ಕೌಡಿಚ್ಚಾರು: ಬೆಂಕಿ ಆಕಸ್ಮಿಕದಿಂದ ತೆಂಗು ಹಾಗೂ ರಬ್ಬರ್ ಮರಗಳು ಸುಟ್ಟುಹೋದ ಘಟನೆ ಮಾಡ್ನೂರು ಗ್ರಾಮದ ಕೋಟೆಗುಡ್ಡೆ ಎಂಬಲ್ಲಿ ಜ.26ರಂದು ರಾತ್ರಿ ನಡೆದಿದೆ.
ಉಜ್ವಲ್ ಪ್ರಭು ಪುಣಚ ಎಂಬವರಿಗೆ ಸೇರಿದ ಜಾಗಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಜಾಗದಲ್ಲಿದ್ದ ತೆಂಗು ಹಾಗೂ ರಬ್ಬರ್ ಗಿಡಗಳು ಸುಟ್ಟುಹೋಗಿವೆ. ಇದರಿಂದಾಗಿ 50 ಸಾವಿರ ರೂ.ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದರು.
ಪ್ರಮುಖ ಅಗ್ನಿಶಾಮಕ ಕೃಷ್ಣಪ್ಪ ಎಸ್., ಅಗ್ನಿಶಾಮಕ ವಾಹನ ಚಾಲಕರಾದ ಸಚಿನ್ ಕೆ.ವಿ., ಶಿವಾನಂದ ನವಾಲ್, ಅಗ್ನಿಶಾಮಕರಾದ ಮಂಜುನಾಥ ಪಾಟೀಲ್, ವಿನೋದ್ ರಾಥೋಡ್, ಮಂಜುನಾಥ ಗುಡೇಲಾ ಅವರು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು. ಅರಿಯಡ್ಕ ಗ್ರಾ.ಪಂ.ಸದಸ್ಯ ಲೋಕೇಶ್ ಗೌಡ ಚಾಕೋಟೆ, ಜತ್ತಪ್ಪ ಗೌಡ ಕಾವು ಕೆಮ್ಮತ್ತಡ್ಕ, ಚಂದ್ರಶೇಖರ ಉಜ್ರಿಗುಳಿ, ರವಿ ಶೆಣೈ ಕಾವು, ಧರ್ಮಲಿಂಗ ಕಾವು ಮತ್ತಿತರರು ಸಹಕರಿಸಿದರು.