ಫೆ.2: ವಿಟ್ಲ ಬಸದಿಗೆ ಭ| ಶ್ರೀ 1008 ಚಂದ್ರನಾಥ ಸ್ವಾಮಿ ತೀರ್ಥಂಕರರ ಮೂರ್ತಿ ಆಗಮನ

0

ವಿಟ್ಲ: ಬಂಟ್ವಾಳ ತಾಲೂಕು ವಿಟ್ಲದ ಭಗವಾನ್ ಶ್ರೀ 1008 ಚಂದ್ರನಾಥ ಸ್ವಾಮಿ ಬಸದಿಯಲ್ಲಿ ವಿಟ್ಲ ಭ| ಶ್ರೀ 1008 ಚಂದ್ರನಾಥ ಸ್ವಾಮಿ ಬಸದಿ ತೀರ್ಥಂಕರರ ಮತ್ತು ಭ। 1008 ಶ್ರೀ ಮಹಾವರ ತೀರ್ಥಂಕರರ ಪಂಚಕಲ್ಯಾಣ ಮಹೋತ್ಸವ ಮತ್ತು ನೂತನ ಬಿಂಬ ಪ್ರತಿಷ್ಠೆ ಹಾಗೂ ಶ್ರೀ ಯಕ್ಷಿ ಪದ್ಮಾವತಿ ಅಮ್ಮನವರ ಮತ್ತು ಶ್ರೀ ಯಕ್ಷಿ ಜ್ವಾಲಾಮಾಲಿನಿ ಅಮ್ಮನವರ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಫೆ.2 ರಂದು ಅರ್ಕುಳದಿಂದ ಭ| ಶ್ರೀ 1008 ಚಂದ್ರನಾಥ ಸ್ವಾಮಿ ತೀರ್ಥಂಕರರ ಮೂರ್ತಿ ವಿಟ್ಲ ಜೈನಬಸದಿಗೆ ಆಗಮನವಾಗಲಿದೆ.


ಅಂದು ಬೆಳಗ್ಗೆ ಅರ್ಕುಳದಿಂದ ಆಗಮಿಸಿದ ಮೂರ್ತಿಯನ್ನು ವಿಟ್ಲ – ಮಂಗಳೂರು ರಸ್ತೆಯ ಬೊಬ್ನೆಕೇರಿಯಲ್ಲಿ ಭಕ್ತಾದಿಗಳಿಂದ ಅದ್ದೂರಿ ಸ್ವಾಗತದ ನಡೆಯಲಿದೆ. ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ತಲುಪಿ ಅಲ್ಲಿ ಶ್ರೀ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ವಿಟ್ಲ ಜೈನ ಬಸದಿಗೆ ಆಕರ್ಷಣೀಯ ಮೆರವಣಿಗೆ, ಕುಣಿತ ಭಜನೆಯ ಮೂಲಕ ಮೂರ್ತಿಯ ಆಗಮನವಾಗಲಿದೆ. ಈ ಸಂದರ್ಭದಲ್ಲಿ‌ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಉಪಸ್ಥಿತರಿರುವಂತೆ ಬಸದಿಯ ಅನುವಂಶಿಕ ಆಡಳಿತ ಮೊಕ್ತೇಸರರಾದ ಡಿ. ವಿನಯ ಕುಮಾರ್, ಅಧ್ಯಕ್ಷರಾದ ಜೀತೇಶ್ ಎಂ., ಕಾರ್ಯದರ್ಶಿ ದರ್ಶನ್ ಜೈನ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here