ಪುತ್ತೂರು: ಒಳಮೊಗ್ರು ಗ್ರಾಮದ ಮೊಡಪ್ಪಾಡಿಗುತ್ತು ತರವಾಡು ಮನೆಯ ಶ್ರೀ ಜಠಾಧಾರಿ ಹಾಗೂ ಪರಿವಾರ ದೈವಗಳ ವಾರ್ಷಿಕ ನೇಮೋತ್ಸವ ಫೆ.11 ಮತ್ತು 12ರಂದು ನಡೆಯಲಿದ್ದು ಇದರ ಗೊನೆ ಮುಹೂರ್ತ ಕಾರ್ಯ ಫೆ.4 ರಂದು ಬೆಳಿಗ್ಗೆ ದೈವಸ್ಥಾನದ ಬಳಿ ನಡೆಯಿತು.
ಕುಟುಂಬದ ಯಜಮಾನ ತಿಮಪ್ಪ ರೈ, ಜತ್ತಪ್ಪ ರೈ, ದೈವದ ಪರಿಚಾರಕರು, ಮೊಡಪ್ಪಾಡಿಗುತ್ತು ಕುಟುಂಬಸ್ಥರು, ಬಂಧುಗಳು ಗ್ರಾಮಸ್ಥರು ಉಪಸ್ಥಿತರಿದ್ದರು.