ಪುತ್ತೂರು: ಹೊಸಮನೆ ಕ್ರಿಕೆಟರ್ಸ್ ಆರ್ಯಾಪು ಇದರ ಆಶ್ರಯದಲ್ಲಿ ಆರ್ಯಾಪಿನ ಇತಿಹಾಸದಲ್ಲೇ ಪ್ರಥಮ ಬಾರಿಗೆ 10 ತಂಡಗಳ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟ ’ ಆರ್ಯಾಪು ಪ್ರೀಮಿಯರ್ ಲೀಗ್ ಸೀಸನ್ 01 ’ ಫೆ. 8 ಮತ್ತು 9ರಂದು ಆರ್ಯಾಪು ಗ್ರಾಮದ ಕಾರ್ಪಾಡಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಫೆ.9ರ ಸಮಾರೋಪ ಸಮಾರಂಭದ ಬಳಿಕ ಆರ್ಯಾಪು ಮ್ಯೂಸಿಕಲ್ ನೈಟ್ ಕಾರ್ಯಕ್ರಮ ನಡೆಯಲಿದೆ ಎಂದು ಹೊಸಮನೆ ಕ್ರಿಕೆಟರ್ಸ್ನ ಅಧ್ಯಕ್ಷ ಧನುಷ್ ಹೊಸಮನೆ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.
ಶಾಸಕ ಅಶೋಕ್ ಕುಮಾರ್ ರೈ ಅವರು ಪಂದ್ಯಾಟದ ಸಭಾ ಕಾರ್ಯಕರಮ ಉದ್ಘಾಟಿಸಲಿದ್ದಾರೆ. ಸಂಸದ ಕ್ಯಾ| ಬ್ರಿಜೇಶ್ ಚೌಟ ಅವರು ಕ್ರೀಡಾಂಗಣ ಉದ್ಘಾಟನೆ ಮಾಡಲಿದ್ದಾರೆ. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ. ಶ್ರೀ ವಿಷ್ಣುಮೂರ್ತಿ ಅನ್ನಪೂರ್ಣೇಶ್ವರಿ ಕ್ಷೇತ್ರದ ಧರ್ಮದರ್ಶಿ ಪ್ರೀತಂ ಪುತ್ತೂರಾಯ ಕುಕ್ಕಾಡಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ವೇ ಮೂ ಸಂದೀಪ್ ಕಾರಂತ್ ಸಹಿತ ಹಲವಾರು ಮಂದಿ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಫೆ.9ರಂದು ಸಂಜೆ ಗಂಟೆ 5 ರಿಂದ ಸಮಾರೋಪ ಸಮಾರಂಭ ನಡೆಯಲಿದೆ. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ರಸ್ಲಿಂಗ್ ಅಸೋಸಿಯೇಶನ್ ಅಧ್ಯಕ್ಷ ಗುಣರಂಜನ್ ಶೆಟ್ಟಿ ಮತ್ತು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅವರು ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ. ಅನೇಕ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದವರು ಹೇಳಿದರು.
