ಉಪ್ಪಿನಂಗಡಿ: ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ಅಮ್ಮನವರ ದೇವಾಲಯಕ್ಕೆ ಲೋಕೋಪಯೋಗಿ ಇಲಾಖೆಯ ಸುಪರಿಡೆಂಟ್ ಎಂಜಿನಿಯರ್ ಗೋಕುಲ್ದಾಸ್ ಭೇಟಿ ನೀಡಿ ದೇವಾಲಯದ ರಥದ ಗುಣಮಟ್ಟ ಹಾಗೂ ನೇತ್ರಾವತಿ ಸಭಾಭವನದ ಮೊದಲ ಮಹಡಿ ಕಟ್ಟಡ ರಚನೆ ಕುರಿತಂತೆ ಪರಿಶೀಲನೆ ನಡೆಸಿದರು.
ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕೆ.ರಾಧಾಕೃಷ್ಣ ನಾಕ್ ಅವರನ್ನು ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಪುತ್ತೂರು ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ರಾಜೇಶ್ ರೈ, ಪ್ರಮೋದ್, ತೌಸೀಫ್, ಕಾನಿಷ್ಕ ಮತ್ತಿತರರು ಉಪಸ್ಥಿತರಿದ್ದರು. ದೇವಾಲಯದ ವ್ಯವಸ್ಥಾಪಕರಾದ ವೆಂಕಟೇಶ ರಾವ್, ಸಿಬ್ಬಂದಿ ಕೃಷ್ಣಪ್ರಸಾದ್ ಬಡಿಲ ಹಾಗೂ ಪದ್ಮನಾಭ ಸಹಕರಿಸಿದರು.