ಪುತ್ತೂರು: ಬೊಳುವಾರಿನಲ್ಲಿರುವ ಮಕ್ಕಳ ಮನೆಯ ವಾರ್ಷಿಕೋತ್ಸವವು ಜ.24ರಂದು ಪುರಭವನದಲ್ಲಿ ನೆರವೇರಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ, ಉದ್ಘಾಟಿಸಿ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸ್ಥಾಪಕ ಮಹಾಲಿಂಗೇಶ್ವರ ಭಟ್ ಸಂಸ್ಥೆಯ ಹುಟ್ಟು, ಬೆಳೆದು ಬಂದ ದಾರಿ, ಮುಂದಿನ ಯೋಜನೆ, ಯೋಚನೆಗಳನ್ನು ವಿವರವಾಗಿ ತಿಳಿಸಿದರು.
ಬೊಳುವಾರು ಆಕಾಶ್ ಕೋಚಿಂಗ್ ಸೆಂಟರ್ನ ಮಾಲಕಿ ನಾಗಶ್ರೀ ಐತಾಳ್, ವೈಶಾಲಿ ಭಟ್ ಉಪಸ್ಥಿತರಿದ್ದರು. ಪುಟಾಣಿಗಳಾದ ಆರ್ವಿ, ಜನ್ವಿ, ದುತಿ, ಶಿವನ್ಯ ಪ್ರಾರ್ಥಿಸಿದರು. ಮಿಹಾನ್ ಸ್ವಾಗತಿಸಿ, ಶಮಂತ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅನಘ, ಧನ್ವಿ ಹಾಗೂ ಹಿಮಾಲಿ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಮುಖ್ಯಸ್ಥೆ ಸತ್ಯಪೂರ್ಣ ವಂದಿಸಿದರು.