ನಗರಸಭೆ ವ್ಯಾಪ್ತಿಯ ವಾರ್ಡ್‌ಗಳಲ್ಲಿ ’ನಮ್ಮ ಸಂಸ್ಕೃತಿ ಸ್ವಚ್ಛತಾ ಸಂಸ್ಕೃತಿ’ ಅಭಿಯಾನ

0

ಪುತ್ತೂರು: “ನಮ್ಮ ಸಂಸ್ಕೃತಿ ಸ್ವಚ್ಛತಾ ಸಂಸ್ಕೃತಿ” ಎಂಬ ದ್ಯೇಯ ವಾಕ್ಯದಡಿ ನಗರಸಭಾ ಎಲ್ಲಾ ವಾರ್ಡ್‌ಗಳಲ್ಲಿ ಸ್ವಚ್ಛತಾ ಶ್ರಮದಾನದ ಮೂಲಕ ಜನ ಜಾಗೃತಿ ಮೂಡಿಸುವ ಸಲುವಾಗಿ ಜ.31ರವರೆಗೆ ನಡೆಯುವ ಅಭಿಯಾನದ ಅಂಗವಾಗಿ ಜ.23ಕ್ಕೆ ಕೃಷ್ಣನಗರ ಶಾಲೆಯಿಂದ ಮುಖ್ಯರಸ್ತೆಗಳಲ್ಲಿ ಸ್ವಚ್ಚತಾ ಅಭಿಯಾನ ನಡೆಸಿದರು.


ಕಾರ್ಯಕ್ರಮದಲ್ಲಿ ಸ್ಥಳೀಯ ವಾರ್ಡ್ ಸದಸ್ಯರು ಹಾಗೂ ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಕೃಷ್ಣನಗರ ಶಾಲಾ ಮುಖ್ಯಗುರು ಮತ್ತು ಶಿಕ್ಷಕರು, ಕೃಷ್ಣನಗರ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರು, ಕೆಮ್ಮಾಯಿ ವಿಷ್ಣು ಯುವಕ ವೃಂದದ ಅಧ್ಯಕ್ಷರು, ಸತ್ಯನಾರಾಯಣ ಪೂಜಾ ಸಮಿತಿ ಸದಸ್ಯರು, ಸ್ಥಳೀಯ ವಠಾರದ ನಿವಾಸಿಗಳು, ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಕುಮಾರ್ ಆಚಾರ್, ನಗರಸಭೆ ಸಿಬ್ಬಂದಿಗಳಾದ ಜಯಲಕ್ಷ್ಮಿ ಬೇಕಲ್, ಅಂಬಿಕಾ, ವೇಣುಗೋಪಾಲ್, ಶಾಲಾ ಮಕ್ಕಳು ಶ್ರಮದಾನದಲ್ಲಿ ಸಹಕರಿಸಿದರು.


ಒಂದು ದಿನಕ್ಕೆ ಸೀಮಿತವಾಗದಿರಲಿ ಜಾಗೃತಿ:
ಶ್ರಮದಾನವು ಒಂದು ದಿನಕ್ಕೆ ಸೀಮಿತವಾಗಿರದೆ, ಪ್ರತಿಯೊಂದು ನಾಗರಿಕರು ತಮ್ಮ ತಮ್ಮ ಮನೆಯಿಂದ ಸ್ವಚ್ಛತಾ ಅಭಿಯಾನ ಪ್ರಾರಂಭಿಸಿ ಕಸ ಎಲ್ಲೆಂದರಲ್ಲಿ ಎಸೆಯದೆ ಬೇರ್ಪಡಿಸಿ ತೊಟ್ಟಿಗೆ ಹಾಕುವ ಮೂಲಕ ಎಲ್ಲರಿಗೂ ಮಾದರಿಯಾಗುವಂತೆ ಮತ್ತು ಸ್ವಚ್ಛ ಹಾಗೂ ಸುಂದರ ಪುತ್ತೂರು ಕನಸು ನನಸಾಗಿಸುವಲ್ಲಿ ಸಹಕರಿಸಿ ಎಂದು ಅರಿವು ಮೂಡಿಸಲಾಯಿತು. ಈ ಸಂದರ್ಭದಲ್ಲಿ ಬಟ್ಟೆ ಕೈಚೀಲ ನೀಡಿ ಪ್ಲಾಸ್ಟಿಕ್ ದೂರ ಮಾಡಲು ಮತ್ತು ಡೇ ನಲ್ಮ್ ಯೋಜನೆ ಅರಿವು ಮೂಡಿಸಿದರು.

LEAVE A REPLY

Please enter your comment!
Please enter your name here