ನರಿಮೊಗರು: ಮುಖ್ಯ ರಸ್ತೆಯಲ್ಲಿ ಸ್ಪೀಡ್ ಬ್ರೇಕರ್ ಹಂಪ್ಸ್ ಅಳವಡಿಕೆ

0

ನಮ್ಮ ಮನವಿಗೆ ಶಾಸಕರಿಂದ ತಕ್ಷಣ ಸ್ಪಂದನೆ-ಪ್ರವೀಣ್ ಆಚಾರ್ಯ

ಪುತ್ತೂರು: ಪುತ್ತೂರು-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ನರಿಮೊಗರುವಿನಲ್ಲಿ ಅಪಘಾತ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸ್ಪೀಡ್ ಬ್ರೇಕರ್ ಹಂಪ್ಸ್‌ನ್ನು ಅಳವಡಿಸಲಾಗಿದೆ.

ನರಿಮೊಗರುವಿನಲ್ಲಿ ಅಪಘಾತಗಳು ನಡೆಯುತ್ತಿರುವ ಬಗ್ಗೆ ಮುಂಡೂರು ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಆಚಾರ್ಯ ನರಿಮೊಗರು ಹಾಗೂ ಮನು ಎಂ ರೈ ಅವರು ಶಾಸಕ ಅಶೋಕ್ ಕುಮಾರ್ ರೈ ಅವರ ಗಮನಕ್ಕೆ ತಂದಿದ್ದರು. ಇದಕ್ಕೆ ಸ್ಪಂದಿಸಿದ ಶಾಸಕ ಅಶೋಕ್ ಕುಮಾರ್ ರೈಯವರು ಸ್ಪೀಡ್ ಬ್ರೇಕರ್ ಹಂಪ್ ಅಳವಡಿಸಲು ಸೂಚನೆ ನೀಡಿದ್ದು ಅದರಂತೆ ಲೋಕೋಪಯೋಗಿ ಇಲಾಖೆಯವರು ಸ್ಪೀಡ್ ಬ್ರೇಕರ್ ಹಂಪ್ಸ್ ಅಳವಡಿಸಿದ್ದಾರೆ.

ಸ್ಥಳೀಯ ಸಮಸ್ಯೆಗೆ ತಕ್ಷಣ ಸ್ಪಂಧಿಸಿದ ಶಾಸಕ ಅಶೋಕ್ ಕುಮಾರ್ ರೈ ಮತ್ತು ಸ್ಪೀಡ್ ಬ್ರೇಕರ್ ಅಳವಡಿಸಿದ ಅಧಿಕಾರಿಗಳಾದ ಕಾನಿಷ್ಕ್ಚಂದ್ರ ಮತ್ತು ಎಇಇ ರಾಜೇಶ್ ರೈಯವರಿಗೆ ಪ್ರವೀಣ್ ಆಚಾರ್ಯ ನರಿಮೊಗರು ಅಭಿನಂದನೆ ಸಲ್ಲಿಸಿದ್ದಾರೆ.


LEAVE A REPLY

Please enter your comment!
Please enter your name here