ಪುತ್ತೂರು :ದರ್ಬೆ ಪೋಸ್ಟ್ ಆಫೀಸ್ ಎದುರುಗಡೆಯ ಮುಖ್ಯ ರಸ್ತೆಗೆ ತಾಗಿಕೊಂಡಿರುವ ರಾಜ ಕಾಲುವೆಯಲ್ಲಿ ನೀರು ನಿಂತು ಗಬ್ಬು ನಾರುತ್ತಿದೆ. ಇಲ್ಲಿ ನಡೆದುಕೊಂಡು ಹೋಗುವ ಜನರಿಗೆ ಮತ್ತು ಕಾಲುವೆಯ ಪಕ್ಕದಲ್ಲಿ ವಾಸಿಸುವ ಮನೆಯವರು ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಈ ಭಾಗದಲ್ಲಿ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ನಿಶ್ಚಳವಾಗಿದೆ. ಇದಕ್ಕೆ ಸಂಬಂಧಪಟ್ಟ ನಗರಸಭಾ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಶಾಸಕರು ಕೂಡಲೇ ಸ್ಪಂಧಿಸಿ ಕ್ರಮ ಕೈಗೊಳ್ಳಬೇಕಾಗಿ ನಾಗರಿಕರ ಆಗ್ರಹವಾಗಿದೆ.