ಪುತ್ತೂರು: ಮರ್ಕಝುಲ್ ಹುದಾ ಮಹಿಳಾ ಕಾಲೇಜು ಕುಂಬ್ರ ಇವರ ವತಿಯಿಂದ ಮಾಹಿರಾ ಕಾನ್ಫರೆನ್ಸ್ ಹಾಗೂ ಬೃಹತ್ ಅಧ್ಯಯನ ತರಗತಿ ಜ.28ರಂದು ಪೂರ್ವಾಹ್ನ ಗಂಟೆ 10ಕ್ಕೆ ಕುಂಬ್ರ ಮರ್ಕಝ್ ಕ್ಯಾಂಪಸ್‌ನಲ್ಲಿ ನಡೆಯಲಿದೆ.
ಧಾರ್ಮಿಕ ವಿಧ್ವಾಂಸ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಅಧ್ಯಯನ ತರಗತಿ ನಡೆಸಿಕೊಡಲಿದ್ದಾರೆ. ಮರ್ಕಝುಲ್ ಹುದಾ ವಿದ್ಯಾಸಂಸ್ಥೆಯಲ್ಲಿ ಕಲಿತ ಮಾಹಿರಾ ಪದವೀಧರೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಮರ್ಕಝುಲ್ ಕಾಲೇಜು ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.