ವಿದ್ವತ್ ಪೂರ್ವದಲ್ಲಿ ಪೃಥ್ವಿಶ್ರೀ, ಸೀನಿಯರ್‌ನಲ್ಲಿ ಮಂಗಳದುರ್ಗ,ಜೂನಿಯರ್‌ನಲ್ಲಿ ಹನಿಷ್ಕಾ ಪ್ರಥಮ ಸ್ಥಾನ
ಪುತ್ತೂರು: 2023-24ನೇ ಸಾಲಿನಲ್ಲಿ ಮೈಸೂರಿನ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ನಡೆಸಿದ ಭರತನಾಟ್ಯ ಶಾಸ್ತ್ರೀಯ ನೃತ್ಯದ ವಿದ್ವತ್ ಪೂರ್ವ, ಸೀನಿಯರ್ ಹಾಗೂ ಜೂನಿಯರ್ ಪರೀಕ್ಷೆಯಲ್ಲಿ ಪುತ್ತೂರಿನ ನೃತ್ಯೋಪಾಸನಾ ಕಲಾ ಅಕಾಡೆಮಿ(ರಿ.) ಇದರ ಒಟ್ಟು 48 ಮಂದಿ ವಿದ್ಯಾರ್ಥಿಗಳು ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ವಿದ್ವತ್ ಪೂರ್ವ ಪರೀಕ್ಷೆಯಲ್ಲಿ ಒಂಭತ್ತು ಮಂದಿ, ಸೀನಿಯರ್‌ನಲ್ಲಿ 17 ಹಾಗೂ ಜೂನಿಯರ್‌ನಲ್ಲಿ 22 ಮಂದಿ ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಈ ಎಲ್ಲ ವಿದ್ಯಾರ್ಥಿಗಳು ಅಕಾಡೆಮಿಯ ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್ ಮಾರ್ಗದರ್ಶನದಲ್ಲಿ ಪರೀಕ್ಷೆ ಬರೆದು ತೇರ್ಗಡೆಯಾಗಿದ್ದಾರೆ.
ವಿದ್ವತ್ ಪೂರ್ವ ಫಲಿತಾಂಶ:
ವಿದ್ವತ್ ಪೂರ್ವ ಪರೀಕ್ಷೆಯಲ್ಲಿ ಕಾಸರಗೋಡಿನ ಪೃಥ್ವಿಶ್ರೀ ಕೆ. ಶೇ.82.6 ಅಂಕಗಳೊಂದಿಗೆ ಕಲಾ ಅಕಾಡೆಮಿಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಕಾಸರಗೋಡು ಪೈಕ ನಿವಾಸಿಯಾದ ಈಕೆ ಬಾಲಸುಬ್ರಹ್ಮಣ್ಯ ಹಾಗೂ ಶ್ರೀದೇವಿ ದಂಪತಿ ಪುತ್ರಿ. ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ಪ್ರಥಮ ಬಿಕಾಂ ವಿದ್ಯಾರ್ಥಿನಿ. ಉಪ್ಪಿನಂಗಡಿಯ ತನುವಿ ಶೇ.81.6 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಈಕೆ ಉಪ್ಪಿನಂಗಡಿಯ ಯೋಗಾನಂದ ಮತ್ತು ಸುನೀತ ದಂಪತಿ ಪುತ್ರಿಯಾಗಿದ್ದು, ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪ್ರಥಮ ಬಿಸಿಎ ವ್ಯಾಸಂಗ ಮಾಡುತ್ತಿದ್ದಾರೆ. ವೈಷ್ಣವಿ ವಿನಯ ಶರ್ಮಾ ಅವರು ಶೇ.78.2 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದಿದ್ದಾರೆ. ಬೆಳ್ತಂಗಡಿಯ ಗೋಪಾಲಕೃಷ್ಣ ಭಟ್ ಮತ್ತು ಸೀತಾಲಕ್ಷ್ಮಿ ದಂಪತಿ ಪುತ್ರಿಯಾದ ಇವರು ಬೆಂಗಳೂರು ನಿವಾಸಿ ವಿನಯ ಶರ್ಮಾರ ಪತ್ನಿ. ಇವರು ಪ್ರಸ್ತುತ ಅಮೆಜಾನ್ ಕಂಪನಿಯಲ್ಲಿ
ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಉಪ್ಪಿನಂಗಡಿಯ ಅಕ್ಷಯಶಂಕರಿ ಶೇ.76.6 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಉಪ್ಪಿನಂಗಡಿ ಪೆರಿಯಡ್ಕದ ರಾಧಾಕೃಷ್ಣ ಭಟ್ ಮತ್ತು ಶಶಿಕಿರಣ ದಂಪತಿ ಪುತ್ರಿಯಾದ ಈಕೆ ಪುತ್ತೂರು ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿನಿ. ಉಪ್ಪಿನಂಗಡಿಯ ಶ್ರಾವ್ಯ ಶೇ.73.4 ಅಂಕ ಪಡೆದು ತೇರ್ಗಡೆಯಾಗಿದ್ದಾರೆ. ಉಪ್ಪಿನಂಗಡಿ ಇಳಂತಿಲದ ಸುಬ್ರಾಯ ಮತ್ತು ಶಾಂತಾ ದಂಪತಿ ಪುತ್ರಿಯಾದ ಈಕೆ ಪುತ್ತೂರು ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿನಿ. ಪೃಥ್ವಿ ಪುಣಚ ಶೇ.71.6 ಅಂಕಗಳೊಂದಿಗೆ ಉತ್ತೀರ್ಣರಾಗಿದ್ದು, ಬಂಟ್ವಾಳ ತಾಲೂಕು ಪುಣಚ ವಿಜಯ ಕುಮಾರ್ ಮತ್ತು ಶ್ರೀಲತಾ ದಂಪತಿ ಪುತ್ರಿ. ಬಂಟ್ವಾಳ ರಾಯಿಯ ಅಭಿಷೇಕ್ ಬಂಗೇರ ಅವರ ಪತ್ನಿಯಾದ ಈಕೆ ಎಂಎಸ್ಸಿ ಪದವೀಧರೆಯಾಗಿದ್ದು, ಬಿಎಡ್ ಕಲಿಯುತ್ತಿದ್ದಾರೆ. ಶುೃತಿರಂಜಿನಿ ಎಸ್. ಶೇ.70.6 ಅಂಕ ಪಡೆದಿದ್ದಾರೆ. ಪುತ್ತೂರು ಮುಕ್ವೆಯ ಸಚೀಂದ್ರ ಎನ್. ಮತ್ತು ಶಕುಂತಳಾ ದಂಪತಿ ಪುತ್ರಿ. ದ್ವಿತೀಯ ಪಿಯುಸಿ ಮುಗಿಸಿ ಈಗ ಪ್ರವೇಶ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಸುಬ್ರಹ್ಮಣ್ಯದ ಹಂಸಾನಂದಿನಿ ಇವರು ಶೇ.70 ಅಂಕ ಪಡೆದಿದ್ದಾರೆ. ಸುಬ್ರಹ್ಮಣ್ಯದ ಎಸ್.ಕೆ. ವೇಣುಗೋಪಾಲ ಮತ್ತು ಭವಾನಿ ದಂಪತಿ ಪುತ್ರಿಯಾದ ಈಕೆ ಎಂಕಾಂ ಪದವೀಧರೆ. ಉಪ್ಪಿನಂಗಡಿಯ ಯಶ್ಮಿ ಯು. ಶೇ.61.8 ಅಂಕ ಪಡೆದಿದ್ದು, ಈಕೆ ಉಮೇಶ್ ಪೂಜಾರಿ ಮತ್ತು ಶ್ರೀಕಾಂತಿ ದಂಪತಿ ಪುತ್ರಿ. ಪ್ರಸ್ತುತ ಮಂಗಳೂರಲ್ಲಿ ಬಿಎಸ್ಸಿ ತೃತೀಯ ವರ್ಷ ವ್ಯಾಸಂಗ ಮಾಡುತ್ತಿದ್ದಾರೆ.
