ನಾಳೆಯಿಂದ ಕೋಡಿಂಬಾಡಿ ಶಾಲೆಯಲ್ಲಿ ಉಪ್ಪಿನಂಗಡಿ ಕಾಲೇಜ್‌ನ ಎಎಸ್‌ಎಸ್ ಶಿಬಿರ

0

ಪುತ್ತೂರು: ವಿದ್ಯಾರ್ಥಿಗಳಿಗೆ ಅನುಭವದ ಮೂಲಕ ಶಿಕ್ಷಣ ನೀಡುವ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿ ಜೀವನದ ಅಪೂರ್ವ ವೇದಿಕೆಯಾಗಿದೆ. ಸೇವಾ ಮನೋಭಾವ ಬೆಳೆಸಿಕೊಳ್ಳುವ ಮೂಲಕ ಸಮುದಾಯದ ಸಮಸ್ಯೆಗಳನ್ನು ಅರಿತು ಸ್ಪಂದಿಸುವ ಗುಣವನ್ನು ಬೆಳೆಸುವ ಎನ್‌ಎಸ್‌ಎಸ್ ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣ ನೀಡುತ್ತಾ ಬಂದಿದೆ. ಶ್ರಮದಾನದ ಮೂಲಕ ಶ್ರಮಿಕ ವರ್ಗವನ್ನು ಗೌರವಿಸುವ, ಪರಸ್ಪರ ಸಹಕರಿಸಿ ಜೀವಿಸುವ ಮೂಲಕ ಉದಾರ ಮನೋಭಾವ ಬೆಳೆಸುವ ರಾಷ್ಟ್ರೀಯ ಸೇವಾ ಯೋಜನೆ ಪ್ರಸ್ತುತ ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಹೆಚ್ಚು ಮಹತ್ವ ನೀಡುತ್ತಿದೆ. ಇದರ ಅಂಗವಾಗಿ ಉಪ್ಪಿನಂಗಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ಈ ವರ್ಷದ ವಾರ್ಷಿಕ ವಿಶೇಷ ಶಿಬಿರ ಫೆ.4ರಿಂದ 10 ತನಕ ಕೋಡಿಂಬಾಡಿಯ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಲಿದೆ.


ನನ್ನ ಭಾರತಕ್ಕಾಗಿ ಯುವ ಜನತೆ ಮತ್ತು ಡಿಜಿಟಲ್ ಸಾಕ್ಷರತೆಗಾಗಿ ಯುವ ಜನತೆ ಎಂಬ ಶಿರೋನಾಮೆಯಲ್ಲಿ ಆಯೋಜನೆಗೊಳ್ಳಲಿರುವ ಈ ಶಿಬಿರಕ್ಕೆ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶಾಸಕ ಅಶೋಕ್ ಕುಮಾರ್ ರೈ ಚಾಲನೆ ನೀಡಲಿದ್ದಾರೆ. ದೈನಂದಿನ ಕಾರ್ಯಕ್ರಮಗಳಲ್ಲಿ ಧ್ವಜಾರೋಹಣ, ಶ್ರಮದಾನ, ಶೈಕ್ಷಣಿಕ ಕಾರ್ಯಕ್ರಮ, ಸಾರ್ವಜನಿಕ ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಅವಲೋಕನ ಒಳಗೊಂಡಿದೆ. ಶಿಬಿರಾರ್ಥಿಗಳ ವ್ಯಕ್ತಿತ್ವ ವಿಕಸನದ ಉದ್ದೇಶ ಇಟ್ಟುಕೊಂಡು ಪ್ರತಿ ದಿನ ಅಪರಾಹ್ನ ೦೨:೩೦ಕ್ಕೆ ಆಯೋಜನೆಗೊಳ್ಳಲಿರುವ ಶೈಕ್ಷಣಿಕ ಕಾರ್ಯಕ್ರಮದಲ್ಲಿ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಮತ್ತು ತರಬೇತಿ ಕಾರ್ಯಕ್ರಮ ನಡೆಯಲಿದೆ. ಮೌನೇಶ್ ವಿಶ್ವಕರ್ಮ ಇವರ ರಂಗದ ಮೂಲಕ ಡಿಜಿಟಲ್ ಸಾಕ್ಷರತೆ, ದೀಕ್ಷಿತ್ ಕುಮಾರ್ ಪುತ್ತೂರು ಇವರಿಂದ ವೃತ್ತಿ ನಿರ್ಮಾಣ ಮತ್ತು ಡಿಜಿಟಲ್ ತಂತ್ರಜ್ಞಾನ, ಶಿವಪ್ರಸಾದ್ ಕೆಆರ್ ಇವರಿಂದ ಮನೋವಿಕಸನ ಆಟಗಳು, ಡಾ. ನಂದೀಶ್ ವೈಡಿ ಇವರಿಂದ ಎನ್‌ಎಸ್‌ಎಸ್ ಮತ್ತು ನಾಯಕತ್ವ ಗುಣಗಳು, ಡಾ. ಮಹೇಶ್ ಕುಮಾರ್ ಶೆಟ್ಟಿ ಎಚ್. ಇವರಿಂದ ಮೈ ಭಾರತ್ ಪೋರ್ಟಲ್ ಮತ್ತು ಅವಕಾಶಗಳು, ಶಿಬಿರ ಅಧಿಕಾರಿಗಳಿಂದ ಶಿಬಿರದ ಕಲಿಕೆ ಮತ್ತು ಅನುಷ್ಠಾನ-ಒಂದು ಅವಲೋಕನ ಎಂಬ ವಿಷಯಗಳ ಬಗ್ಗೆ ಮಾಹಿತಿ ಮತ್ತು ತರಬೇತಿ ಕಾರ್ಯಕ್ರಮ ಜರಗಲಿದೆ. ಹಾಗೂ ಶಿಬಿರಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು ಆಯೋಜನೆಗೊಳ್ಳಲಿದೆ.

