ಪುತ್ತೂರು: ಸುನ್ನಿ ಸ್ಟೂಡೆಂಟ್ ಫೆಡರೇಷನ್, ಸುನ್ನಿ ಯುವಜನ ಸಂಘ, ಕರ್ನಾಟಕ ಮುಸ್ಲಿಂ ಜಮಾಅತ್ ಕೋಲ್ಪೆ ಶಾಖೆ ಆಶ್ರಯದಲ್ಲಿ ಎಸ್ಸೆಸ್ಸೆಫ್ ಕೋಲ್ಪೆ ಶಾಖೆಯ ದಶವಾರ್ಷಿಕ ಸಂಭ್ರಮದ ಅಂಗವಾಗಿ ಬೃಹತ್ ಮದನಿಯಂ ಆಧ್ಯಾತ್ಮಿಕ ಮಜ್ಲೀಸ್ ನಡೆಯಲಿದೆ.
ಎಸ್ಸೆಸ್ಸೆಫ್ ಕೋಲ್ಪೆ ಶಾಖೆಯು 10ನೇ ವರ್ಷಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ಅಬ್ದುಲ್ ಲತೀಫ್ ಸಖಾಫಿ ಉಸ್ತಾದರ ನೇತೃತ್ವದಲ್ಲಿ “ಮದನಿಯಂ” ಆತ್ಮೀಯ ಮಜ್ಲೀಸ್ ಕಾರ್ಯಕ್ರಮ ಫೆ.20ರಂದು ರಾತ್ರಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಸಯ್ಯದ್ ಕುಟುಂಬದ ನಾಯಕ ಆಸ್ಸಯ್ಯದ್ ಪೂಕುಂಞ ತಂಙಳ್ ಉದ್ಯಾವರ ದುವಾ ಮಜ್ಲೀಸ್ ಗೆ ನೇತೃತ್ವ ನೀಡಲಿದ್ದಾರೆ. ಅದೇ ದಿನ ಅಸರ್ ನಮಾಝಿನ ಬಳಿಕ ಮಾಸಿಕ ಮಲ್ಹರತುಲ್ ಬದ್ರಿಯ್ಯಾ ಮಜ್ಲೀಸ್ ಕಾರ್ಯಕ್ರಮ ನಡೆಯಲಿದೆ. ಹಲವಾರು ಸಾದತ್ ಗಳು ಉಲಮಾ ಉಮಾರಾ ನೇತಾರರು ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.