ನಿಡ್ಪಳ್ಳಿ: ಆರ್ಲಪದವು ಕಿನ್ನಿಮಾಣಿ -ಪೂಮಾಣಿ , ಪಿಲಿಭೂತ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳದಿಂದ ನೀಡಿದ ರೂ.1 ಲಕ್ಷದ ಚೆಕ್ಕನ್ನು ದೈವಸ್ಥಾನದ ಅನುವಂಶಿಕ ಆಡಳಿತ ಮೋಕ್ತೆಸರರಾದ ಶ್ರೀಕೃಷ್ಣ ಬೋಳಿಲ್ಲಾಯ ಕಡಮಾಜೆ ಇವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪುತ್ತೂರು ತಾಲೂಕಿನ ಯೋಜನಾಧಿಕಾರಿ ಶಶಿಧರ. ಎಂ ಫೆ.1 ರಂದು ಹಸ್ತಾಂತರಿಸಿದರು.
ಬೆಟ್ಟಂಪಾಡಿ ವಲಯ ಮೇಲ್ವಿಚಾರಕ ಸೋಹನ್ ಗೌಡ, ಪಾಣಾಜೆ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಜಯಶ್ರೀ ದೇವಸ್ಯ, ಸದಾಶಿವ ರೈ ಸೂರಂಬೈಲು,ರಘುನಾಥ ಪಾಟಾಳಿ ಅಪಿನಿಮೂಲೆ ಹಾಗೂ ಸಂಘದ ಸದಸ್ಯರಾದ ಸುನೀತ, ಉಷಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.