ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ಗಣರಾಜ್ಯೋತ್ಸವ ಆಚರಣೆ

0

ಪುತ್ತೂರು : ಸಂವಿಧಾನವು ಜಾರಿಗೆ ಬಂದು ಭಾರತವು ಗಣರಾಜ್ಯವಾದ ಸವಿನೆನಪಿಗಾಗಿ ನೆಹರುನಗರದ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ಜನವರಿ 26 ರಂದು ಗಣರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಧ್ವಜರೋಹಣವನ್ನು ನೆರವೇರಿಸಿ ಮಾತನಾಡಿದ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ವಸಂತಿ ಕೆ. ಇವರು, ಹಿರಿಯರು ಕಟ್ಟಿದ ದೇಶವನ್ನು ಮುನ್ನಡೆಸುವ ಮಹತ್ತರವಾದ ಜವಾಬ್ದಾರಿ ನಮ್ಮದಾಗಿದೆ ಎಂದು ಹೇಳಿ; ದೇಶ ಸೇವೆಗೆ ಬದ್ಧರಾಗಿ ಎಂದು ಮಕ್ಕಳಿಗೆ ಎಂಬ ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿವೇಕಾನಂದ ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕಾ ವಿಭಾಗದ ಪ್ರಾಧ್ಯಾಪಕರಾದ ಶ್ರೀಮತಿ ಮೋನಿಕಾ ಕೆ.ಪಿ ಇವರು; ತಂದೆ, ತಾಯಿ ಶಿಕ್ಷಕರೇ ಉತ್ತಮ ಸಾಮಾಜೀಕರಣಕ್ಕೆ ಕಾರಣಕರ್ತರು. ಅವರು ಹೇಳಿದ ಮಾರ್ಗ ದಲ್ಲಿ ನಡೆಯಿರಿ ಎಂದು ಮಕ್ಕಳಿಗೆ ಹಿತನುಡಿಗಳನ್ನಾಡಿದರು. ನೀವು ಎಂದೂ ಆಲಸಿಗಳಾಗಬೇಡಿ. ಬಿಡುವಿಲ್ಲದವರಾಗಿ, ದೇಶಸೇವಾ ಮನೋಭಾವವನ್ನು ಬೆಳೆಸಿಕೊಳ್ಳಿ, ಎನ್.ಸಿ.ಸಿ ಯಲ್ಲಿ ಸಮಯಪ್ರಜ್ಞೆ, ತಾಳ್ಮೆ, ತ್ಯಾಗ ಮುಂತಾದ ಗುಣಗಳನ್ನು ಕಲಿಯಲು ಸಾಧ್ಯ ಎಂದು ಹೇಳಿ ಎನ್. ಸಿ.ಸಿ ಸೇರುವಂತೆ ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು.

ಬಳಿಕ, 9ನೇ ತರಗತಿಯ ವಿದ್ಯಾರ್ಥಿಯಾದ ಈಶಾನ್, ಸಂವಿಧಾನದ ರಚನೆ ಮತ್ತು ಅಸ್ತಿತ್ವಕ್ಕೆ ಬಂದ ಬಗೆಯ ಕುರಿತು ಮಾತನಾಡಿದರು.

ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯೆ ಶಂಕರಿ ಶರ್ಮ, ಶಾಲಾ ಪ್ರಾಂಶುಪಾಲರಾದ ಸಿಂಧು ವಿ.ಜಿ, ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here