ಪುತ್ತೂರು: ಇಡ್ಕಿದು ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಮುಂದಿನ 5 ವರ್ಷಗಳ ಅವಧಿಗೆ ನಿರ್ದೇಶಕರ ಆಯ್ಕೆಯಲ್ಲಿ 4 ಮಂದಿ ಅವಿರೋಧ ಆಯ್ಕೆ ಸೇರಿದಂತೆ 12 ಸ್ಥಾನಗಳಲ್ಲಿಯೂ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಅಭ್ಯರ್ಥಿಗಳು ಜಯಭೇರಿ ಭಾರಿಸಿದ ಹಿನ್ನೆಲೆಯಲ್ಲಿ ಜ.23 ರಂದು ಪುತ್ತೂರು ಬಿಜೆಪಿ ಕಚೇರಿಯಲ್ಲಿ ನೂತನ ನಿರ್ದೇಶಕರನ್ನು ಅಭಿನಂದಿಸಿದರು.
ನೂತನವಾಗಿ ಆಯ್ಕೆಯಾದ ನಿರ್ದೇಶಕರಾದ ಸುಧಾಕರ್ ಶೆಟ್ಟಿ, ರಾಮ್ ಭಟ್, ನವೀನ್ ಕೆ ಪಿ ಆನಂದ ಕೆ, ಜಯಂತ, ಚಂದ್ರಹಾಸ, ಹೃಷಿಕೇಶ್ ಕೆಎಸ್, ವಿದ್ಯಾ ವಿಶ್ವನಾಥ್, ಪದ್ಮಾವತಿ, ಸತೀಶ್ ಕೆ, ಉಮೇಶ್, ಲೋಹಿತಾಶ್ವ ಅವರಿಗೆ ಪಕ್ಷದ ಶಲ್ಯ ಹೊದಿಸಿ ಗೌರವಿಸಲಾಯಿತು.
ಈ ಸಂದರ್ಭ ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರುಮಾರು, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಸನ್ನ ಮಾರ್ತ, ಜಿಲ್ಲಾ ಚುನಾವಣಾ ಸಹ ಅಧಿಕಾರಿ ಸಾಜ ರಾಧಾಕೃಷ್ಣ ಅಳ್ವಾ, ಗ್ರಾಮಾಂತರ ಮಂಡಲ ಉಪಾಧ್ಯಕ್ಷರಾದ ಹರಿಪ್ರಸಾದ್ ಯಾದವ್, ಮಂಡಲ ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲು, ನಗರ ಮಂಡಲ ಉಪಾಧ್ಯಕ್ಷರಾದ ಯುವರಾಜ್ ಪೆರಿಯತ್ತೋಡಿ, ಮಾಜಿ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ, ಇಡ್ಕಿದು ಶಕ್ತಿ ಕೇಂದ್ರ ಸಂಚಾಲಕರಾದ ನಾಗೇಶ್, ಕುಳ ಶಕ್ತಿ ಕೇಂದ್ರ ಸಂಚಾಲಕರಾದ ಪ್ರಶಾಂತ್ ಬರೆ, ಇಡ್ಕಿದು ಮಾಜಿ ಪಂಚಾಯತ್ ಅಧ್ಯಕ್ಷರು ಹಾಗೂ ಮಾಜಿ ಶಕ್ತಿ ಕೇಂದ್ರ ಸಂಚಾಲಕರಾದ ಸುಧೀರ್ ಕುಮಾರ್ ಶೆಟ್ಟಿ, ಕುಳಶಕ್ತಿ ಕೇಂದ್ರದ ಮಾಜಿ ಸಂಚಾಲಕರು ಪಂಚಾಯತ್ ಸದಸ್ಯರಾದ ಚಿದಾನಂದ ಪೆಲತ್ತಿಂಜ ಮತ್ತಿತರರು ಉಪಸ್ಥಿರಿದ್ದರು.