ಪುತ್ತೂರು: ಈಶ್ವರಮಂಗಲ ಮಾಡದ ಗುಡ್ಡೆಯಲ್ಲಿ ಪುನರ್ ನಿರ್ಮಾಣಗೊಳ್ಳುತ್ತಿರುವ ಶ್ರೀ ಕಿನ್ನಿಮಾಣಿ ಪೂಮಾಣಿ ದೈವಗಳ ದೈವಸ್ಥಾನಕ್ಕೆ ದಾರಂದ ಮುಹೂರ್ತವು ಜ.31 ರಂದು ಬ್ರಹ್ಮಶ್ರೀ ವೇದಮೂರ್ತಿ ವಾಸುದೇವ ತಂತ್ರಿಗಳ ಮಾರ್ಗದರ್ಶನದಲ್ಲಿ ನಡೆಯಿತು.
ಈಶ್ವರಮಂಗಲ ಪಂಚಲಿಂಗೇಶ್ವರ ದೇವಸ್ಥಾನದ ಪ್ರದಾನ ಅರ್ಚಕ ರವೀಂದ್ರ ಮಾಣಿಲತ್ತಾಯರವರು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಆಶಿಶ್ ಕುಂಜತ್ತಾಯ, ಮರದ ಶಿಲ್ಪಿ ಚಾರ್ಮಾಡಿ ಸುಧಾಕರ ಆಚಾರ್ಯ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಮಂಜುನಾಥ ರೈ ಸಾಂತ್ಯ. ಕಾರ್ಯದರ್ಶಿ ಮೋಹನದಾಸ ಶೆಟ್ಟಿ ನೂಜಿವೈಲು, ಪದಾಧಿಕಾರಿಗಳಾದ ಸುರೇಶ್ ಆಳ್ವ ಸಾಂತ್ಯ, ವಿಕ್ರಮ್ ರೈ ಸಾಂತ್ಯ, ಅಚ್ಚುತ ಮಣಿಯಾಣಿ, ದೀಪಕ್ ಕುಮಾರ ಮುಂಡ್ಯ, ಸದಾಶಿವ ರೈ ನಡುಬೈಲು, ಅನಂದ ರೈ ಸಾಂತ್ಯ, ಜಯಚಂದ್ರ ಸೇರಾಜೆ, ರಾಮಣ್ಣ ನಾಯ್ಕ, ಆನಂದ ಗೌಡ ಕೆಮ್ಮತ್ತಡ್ಕ, ರಮೇಶ್ ಪೂಜಾರಿ ಮುಂಡ್ಯ, ಸುಭಾಶ್ಚಂದ್ರ ಮೈರೋಳು, ನಾರಾಯಣರೈ ಅಂಕೊತಿಮಾರ್,ಸುಂದರ ಆಚಾರ್ಯ,ದೇವಪ್ಪ ಪೂಜಾರಿ ರಾಮ ಮೇನಾಲ,ಪೂರ್ಣಚಂದ್ರ ನೆಲ್ಲಿತ್ತಡ್ಕ,ಸುಧಾಕರ ನಾಯ್ಕ, ಪ್ರವೀಣ ರೈ, ಜಯರಾಜ್ ಕತ್ರಿಬೈಲು ಹಾಗೂ ಮತ್ತಿತರರು ಉಪಸ್ಥಿತರಿದ್ದರು.