




ಪುತ್ತೂರು: ಬಾರ್ಯ ಗ್ರಾಮ ಬೆಳ್ತಂಗಡಿ ತಾಲೂಕಿನ ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನ ಹಾಗೂ ಪರಿಹಾರ ದೇವಗಳ ಪ್ರತಿಷ್ಠಾ ವಾರ್ಷಿಕ ಮಹೋತ್ಸವ ಹಾಗೂ ನೇಮೋತ್ಸವದ ಪ್ರಯುಕ್ತ ಫೆ.6ರಂದು ರಾತ್ರಿ ಗಂಟೆ 9.00ಕ್ಕೆ ಹಾಗೂ ಫೆ.11ರಂದು ಬೆಳ್ತಂಗಡಿ ಶ್ರೀ ದುರ್ಗಾ ಕಾಳಿಕಾಂಬಾ ಕ್ಷೇತ್ರ ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ಪ್ರಯುಕ್ತ ರಾತ್ರಿ ಗಂಟೆ 9ಕ್ಕೆ ಸರಿಯಾಗಿ ಗಯಾಪದ ಕಲಾವಿದೆರ್ ಉಬಾರ್ ಇವರ ಅಭನಯದ “ನಾಗ ಮಾಣಿಕ್ಯ” ತುಳು ಚಾರಿತ್ರಿಕ ಪೌರಾಣಿಕ ನಾಟಕ ಮೂಡಿ ಬರಲಿದೆ.




ಬಾಲಕೃಷ್ಣ ಪೂಜಾರಿ ನಿರಾಲ, ಪೆರುವಾಯಿ ಸಾರಥ್ಯ ವಹಿಸಿದ್ದಾರೆ. ತುಳುನಾಡ ಕಲಾತಪಸ್ವಿ ರವಿಶಂಕರ ಶಾಸ್ತ್ರೀ ಪುಣಚ ರಚಿಸಿ, ನಿರ್ದೇಶಿಸಿದ್ದಾರೆ. ಕಾರ್ತಿಕ್ ಶಾಸ್ತ್ರಿ ಮಣಿಲ ಇವರ ಸಂಗೀತ, ಉದಯ್ ಆರ್. ಪುತ್ತೂರು ಇವರ ಸಾಹಿತ್ಯ, ಸಂಧ್ಯಾಶ್ರೀ ಹಿರೇಬಂಡಾಡಿ ಇವರ ನೃತ್ಯ ಸಂಯೋಜನೆ, ರಾಜೇಶ್ ಶಾಂತಿನಗರ ಇವರ ಸಂಪೂರ್ಣ ಸಲಹೆ ಸಹಕಾರದೊಂದಿಗೆ ರಂಗ ವಿನ್ಯಾಸದ ವಿಶೇಷ ಪರಿಕಲ್ಪನೆ, ಲಿತು ಸೌಂಡ್ಸ್ ಮತ್ತು ಲೈಟ್ಸ್, ಇದರ ಕೃಷ್ಣ ಮುಂಡ್ಯ, ಸಿದ್ದು ಬೆದ್ರ ವಿಜಯ ಶಾಂತಿನಗರ ಹರ್ಷಶಾಂತಿ ನಗರ ರವರ ಕೈ ಚಳಕ, ಪ್ರದೀಪ್ ಕಾವುರವರ ಮುಖ ವರ್ಣಿಕೆ,ಗುಣಕರ ಅಗ್ನಡಿಯವರ ಸಹಕಾರದೊಂದಿಗೆ ಪ್ರದರ್ಶನಗೊಳ್ಳಲಿದೆ.





ಕಲಾವಿದರಾಗಿ ಕಿಶೋರ್ ಜೋಗಿ ಉಬಾರ್, ದಿವಾಕರ್ ಸುರ್ಯ, ಸತೀಶ್ ಶೆಟ್ಟಿ ಹೆನ್ನಾಳ, ರಂಗಯ್ಯ ಬಲ್ಲಾಳ್ ಕೆದಂಬಾಡಿ ಬೀಡು, ರಾಜೇಶ್ ಶಾಂತಿನಗರ, ರಾಜಶೇಖರ ಶಾಂತಿನಗರ, ಅನುಷಾ ಜೋಗಿ ಪುರುಷರ ಕಟ್ಟೆ, ಸಂಧ್ಯಾಶ್ರೀ ಹಿರೇಬಂಡಾಡಿ, ಸುನಿಲ್ ಪೆರ್ನೆ, ಚೇತನ್ ಪಡೀಲ್, ಲಕ್ಷ್ಮಣ ಬೆಳ್ಳಿಪ್ಪಾಡಿ, ಉಷಾ ಲಕ್ಷ್ಮಣ ಬೆಳ್ಳಿಪ್ಪಾಡಿ, ಉದಯ್. ಆರ್.ಪುತ್ತೂರು, ಅನೀಶ್ ಉಬಾರ್, ಎ. ಎನ್.ಕೊಳಂಬೆ ರಾಮಕುಂಜ, ಭರತ್ ಕುಮಾರ್ ಶಾಂತಿನಗರ, ಲಿತಿನ್ ಶಾಂತಿನಗರ, ಹರ್ಷ ಶಾಂತಿನಗರ, ಹೃತೀಕಾ ಕೆ ಬೆಳ್ಳಿಪ್ಪಾಡಿ, ವಿಲಾಸಿನಿ ಶಾಂತಿನಗರ, ಮನ್ವಿತ್ ಬೆಳ್ಳಿಪ್ಪಾಡಿ, ಬಿ. ಪ್ರಣಿ ತ. ಶಾಂತಿನಗರ ಅಭಿನಯಿಸಲಿದ್ದಾರೆ ಎಂದು ತಂಡದ ಸಂಚಾಲಕ ಕಿಶೋರ್ ಜೋಗಿ ಉಬಾರ್ ತಿಳಿಸಿದ್ದಾರೆ.
ನಾಟಕ ಪ್ರದರ್ಶನದ ಬುಕಿಂಗ್ಗೆ ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿ.9902543273, 8073641071, 9008136330, 9980389016