10 ತಂಡಗಳ ಲೀಗ್ ಮಾದರಿಯ ಪಂದ್ಯಾಟ:
10 ತಂಡಗಳ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟದಲ್ಲಿ ತಂಡದ ನೇತೃತ್ವವನ್ನು ಆಯಾ ಮಾಲಕರು ವಹಿಸಿದ್ದಾರೆ. ಡಾ. ಸುರೇಶ್ ಪುತ್ತೂರಾಯ ಅವರ ನೇತೃತ್ವದ ಟೀಮ್ ವಿಷ್ಣುಮೂರ್ತಿ ಸಂಪ್ಯ, ಗಂಗಾಧರ ಅಮೀನ್ ಹೊಸಮನೆ ಅವರ ನೇತೃತ್ವದ ಹೊಸಮನೆ ಕ್ರಿಕೆಟರ್ಸ್, ಜಯಂತ ಶೆಟ್ಟಿ ಕಂಬಳತ್ತಡ್ಡ ಅವರ ನೇತೃತ್ವದ ಟೀಮ್ ರತ್ನಶ್ರೀ ಪುತ್ತೂರು, ನಿತಿನ್ ಪಕ್ಕಳ ಅವರ ನೇತೃತ್ವದ ಶ್ರೀದತ್ತ ಕ್ರಿಕೆಟರ್ಸ್, ಪ್ರೀತಮ್ ಮೇರ್ಲ ಅವರ ಮಾಲಕತ್ವದ ಟೀಮ್ ಎಸ್.ಕೆ.ಸಿ ಪುತ್ತೂರು, ಬಾಲಚಂದ್ರ ಗೌಡ ಅವರ ನೇತೃತ್ವದ ಟೀಮ್ ಕಾರ್ಪಾಡಿ, ಶರತ್ ಆಳ್ವ ಅವರ ಮಾಲಕತ್ವದ ಸೆವೆನ್ ಡೈಮಂಡ್ಸ್ ಸ್ಪೋರ್ಟ್ಸ್ ಆಂಡ್ ಆರ್ಟ್ಸ್ ಕ್ಲಬ್ ಪುತ್ತೂರು, ಸಂತೋಷ್ ಸುವರ್ಣ ಮೇರ್ಲ ಅವರ ಮಾಲಕತ್ವದ ಆರ್ಯಾನ್ ಮೂನ್ಸ್ಟಾರ್ ಮೇರ್ಲ, ಸುರೇಶ್ ಪೆಲತ್ತಡಿ ಅವರ ಮಾಲಕತ್ವದ ಸ್ವರ್ಣ ಸ್ಟ್ರೈಕರ್ಸ್, ನರೇಂದ್ರ ನಾಯಕ್ ಮರಕ ಅವರ ಮಾಲಕತ್ವದ ಮರಕ್ಕ ಚಾಲೆಂಜರ್ಸ್ ಪಂದ್ಯಾಟದಲ್ಲಿ ಭಾಗವಹಿಸಲಿದೆ. ವಿಜೇತರಿಗೆ ರೂ. 25 ಸಾವಿರ ನಗದು ಮತ್ತು ಟ್ರೋಫಿ, ದ್ವಿತಿಯ ಬಹುಮಾನವಾಗಿ ರೂ.15ಸಾವಿರ ನಗದು ಮತ್ತು ಟ್ರೋಫಿ ನೀಡಲಾಗುವುದು ಎಂದು ಹೊಸಮನೆ ಕ್ರಿಕೆಟರ್ಸ್ನ ಕಾರ್ಯದರ್ಶಿ ಪವನ್ ಶೆಟ್ಟಿ ಕಂಬಳತ್ತಡ್ಡ ತಿಳಿಸಿದರು.
ಸಮಾರೋಪದ ಬಳಿಕ ಮ್ಯೂಸಿಕಲ್ ನೈಟ್:
ಫೆ.9ರಂದು ಕ್ರಿಕೆಟ್ ಪಂದ್ಯಾಟದ ಸಮಾರೋಪದ ಬಳಿಕ ಆರ್ಯಾಪು ಮ್ಯೂಸಿಕಲ್ ನೈಟ್ ನಡೆಯಲಿದೆ. ಬಿಗ್ಬಾಸ್ ಖ್ಯಾತಿಯ ಧನ್ರಾಜ್ ಆಚಾರ್ಯ, ಶರದಿ ಪಾಟೀಲ್, ರೂಪೇಶ್ ಶೆಟ್ಟಿ ಸಹಿತ ಹಲವಾರು ಮಂದಿ ಕಲಾವಿದರು ಪ್ರೇಕ್ಷಕರನ್ನು ರಂಜಿಸಲಿದ್ದಾರೆ ಎಂದು ಧನುಷ್ ಹೊಸಮನೆ ತಿಳಿಸಿದ್ದಾರೆ.