ಪುತ್ತೂರು: ಒಡಿಯೂರು ಶ್ರೀ ಗುರದೇವದತ್ತ ಸಂಸ್ಥಾನಮ್ ದತ್ತಾಂಜನೇಯ ಕ್ಷೇತ್ರದಲ್ಲಿ ಫೆ.6 ಮತ್ತು 7 ರಂದು ನಡೆಯುವ ರಥೋತ್ಸವ ‘ತುಳುನಾಡ ಜಾತ್ರೆ’, ಶ್ರೀ ಗುರುದೇವ ಆಧ್ಯಾತ್ಮಕೇಂದ್ರ ಲೋಕಾರ್ಪಣಾ ಕಾರ್ಯಕ್ರಮಕ್ಕೆ ಪುತ್ತೂರಿನಿಂದ ಬೃಹತ್ ಹೊರೆಕಾಣಿಕೆ ಮೆರವಣಿಗೆ ನಡೆಯಿತು. ಸುಮಾರು 50ಕ್ಕೂ ಅಧಿಕ ಆಟೋ ರಿಕ್ಷಾ ಮತ್ತು ಇತರೆ ವಾಹನಗಳಲ್ಲಿ ಒಡಿಯೂರಿಗೆ ತೆರಳಿ ಹೊರೆಕಾಣಿಕೆ ಸಮರ್ಪಣೆ ಮಾಡಲಾಯಿತು.
ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಅವರು ತೆಂಗಿನ ಕಾಯಿ ಒಡೆಯುವ ಮೂಲಕ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, ಮನುಷ್ಯನಿಗೆ ಐಶ್ವರ್ಯ ಎಷ್ಟು ಕೊಟ್ಟರು ಸಾಲದು. ಆದರೆ ತನಗೆ ಸಾಕು ಎಂದು ಹೇಳುವುದು ಹೊಟ್ಟೆ ತುಂಬಿದಾಗ ಮಾತ್ರ. ಅದು ಅನ್ನದಾನದ ಮೂಲಕ ನೀಡುವ ಮಹತ್ವದ ಸೇವೆ. ಈ ನಿಟ್ಟಿನಲ್ಲಿ ಒಡಿಯೂರಿಗೆ ಸಮರ್ಪಣೆ ಮಾಡುವ ಹೊರೆಕಾಣಿಕೆ ಭಕ್ತರ ಹಸಿವನ್ನು ನೀಗಿಸಲಿ ಎಂದರು.
ತುಳುನಾಡ ಜಾತ್ರೆ- ಒಡಿಯೂರು ರಥೋತ್ಸವ ಸಮಿತಿ ಕಾರ್ಯಾಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ ಅವರು ಮಾತನಾಡಿ, ಭಕ್ತರು ಉತ್ತಮ ರೀತಿಯಲ್ಲಿ ಹೊರೆಕಾಣಿಕೆ ತಂದೊಪ್ಪಿಸಿದ್ದಾರೆ. ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಗುರುದೇವಾ ಬಳಗದ ಕಾರ್ಯದರ್ಶಿ ಹರಿಣಾಕ್ಷಿ ಜೆ. ಶೆಟ್ಟಿ ಸ್ವಾಗತಿಸಿದರು.
ಈ ಸಂದರ್ಭ ಒಡಿಯೂರು ಗುರುದೇವಾ ಸೇವಾ ಬಳಗದ ಪುತ್ತೂರು ಘಟಕದ ಅಧ್ಯಕ್ಷ ಸುಧೀರ್ ನೋಂಡ, ಕೋಶಾಧಿಕಾರಿ ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು, ಕೃಷ್ಣ ಎಂ ಅಳಿಕೆ, ಚಂದ್ರಹಾಸ ಶೆಟ್ಟಿ, ಒಡಿಯೂರು ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ನಿರ್ದೇಶಕರಾದ ಜಯಪ್ರಕಾಶ್ ರೈ ಭವಾನಿಶಂಕರ ಶೆಟ್ಟಿ, ವಜ್ರಮಾತ ಮಹಿಳಾ ಘಟಕದ ಅಧ್ಯಕ್ಷೆ ನಯನಾ ರೈ, ಚಂದ್ರಪ್ರಭಾ, ಗ್ರಾಮ ವಿಕಾಸ ಯೋಜನೆ ಸೇವಾ ದೀಕ್ಷೆ ಸುಜಾತ, ದಯಾನಂದ ರೈ ಮಿತ್ರಂಪಾಡಿ, ಸಂತೋಷ್ ರೈ ಕೈಕಾರ, ರವಿಪ್ರಸಾದ್ ಶೆಟ್ಟಿ, ನವೀನ್‌ಚಂದ್ರ ನಾಯ್ಕ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.