ಶ್ರೀ ಶಾಸ್ತಾರ ದೇವಸ್ಥಾನ ಜೀರ್ಣೋದ್ಧಾರ ಆಡಳಿತ ಸಮಿತಿಯ ಮಹಾಸಭೆ

0

ಪುತ್ತೂರು: ಕಾಸರಗೋಡು ಜಿಲ್ಲೆ ದೇಲಂಪಾಡಿ ಗ್ರಾಮದ ಶ್ರೀ ಶಾಸ್ತಾರ ದೇವಸ್ಥಾನ ಜೀರ್ಣೋದ್ಧಾರ ಆಡಳಿತ ಸಮಿತಿ ಊಜಂಪಾಡಿ ಮಣಿಯೂರು ಇದರ ಮಹಾಸಭೆಯು ಇತ್ತೀಚೆಗೆ ದೇವಸ್ಥಾನದ ವಠಾರದಲ್ಲಿ ನಡೆಯಿತು.

ಸಮಿತಿಯ ಅಧ್ಯಕ್ಷರಾದ ಕಲ್ಲಡ್ಕ ಶಿವರಾಮ ಕಲ್ಲೂರಾಯರ ಅಧ್ಯಕ್ಷತೆಯಲ್ಲಿ ಆಡಳಿತ ಮೊಕ್ತೇಸರರಾದ ಅರಿಯಡ್ಕ ಚಿಕ್ಕಪ್ಪ ನಾಯ್ಕ್, ಅರಿಯಡ್ಕ ನಾರಾಯಣ ನಾಯ್ಕ್, ಸುಬೋಧ್ ರೈ ಅರಿಯಡ್ಕ ಮತ್ತು ಊಜಂಪಾಡಿ ರಾಮ್ ರತನ್ ನಾಯ್ಕ್ ರವರ ಮಾರ್ಗದರ್ಶನದಲ್ಲಿ ನಡೆದ ಸಭೆಯಲ್ಲಿ ಕ್ಷೇತ್ರದ ಪವಿತ್ರಪಾಣಿ ಮುಗೇರು ಗೋಪಾಲ ರಾವ್ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.

ಸಭೆಯಲ್ಲಿ ಹಾಜರಿದ್ದ ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ ಪೂರ್ಣ ಸಹಕಾರದ ಭರವಸೆಯನ್ನು ನೀಡಿದರು. ವೇದಿಕೆಯಲ್ಲಿ ಸಮಿತಿಯ ಗೌರವಾಧ್ಯಕ್ಷರಾದ ಕಿಶೋರ್ ಶೆಟ್ಟಿ ಅರಿಯಡ್ಕ, ಗೌರವ ಸಲಹೆಗಾರ ಅರಿಯಡ್ಕ ಸಾರ್ಥಕ್ ರೈ, ಸುನಿಲ್ ರೈ ಪಾಲ್ಗುಣಿ, ಗೋಪಾಲಕೃಷ್ಣ ಕುಂಜತ್ತಾಯ, ಕೆ ವಿಶ್ವವಿನೋದ ಬನಾರಿ, ವೆಂಟ್ರಮಣ ಭಟ್ ಮಾಸ್ತರ್ ದೇಲಂಪಾಡಿ, ಕೆ. ಗೋಪಾಲಯ್ಯ ಕೋಟಿಗದ್ದೆ, ಮೀನಾಕ್ಷಿ ಟೀಚರ್ ವಾಲ್ತಾಜೆ, ಗಣ್ಯರಾದ ವಿನೋದ್ ಶೆಟ್ಟಿ ಅರಿಯಡ್ಕ, ನವೀನ್ ಶೆಟ್ಟಿ ಅರಿಯಡ್ಕ ಮತ್ತು ಚಿರಾಗ್ ರೈ ಅರಿಯಡ್ಕ ಉಪಸ್ಥಿತರಿದ್ದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದೇಲಂಪಾಡಿ ಒಕ್ಕೂಟ, ಹಿಂದೂ ಐಕ್ಯವೇದಿ ದೇಲಂಪಾಡಿ, ಗಣೇಶೋತ್ಸವ ಸಮಿತಿ ದೇಲಂಪಾಡಿ, ದೇಲಂಪಾಡಿ ಬಂಟರ ಸಂಘ ಮೊದಲಾದ ನಾಡಿನ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದ್ದರು.

ಸಭೆಯಲ್ಲಿ ಮುಂದಿನ ಕಾರ್ಯಯೋಜನೆಗಳ ಬಗ್ಗೆ ಚರ್ಚಿಸಲಾಯಿತು. ಸಮಿತಿಯ ಖಜಾಂಚಿ ಕಲ್ಲಡ್ಕ ಗುತ್ತು ರಾಮಯ್ಯ ರೈಯವರು ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಮಣಿಯೂರು ವಿಶ್ವನಾಥ ರೈಯವರು ಕಾರ್ಯಕ್ರಮ ನಿರ್ವಹಣೆಯನ್ನು ಮಾಡಿದರು. ಕಾರ್ಯದರ್ಶಿ ಚಂದ್ರಶೇಖರ ನಾಯಕ್ ರವರು ಲೆಕ್ಕಪತ್ರ ಮಂಡಿಸಿದರು. ಉಪಾಧ್ಯಕ್ಷ ಯಂ. ರಮಾನಂದ ರೈ ದೇಲಂಪಾಡಿ ಧನ್ಯವಾದ ಸಮರ್ಪಿಸಿದರು. ಸಮಿತಿಯ ಪದಾಧಿಕಾರಿಗಳಾದ ಎಂ ಸಂಜೀವ ರೈ, ಭಾಸ್ಕರ ದೇಲಂಪಾಡಿ, ಕಲ್ಲಡ್ಕ ಗುತ್ತು ಸೀತಾರಾಮ ರೈ, ಹೇಮಂತ್ ಕುಮಾರ್ ಊಜಂಪಾಡಿ ಮತ್ತು ಸದಸ್ಯರು ಸಹಕರಿಸಿದರು. ಭಕ್ತರು ಭಾಗವಹಿಸಿದರು.

LEAVE A REPLY

Please enter your comment!
Please enter your name here