ವಿಟ್ಲ: ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಬದಿಗುಡ್ಡೆ ನಿವಾಸಿ ಸುಶ್ಮಿತಾ ಶೆಟ್ಟಿರವರು ಸಬ್ ಇನ್ಸ್ ಪೆಕ್ಟರ್ ನೇಮಕಾತಿಯ ಪರೀಕ್ಷೆ ಬರೆದು ಉತ್ತೀರ್ಣರಾಗಿ ಸಬ್ ಇನ್ಸ್ ಪೆಕ್ಟರ್ ಆಗಿ ನೇಮಕಗೊಂಡಿದ್ದಾರೆ.
ಪ್ರಸ್ತುತ ಮೈಸೂರಿನಲ್ಲಿ ತರಬೇತಿ ಪಡೆಯುತ್ತಿರುವ ಸುಶ್ಮಿತಾ ಶೆಟ್ಟಿಯವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಕಲ್ಕಡ್ಕದಲ್ಲಿನ ಶ್ರೀರಾಮ ಶಾಲೆಯಲ್ಲಿ ಮುಗಿಸಿ, ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಬಿ.ಕಾಂ. ಪದವಿಯನ್ನು ಪಡೆದು, ಮಂಗಳೂರಿನಲ್ಲಿರುವ ರೋಷನಿ ನಿಲಯ ಕಾಲೇಜಿನಲ್ಲಿ ಎಂ.ಎಸ್.ಡಬ್ಲ್ಯೂ. ಹಾಗೂ ಕೋಲಾರದ ಬಂಗಾರ ಪೇಟೆಯಲ್ಲಿ ಬಿ.ಎಡ್. ಶಿಕ್ಷಣವನ್ನು ಪಡೆಯುತ್ತಿರುವಾಗಲೇ ಸಬ್ ಇನ್ಸ್ ಪೆಕ್ಟರ್ ಪರೀಕ್ಷೆಯನ್ನು ಬರೆದ ಇವರು ಉತ್ತೀರ್ಣಗೊಂಡು ನೇಮಕಗೊಂಡಿದ್ದಾರೆ. ಇವರು ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಬದಿಗುಡ್ಡೆ ನಿವಾಸಿ ಕೃಷಿಕರಾದ ರಾಧಾಕೃಷ್ಣ ಮತ್ತು ಶಾಂತ ಶೆಟ್ಟಿಯವರ ಮೂವರು ಮಕ್ಕಳಲ್ಲಿ ಕಿರಿಯವರಾಗಿದ್ದಾರೆ.
ಸಹೋದರ ರಾಜೇಶ್ ಶೆಟ್ಟಿ ಮಾಣಿಯಲ್ಲಿ ಸ್ವ ಉದ್ಯಮ ನಡೆಸುತ್ತಿದ್ದು, ಸಹೋದರಿ ರಶ್ಮಿತಾ ಶೆಟ್ಟಿ ಇಂಜಿನೀಯರ್ ಆಗಿದ್ದಾರೆ.