ಪುತ್ತೂರು: ಸರ್ವೆ ಗ್ರಾಮದ ಎಲಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶ್ರೀ ದೇವರ ತೃತೀಯ ಪ್ರತಿಷ್ಠಾ ವರ್ಧಂತಿ ಹಾಗೂ ಉತ್ಸವ ‘ ಎಲಿಯ ಜಾತ್ರೆ’ ಫೆ.6 ಮತ್ತು 7 ರಂದು ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ದೇವಳದ ಎಲ್ಲಾ ಸಮಿತಿಗಳ ಹಾಗೂ ಊರ ಕೂಡುಕಟ್ಟಿನ ಯಜಮಾನತ್ವದಲ್ಲಿ ನಡೆಯಲಿದೆ.
ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಜ.23 ರಂದು ಶ್ರೀ ಕ್ಷೇತ್ರದಲ್ಲಿ ನಡೆಯಿತು. ದೇವಳದ ಪ್ರಧಾನ ಅರ್ಚಕ ನಾಗೇಶ ಕಣ್ಣಾರಾಯರವರು ಪೂಜಾ ವಿಧಿ ವಿಧಾನಗಳೊಂದಿಗೆ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಧಾರ್ಮಿಕ ಪರಿಷತ್ತ್ನ ಜಿಲ್ಲಾ ಸದಸ್ಯ ಶಿವನಾಥ ರೈ ಮೇಗಿನಗುತ್ತು, ಜಾತ್ರಾ ಸಮಿತಿ ಅಧ್ಯಕ್ಷ ಶಿವರಾಮ ರೈಸೊರಕೆ, ಜಾತ್ರಾ ಸಮಿತಿ ಗೌರವ ಅಧ್ಯಕ್ಷ ರಾಧಾಕೃಷ್ಣ ರೈ ಬೂಡಿಯಾರ್, ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಕರುಣಾಕರ ಗೌಡ ಎಲಿಯ, ಜಾತ್ರಾ ಸಮಿತಿ ಸಂಚಾಲಕ ಲಕ್ಷ್ಮೀನಾರಾಯಣ ಕಡಂಬಳಿತ್ತಾಯ ಕೆದ್ಲಾಯಮೂಲೆ, ಮುಂಡೂರು ಗ್ರಾಪಂ ಅಧ್ಯಕ್ಷ ಚಂದ್ರಶೇಖರ ಎನ್.ಎಸ್.ಡಿ, ದೈವಗಳ ನೇಮೋತ್ಸವ ಸಮಿತಿ ಸಂಚಾಲಕ ಉಮೇಶ್ ಸುವರ್ಣ ಸೊರಕೆ, ಸುನೀತ ಶಶಿಕಿರಣ್ ರೈ ಸೊರಕೆ, ಯಶೋಧಾ ಡಿ ನೆಕ್ಕಿಲು, ಆನಂದ ರಾವ್ ಸೊರಕೆ, ಬಾಲಕೃಷ್ಣ ಮುಡಂಬಡಿತ್ತಾಯ ಸೊರಕೆ, ಜಯಾನಂದ ರೈ ಮಿತ್ರಂಪಾಡಿ, ಸದಾಶಿವ ಶೆಟ್ಟಿ ಪಟ್ಟೆ, ಉದಯ ಕುಮಾರ್ ರೈ ಬಾಕುಡ, ರಾಮಯ್ಯ ರೈ ಎನ್.ತಿಂಗಳಾಡಿ, , ರಾಮಚಂದ್ರ ಸೊರಕೆ, ರಜನಿಕಾಂತ ಬಾಳಯ, ವಿಶ್ವನಾಥ ಶೆಟ್ಟಿ ಸಾಗು, , ರಾಧಾಕೃಷ್ಣ ರೈ ಚಾವಡಿ, ಸೂರ್ಯಪ್ರಸನ್ನ ರೈ ಎಂಡೆಸಾಗು, ರವಿನಾರಾಯಣ ಭಟ್ ಎಲಿಯ, ,ಸದಾಶಿವ ಕುಂಬ್ರ, ಮಜಿತ್ ಸುವರ್ಣ ಸೊರಕೆ, ಬಾಲಕೃಷ್ಣ ಮಡಿವಾಳ ಸೊರಕೆ, ಹರೀಶ್ ಮಾಡಾವು, ಕುಂಞ ಮುಗೇರ ನೇರೋಳ್ತಡ್ಕ, ಜಯಂತ ನೇರೋಳ್ತಡ್ಕ, ರಾಘವ ನೆಕ್ಕಿಲು, ಹರಿತ್ ನೆಕ್ಕಿಲು, ನಾಗಪ್ಪ ಕಡ್ಯ, ಸಂದೀಪ್ ಅರಿಯಡ್ಕ, ಪ್ರಸನ್ನ ರೈ ಮಜಲುಗದ್ದೆ, ಯೋಗೀಶ್ ಕಾವು ಮತ್ತಿತರರು ಉಪಸ್ಥಿತರಿದ್ದರು.