ರಾಂಚೈಸಿ ಸಂಸ್ಥೆಯು ಎ.ಪಿ.ಎಂ.ಸಿ ರಸ್ತೆಯ ಮಾನೈ ಅರ್ಕ್ ಕಟ್ಟಡದಲ್ಲಿ ಶ್ರೀ ಪ್ರಗತಿ ವಿಸ್ತಾರ ಏವಿಯೇಷನ್ ಆಂಡ್ ಮ್ಯಾನೇಜ್‌ಮೆಂಟ್ ಎಂಬ ಹೆಸರಿನೊಂದಿಗೆ ಎರಡನೇ ಬ್ಯಾಚ್ 22 ವಿದ್ಯಾರ್ಥಿಗಳೊಂದಿಗೆ ಜ.23ರಂದು ಪ್ರಾರಂಭಗೊಂಡಿತು.
ಆಡಳಿತಾಧಿಕಾರಿ ಸ್ನಿಗ್ಧ ಆಳ್ವ ಹಾಗೂ ಏವಿಯೇಷನ್ ಟ್ರೈನರ್ ಅರುಣ್ ಜೋಸ್‌ರವರು ಚಾಲನೆಯನ್ನು ನೀಡಿದರು. 12 ವಿದ್ಯಾರ್ಥಿಗಳುInternational Diploma In Airline & Airport Operations(IDAAO) ಹಾಗೂ 10 ವಿದ್ಯಾರ್ಥಿಗಳು International Diploma in Airport Ground Handling (IDAGH) ತರಗತಿಗಳಿಗೆ ದಾಖಲಾಗಿರುತ್ತಾರೆ. ಇನ್ನೂ ಎರಡನೇ ಬ್ಯಾಚ್‌ಗೆ ದಾಖಲಾಗಲು ಇಚ್ಚಿಸುವ ವಿದ್ಯಾರ್ಥಿಗಳು ಇದೇ ಜನವರಿ 31ರ ಒಳಗೆ ಈ ಬ್ಯಾಚ್‌ಗೆ ದಾಖಲಾಗಲು ಅವಕಾಶವಿರುವುದಾಗಿ ಪ್ರಕಟಣೆಯಲ್ಲಿ ಆಡಳಿತಾಧಿಕಾರಿ ಸ್ನಿಗ್ಧ ಆಳ್ವರವರು ತಿಳಿಸಿರುತ್ತಾರೆ.