ಧಾರ್ಮಿಕ ಕೇಂದ್ರಗಳ ಸಮಗ್ರ ಅಭಿವೃದ್ಧಿಗೆ ಸರಕಾರ ಬದ್ಧವಾಗಿದೆ – ಶಾಸಕ ಅಶೋಕ್ ಕುಮಾರ್ ರೈ
ಪುತ್ತೂರು: ಕಳೆದ ವರ್ಷದ ಅವಧಿಯಲ್ಲಿ ಸುಮಾರು ರೂ.25 ಕೋಟಿ ಅನುದಾನದಲ್ಲಿ ದೇವಸ್ಥಾನ, ದೈವಸ್ಥಾನ ಮತ್ತು ಭಜನಾ ಮಂದಿರಗಳಿಗೆ ಸುಮಾರು 2.5 ಕೋಟಿ ರೂ.ಅನುದಾನ ಮೀಸಲಿರಿಸಲಾಗಿದೆ. ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿಗೆ 2 ಕೋಟಿ ರೂ.ಅನುದಾನವನ್ನು ಮೀಸಲಿಡಲಾಗಿದೆ. ಇದೇ ರೀತಿಯಲ್ಲಿ ಪಡ್ಡಾಯೂರು ಅನ್ನಪೂರ್ಣೇಶ್ವರಿ ಭಜನಾ ಮಂದಿರದ ತಡೆಗೋಡೆ ನಿರ್ಮಾಣ ಕಾಮಗಾರಿಗೆ 5 ಲಕ್ಷ ರೂ. ಮಂಜೂರು ಮಾಡಲಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಅವರು ಜ.26ರಂದು ಪಡ್ಡಾಯೂರು ಅನ್ನಪೂರ್ಣೇಶ್ವರಿ ಭಜನಾ ಮಂದಿರದ ತಡೆಗೋಡೆ ಕಾಮಗಾರಿ ಹಾಗೂ ಪಡ್ಡಾಯೂರು-ಪಟ್ಟೆ ರಸ್ತೆಯ ಕಾಮಗಾರಿಗೆ ಶಾಸಕರ ನಿಧಿಯಿಂದ ಮಂಜೂರಾದ ತಲಾ ರೂ.5 ಲಕ್ಷ ಅನುದಾನದಲ್ಲಿ ನಡೆಯಲಿರುವ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಸರಕಾರ ಎಲ್ಲಾ ಧರ್ಮಗಳ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಬದ್ಧವಾಗಿದ್ದು ಇದಕ್ಕಾಗಿ ಸೂಕ್ತ ಅನುದಾನಗಳನ್ನು ಬಿಡುಗಡೆಗೊಳಿಸಲಾಗುತ್ತಿದೆ. ಧಾರ್ಮಿಕ ಕೇಂದ್ರಗಳ ಅಡಿಸ್ಥಳದ ದಾಖಲಾತಿ ಆಯಾ ಧಾರ್ಮಿಕ ಕೇಂದ್ರಗಳ ಹೆಸರಿನಲ್ಲೇ ನೋಂದಾವಣೆಯಾಗಬೇಕು ಎಂಬ ನಿಟ್ಟಿನಲ್ಲೂ ನಮ್ಮ ಪ್ರಯತ್ನ ಸಾಗಿದೆ ಎಂದು ಅಶೋಕ್ ಕುಮಾರ್ ರೈ ಹೇಳಿದರು.
ಈ ಸಂದರ್ಭದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ್ ಭಟ್ ಪಂಜಿಗುಡ್ಡೆ, ಸ್ಥಳೀಯ ಪ್ರಮುಖರಾದ ಭರತ್ ಕುಮಾರ್ ಅರಿಗ, ಅವಿನಾಶ್ ಜೈನ್, ವಿ.ಎಸ್.ರಾಮಣ್ಣ ಗೌಡ, ಶೀನಪ್ಪ ಪೂಜಾರಿ ಪಟ್ಟೆ, ಸಂತೋಷ್ ಶೆಣೈ, ಗಣೇಶ್ ಗೌಡ ಪಡ್ಡಾಯೂರು, ಲೋಕೇಶ್ ಗೌಡ ಪಡ್ಡಾಯೂರು, ಪ್ರಮೋದ್ ನಾಕ್, ರಾಜ ಪಡ್ಡಾಯೂರು, ಜಯರಾಜ್ ಪಟ್ಟೆ, ರಾಜು ಪಟ್ಟೆ, ವಿನೋದ್ ಪಟ್ಟೆ, ವಸಂತ್ ಭಂಡಾರಿ ನೀರ್ತಡ್ಡಿ, ಸತೀಶ್ ಗೌಡ ಪಡ್ಡಾಯೂರು, ರವಿಚಂದ್ರ ಪಡ್ಡಾಯೂರು, ಮಹಾಬಲ ನಾಕ್ ಪಟ್ಟೆ, ದಾಮೋದರ ಗೌಡ ನೆಲಪ್ಪಾಲು, ಶೇಖರ ಪಡ್ಡಾಯೂರು, ಜ್ಯೋತಿ ಗಣೇಶ್ ಪಟ್ಟೆ, ಸೀತಾ ಹೊನ್ನಪ್ಪ ಪೂಜಾರಿ ಹಾಗೂ ಭಜನಾ ಮಂದಿರದ ಕಾರ್ಯಕರ್ತರು, ಪಟ್ಟೆ ಪರಿಸರದ ನಿವಾಸಿಗಳು ಉಪಸ್ಥಿತರಿದ್ದರು.