ಡಿಜಿಟಲ್ ಸಾಕ್ಷರತಾ ಕೇಂದ್ರ:
ಈ ವರ್ಷದ ಎನ್‌ಎಸ್‌ಎಸ್ ಶಿಬಿರದ ವಿಶೇಷತೆಯಾಗಿ ಶಿಬಿರ ಸ್ಥಳದಲ್ಲಿ ಡಿಜಿಟಲ್ ಸಾಕ್ಷರತೆಯನ್ನು ಮೂಡಿಸುವ ಉದ್ದೇಶದಿಂದ ಡಿಜಿಟಲ್ ಸಾಕ್ಷರತಾ ಕೇಂದ್ರವನ್ನು ತೆರೆಯಲಾಗುವುದು. ಇಲ್ಲಿ ಶಿಬಿರ ಸ್ಥಳಕ್ಕೆ ಭೇಟಿ ನೀಡುವ ಸಾರ್ವಜನಿಕರಲ್ಲಿ ತಂತ್ರಜ್ಞಾನದ ಉಪಯೋಗಕ್ಕೆ ಸಂಬಂಧಪಟ್ಟ ಹಾಗೆ ಮಾಹಿತಿ ಸಂಗ್ರಹಿಸಿ ಅವಶ್ಯಕತೆ ಇರುವ ಮಾಹಿತಿಗಳ ವಿನಿಮಯ ಮಾಡಲಾಗುವುದು. ಬ್ಯಾಂಕಿಂಗ್ ಕ್ಷೇತ್ರ ಸಾರ್ವಜನಿಕ ವಲಯ ಸರ್ಕಾರಿ ವ್ಯವಸ್ಥೆಗಳ ಬಗ್ಗೆ ಇರುವ ಆ ಗಳನ್ನು ಪರಿಚಯಿಸಿ ಅದನ್ನು ಉಪಯೋಗಿಸುವ ವಿಧಾನಗಳನ್ನು ಮತ್ತು ಉಪಯೋಗದ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಕ್ರಮವನ್ನು ವಿವರಿಸಲಾಗುವುದು. ಫೆ.9ರಂದು ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆ, ಪುತ್ತೂರು ವಲಯ ಹಾಗೂ ಸಮುದಾಯ ದಂತ ಆರೋಗ್ಯ ಕೇಂದ್ರ ಕೆವಿಜಿ ಸುಳ್ಯ ಇವುಗಳ ಸಹಯೋಗದೊಂದಿಗೆ ಸಾರ್ವಜನಿಕ ದಂತ ಚಿಕಿತ್ಸಾ ಶಿಬಿರ ಆಯೋಜನೆಗೊಳ್ಳಲಿದೆ. ಪ್ರತಿದಿನ ಸಾಯಂಕಾಲ 7:45ಕ್ಕೆ ಶಿಬಿರಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ. ಪ್ರತಿದಿನ ಸಾಯಂಕಾಲ 5:೦೦ ಗಂಟೆಗೆ ಶಿಬಿರಾರ್ಥಿಗಳಿಗೆ ಜಾನಪದ ಕ್ರೀಡೆಗಳನ್ನು ಆಯೋಜಿಸಲಾಗುವುದು. ಶಿಬಿರದ ವಿಶೇಷ ಆಕರ್ಷಣೆಯಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವ ಪುತ್ತೂರು ತಾಲೂಕಿನ ಹಿರಿಯ ಎನ್‌ಎಸ್‌ಎಸ್ ಸ್ವಯಂಸೇವಕರೊಂದಿಗೆ ಸಂವಾದ ಕಾರ್ಯಕ್ರಮ ಜರಗಲಿದೆ. ಫೆ.10ರಂದು ಸಾಯಂಕಾಲ ೦6.30ಕ್ಕೆ ಸಮಾರೋಪ ಸಮಾರಂಭ ಜರುಗಲಿದ್ದು ವಿವೇಕಾನಂದ (ಸ್ವಾಯತ್ತ) ಕಾಲೇಜು ಪುತ್ತೂರು ಇಲ್ಲಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ. ಅರುಣ್ ಪ್ರಕಾಶ್ ಸಮಾರೋಪ ಭಾಷಣ ಮಾಡಲಿದ್ದಾರೆ. ಅದೇ ದಿನ ರಾತ್ರಿ 10.30ಕ್ಕೆ ಶಿಬಿರ ಜ್ಯೋತಿ ಕಾರ್ಯಕ್ರಮದ ಮೂಲಕ ವಾರ್ಷಿಕ ವಿಶೇಷ ಶಿಬಿರಕ್ಕೆ ತೆರೆ ಎಳೆಯಲಾಗುವುದು. ಕೋಡಿಂಬಾಡಿ ಗ್ರಾಮ ಪಂಚಾಯತ್‌ನ ಉಪಾಧ್ಯಕ್ಷರೂ ಸಾಮಾಜಿಕ ಮುಖಂಡರೂ ಆಗಿರುವ ಜಯಪ್ರಕಾಶ್ ಬದಿನಾರು, ಎಸ್‌ಡಿಎಂಸಿ

