ಭಾರತೀಯ ಆಧ್ಯಾತ್ಮಿಕತೆ ಅಧ್ಯಯನ ಮಾಡಿ ಭಾರತೀಯಳಾದೆ- ಲುಕ್ರೇಸಿಯಾ ಮಾನಿಸ್ಕೋಟಿ
ಪುತ್ತೂರು: ತನ್ನ ಗುರುಗಳಿಂದ ನೃತ್ಯ ಕಲಿಯುವುದರೊಂದಿಗೆ ಭಾರತೀಯ ಪುರಾಣ ಇತಿಹಾಸ ಆಧ್ಯಾತ್ಮಿಕ ವಿಚಾರಗಳನ್ನು ಅಧ್ಯಯನ ಮಾಡಿ ತಾನು ಸಂಪೂರ್ಣವಾಗಿ ಭಾರತೀಯಳಾದೆ ಎಂಬ ವಿಚಾರವನ್ನು ಇಟಲಿಯ ಭರತನಾಟ್ಯ ಕಲಾವಿದೆ ಲುಕ್ರೇಸಿಯಾ ಮಾನಿಸ್ಕೋಟಿಯವರು ಅಭಿಪ್ರಾಯ ಹಂಚಿಕೊಂಡರು.
ಪುತ್ತೂರು ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಗೃಹ ಮಾಲಿಕೆ ’ನೃತ್ಯಾಂತರಂಗ’ ದ 122ನೇ ಸರಣಿಯಲ್ಲಿ ಅವರು ಮಾತನಾಡಿದರು. ಭರತನಾಟ್ಯದ ಆಳವಾಗಿ ಅಧ್ಯಾಯನ ಮಾಡಿದಾಗ ಅದು ಕಷ್ಟಕರವಲ್ಲ. ಇಲ್ಲಿ ಆಧ್ಯಾತ್ಮಿಕತೆ, ಸ್ಪಷ್ಟ ವಿಚಾರಗಳು ಮುಂದಿರಬೇಕೆಂದರು. ಜಿ.ಎಲ್. ಆಚಾರ್ಯ ಜ್ಯುವೆಲ್ಲರ‍್ಸ್‌ನ ವ್ಯಾಪಾರೋದ್ಯಮ ಮತ್ತು ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥೆ ವೇದ ಲಕ್ಷ್ಮೀಕಾಂತ್ ರವರು ಅಭ್ಯಾಗತರಾಗಿ ಆಗಮಿಸಿ ವಿದೇಶಿ ಕಲಾವಿದೆಯ ಕಲಾನೈಪುಣ್ಯವನ್ನು ಸಂಸ್ಥೆಯ ನಿರ್ದೇಶಕರಾದ ವಿದ್ವಾನ್ ದೀಪಕ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.