ಸೀನಿಯರ್ ಫಲಿತಾಂಶ:
ಸೀನಿಯರ್ ಪರೀಕ್ಷೆಯಲ್ಲಿ ಕಲಾ ಅಕಾಡೆಮಿಯ ಪುತ್ತೂರು ಕೇಂದ್ರದ ಮಂಗಳದುರ್ಗ ಟಿ.ಆರ್.(ಶೇ.91.33) ಗರಿಷ್ಠ ಅಂಕ ಪಡೆದು ಫಲಿತಾಂಶ ದಾಖಲಿಸಿದ್ದಾರೆ. ಅಂಕಿತ ಬಿ.(ಶೇ.89.16), ಸ್ಮೃತಿ(ಶೇ.75.5), ನಿಖಿತ ಎ.ಎಂ.(ಶೇ.76.33), ಸಿಂಚನಾ ಪಿ.ಎಸ್.(ಶೇ.88.67), ಧೃತಿ(ಶೇ.81), ಶ್ರೀಕೃಪಾ(ಶೇ.90.33), ನಯನಾ ಬಿ.(ಶೇ.85.33), ವಿಟ್ಲ ಶಾಖೆಯ ಅನ್ವಿತಾ ಭಟ್(ಶೇ.90.1), ಇಶಾ ಕೀರ್ತಿ(ಶೇ.90), ಶಮಾ ಎಸ್.ವಿ.(ಶೇ.89), ಕವನ(ಶೇ.88.3), ಮಹಿಮಾ ಆರ್.ಕೆ.(ಶೇ.88.5), ಸುಬ್ರಹ್ಮಣ್ಯ ಶಾಖೆಯ ಡಿ.ವಿ.ವಲ್ಲರಿ(ಶೇ.80.16), ಅನನ್ಯಾ(ಶೇ.76.33), ಉಪ್ಪಿನಂಗಡಿ
ಶಾಖೆಯ ಕಾವ್ಯಶ್ರೀ ಕೆ.ಎಸ್.(ಶೇ.65.5) ಹಾಗೂ ಕವನಶ್ರೀ ಕೆ.ಎಸ್.(ಶೇ.53.5) ಅಂಕ ಪಡೆದಿದ್ದಾರೆ.
ಜೂನಿಯರ್ ಫಲಿತಾಂಶ:
ಜೂನಿಯರ್ ಪರೀಕ್ಷೆಯಲ್ಲಿ ಉಪ್ಪಿನಂಗಡಿ ಶಾಖೆಯ ಹನಿಷ್ಕಾ(ಶೇ.95.5) ಗರಿಷ್ಠ ಫಲಿತಾಂಶ ದಾಖಲಿಸಿದ್ದಾರೆ. ಪುತ್ತೂರು ಕೇಂದ್ರದ ಸುಶ್ಮಿತಾ ರಾವ್ ವೈ.(ಶೇ.90), ಐಶ್ವರ್ಯ(ಶೇ.84.75), ಸ್ಟೀನಲ್ ಡಿಸಿಲ್ವ(ಶೇ.93.5), ವೇದಿಕಾ (ಶೇ.80), ಸಂಜನಾ(ಶೇ.91.75), ಶಾಂಭವಿ(ಶೇ.95), ಕೀರ್ತಿಕಾ (ಶೇ.79.25), ಅವನಿ ಕೆ.(ಶೇ.94.4), ಅಶ್ವಿಜ(ಶೇ.89), ಅಪೂರ್ವ(ಶೇ.93), ಸಾನ್ವಿ ಕೆ.(ಶೇ.73.25), ಅನುಷ್ಕಾ(ಶೇ.92.5) ಫಲಿತಾಂಶ ಪಡೆದಿದ್ದಾರೆ.
ವಿಟ್ಲ ಶಾಖೆಯ ಅಮೃತಾ ಎಸ್.(ಶೇ.91.25), ನಿಧಿ ಎನ್.(ಶೇ.85), ಪ್ರಾಂಜಲಿ(ಶೇ.85.5), ಯಶಸ್ವಿನಿ(ಶೇ.78.5), ಸುಬ್ರಹ್ಮಣ್ಯ ಶಾಖೆಯ ಶ್ರೀಯಾ ಎಂ.ಎಸ್.(ಶೇ.89.75), ಮೌಲ್ಯಶ್ರೀ ವಿ.ವಿ.(ಶೇ.89.25), ಉಪ್ಪಿನಂಗಡಿ ಶಾಖೆಯ ಪ್ರಾಪ್ತಿ(ಶೇ.91.75), ಆರಾಧ್ಯ(ಶೇ.87.5), ನಿಷ್ಕಾ(ಶೇ.71) ಅಂಕಗಳೊಂದಿಗೆ ಫಲಿತಾಂಶ ದಾಖಲಿಸಿದ್ದಾರೆ.