ಸಾರ್ವಜನಿಕ ಸಭಾ ಕಾರ್ಯಕ್ರಮಗಳು:
ಶಿಬಿರಾರ್ಥಿಗಳಲ್ಲಿ ಮತ್ತು ಸಾರ್ವಜನಿಕರಲ್ಲಿ ಪ್ರಚಲಿತ ವಿದ್ಯಮಾನದ ವಿಷಯಗಳು ಸಂಬಂಧಪಟ್ಟ ಹಾಗೆ ವಿಶೇಷ ಉಪನ್ಯಾಸ ಒಳಗೊಂಡ ಸಾರ್ವಜನಿಕ ಸಭಾ ಕಾರ್ಯಕ್ರಮ ಪ್ರತಿದಿನ ಸಾಯಂಕಾಲ 6.30ಕ್ಕೆ ಜರಗಲಿದೆ. ಸುಪ್ರೀತ್ ಕೆಸಿ ಇವರಿಂದ ಡಿಜಿಟಲ್ ಸಾಕ್ಷರತೆ-ಸ್ವಯಂಸೇವಕರ ಪಾತ್ರ, ಹೇಮಾ ಶುಭಾಷಿಣಿ ಇವರಿಂದ ಸೈಬರ್ ಸುರಕ್ಷತೆ-ಏಕೆ? ಹೇಗೆ?, ಡಾ. ವಿಜಯಕುಮಾರ್ ಮೊಳೆಯಾರ್ ಇವರಿಂದ ಸೇವಾ ಮನೋಭಾವ-ಹೊಸ ದೃಷ್ಟಿಕೋನ, ಲಕ್ಷ್ಮಿಕಾಂತ್ ಅನಿಕೂಟೇಲ್ ಇವರಿಂದ ಡಿಜಿಟಲ್ ಯುಗದ ಅವಕಾಶಗಳು ಮತ್ತು ಸವಾಲುಗಳು, ಡಾ. ಪ್ರಮೋದ್ ಎಂಜಿ ಇವರಿಂದ ಕೃಷಿ ಕ್ಷೇತ್ರ: ಸಾಧ್ಯತೆ ಮತ್ತು ಸವಾಲುಗಳು ಹಾಗೂ ದಾಮೋದರ ಕಣಜಾಲು ಇವರಿಂದ ಡಿಜಿಟಲ್ ಜಗತ್ತು ಮತ್ತು ಸೇವಾ ಕ್ಷೇತ್ರ ಎಂಬ ವಿಷಯಗಳ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.

ಅಧ್ಯಕ್ಷ ಶೇಖರ ಪೂಜಾರಿ, ಮುಖ್ಯ ಗುರು ಬಾಲಕೃಷ್ಣ ಎನ್. ಅವರ ಸಹಕಾರದೊಂದಿಗೆ ಶಿಬಿರ ಆಯೋಜನೆಗೊಳ್ಳಲಿದೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪ್ಪಿನಂಗಡಿಯ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರ ಮಾರ್ಗದರ್ಶನದೊಂದಿಗೆ ಕಾಲೇಜಿನ ಪ್ರಾಂಶುಪಾಲ ರವಿರಾಜ್ ಎಸ್. ಇವರ ನಿರ್ದೇಶನದಂತೆ ಈ ಶಿಬಿರ ಅನುಷ್ಠಾನಗೊಳ್ಳಲಿದೆ. ಶಿಬಿರ ಅಧಿಕಾರಿಗಳಾಗಿ ಡಾ. ಹರಿಪ್ರಸಾದ್ ಎಸ್, ಕೇಶವ ಕುಮಾರ ಬಿ, ಸಂಧ್ಯಾ ಎಂ ಮತ್ತು ಸೀಮಾ ಕಾರ್ಯನಿರ್ವಹಿಸಲಿದ್ದಾರೆ. ಸ್ವಯಂಸೇವಕರುಗಳಾದ ಲಾವಣ್ಯ, ಮನೀಶ್ ಯು, ಅಶ್ವಿನಿ ಎಂ, ಪ್ರಸನ್ನ ಜಿ ಮತ್ತು ರಮ್ಯಾ ಶಿಬಿರದ ನಾಯಕತ್ವ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here