ಪುತ್ತೂರು: ಪುತ್ತೂರು ಯಂಗ್ ಬ್ರಿಗೇಡ್ ಸೇವಾದಳದ ಅಧ್ಯಕ್ಷರಾಗಿ ಗಗನ್ ದೀಪ್ ಕರ್ಮಲ ರವರು ನೇಮಕಗೊಂಡಿದ್ದಾರೆ. ಕರ್ನಾಟಕ ಯಂಗ್ ಬ್ರಿಗೇಡ್ ಸೇವಾದಳದ ಅಧ್ಯಕ್ಷ ಜುನೈದ್ ಪಿ.ಕೆ.ರವರು ಗಗನ್ ದೀಪ್ ರವರನ್ನು ನೇಮಕ ಮಾಡಿ ಆದೇಶಿಸಿದ್ದಾರೆ.
ಗಗನ್ ದೀಪ್ ರವರು ಪುತ್ತೂರು ಆಲ್ ಕಾಲೇಜ್ ಅಧ್ಯಕ್ಷರಾಗಿದ್ದಾರೆ. ಬನ್ನೂರು ಕರ್ಮಲ ನಿವಾಸಿ ರೋಹಿತ್ವಾಶ ಮತ್ತು ಶಶಿಕಲಾ ದಂಪತಿ ಪುತ್ರರಾಗಿರುವ ಇವರು ಪ್ರಸ್ತುತ ಮಂಗಳೂರು ಶ್ರೀನಿವಾಸ್ ಕಾಲೇಜಿನಲ್ಲಿ ಹೋಟೆಲ್ ಮ್ಯಾನೇಜ್ಮೆಂಟ್ ವಿದ್ಯಾಭ್ಯಾಸವನ್ನು ನಡೆಸುತ್ತಿದ್ದಾರೆ.