ಮನೆ ಧ್ವಂಸ ಪ್ರಕರಣ: ರಾಜೇಶ್‌ ಬನ್ನೂರು ಸಹಿತ 9 ಮಂದಿಯ ವಿರುದ್ಧ ಪ್ರಕರಣ ದಾಖಲು

0

ಪುತ್ತೂರು: ಮುಂಜಾನೆ ಸಮಯದಲ್ಲಿ ರಾಜೇಶ್‌ ಬನ್ನೂರು ಮತ್ತವರ 9 ಮಂದಿಯ ತಂಡವೊಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾಗಕ್ಕೆ ಅಕ್ರಮವಾಗಿ ಪ್ರವೇಶಗೈದು ಕಟ್ಟಡವನ್ನು ಮನೆಯನ್ನು ದ್ವಂಸ ಮಾಡಿದ್ದಾರೆ ಹಾಗೂ ಜಾಗವನ್ನು ಬಿಡುವುದಿಲ್ಲ ಎಂದು ತಿಳಿಸಿ ಕಾರಿನಲ್ಲಿ ಪರಾರಿಯಾಗಿದ್ದಾರೆ ಎಂದು ಆರೋಪಿಸಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎಕ್ಸಿಕ್ಯೂಟಿವ್‌ ಆಫೀಸರ್‌ ಕೆ.ವಿ ಶ್ರೀನಿವಾಸ್‌ ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ದೂರುದಾರರು ನೀಡಿದ ದೂರಿನಲ್ಲೇನಿದೆ:
ಈ ಪ್ರಕರಣದ ಸಾರಾಂಶವೆನೆಂದರೆ ಪಿರ್ಯಾದಿದಾರರು ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದು, ದಿನಾಂಕ:05.02.2025 ರಂದು ಬೆಳಗಿನ ಜಾವ 04.00 ಗಂಟೆಯ ಸಮಯ ಪಿರ್ಯಾದಿದಾರರು ಮನೆಯಲ್ಲಿರುವಾಗ ಪಿರ್ಯಾದಿದಾರರಿಗೆ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ದೂರವಾಣಿ ಕರೆ ಮಾಡಿ ದೇವಸ್ಥಾನಕ್ಕೆ ಸಂಬಂಧಿಸಿದ ಕಟ್ಟಡವನ್ನು ಆರೋಪಿ ಮತ್ತು ಇತರ 09 ಜನ ಕಿಡಿಕೇಡಿಗಳು ಧ್ವಂಸ ಮಾಡಿ ಕೆಎ 19 ಎಂಎಫ್ 3276 ನೇ ಕಾರಿನಲ್ಲಿ, ಪರಾರಿಯಾಗಿರುತ್ತಾರೆಂದು ತಿಳಿದ ಕೂಡಲೇ ಪಿರ್ಯಾದಿದಾರರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರಕ್ಕೆ ಬಂದು ತಿಳಿಯಲಾಗಿ ಆರೋಪಿತ ರಾಜೇಶ್ ಬನ್ನೂರು ಎಂಬವರು ಇತರ 09 ಜನ ಅಪರಿಚಿತ ವ್ಯಕ್ತಿಗಳೊಂದಿಗೆ ಆಕ್ರಮಕೂಟ ಸೇರಿಕೊಂಡು ದೇವಸ್ಥಾನದ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ದೇವಸ್ಥಾನ ಜಾಗದಲ್ಲಿದ್ದ ಕಟ್ಟಡವನ್ನು ಧ್ವಂಸಗೊಳಿಸಿದಲ್ಲದೇ ಆರೋಪಿಯು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರನ್ನು ಉದ್ದೇಶಿಸಿ ನಾನು ಬಿಟ್ಟು ಕೊಡುವುದಿಲ್ಲ.ನಿಮಗೆ ತಾಕತ್ತಿದ್ದರೆ ನನ್ನನ್ನು ಹೊರಗೆ ಹಾಕಿ ನನ್ನ ಸಹವಾಸಕ್ಕೆ ಬಂದರೆ ಜನರನ್ನು ಸೇರಿಸಿ ಗಲಾಟೆ ಮಾಡಿಸುತ್ತೇನೆ ಇದರ ಬಗೆ, ಕೋರ್ಟ್ ಕೇಸ್ ಹಾಕಿ ನೀವು ಹೇಗೆ ದೇವಸ್ಥಾನದ ವಶಕ್ಕೆ ಮಾಡುತ್ತೀರ ನಾನು ನೋಡುತ್ತೇನೆ ಎಂದು ದಮ್ಕಿ ಹಾಕಿ ಅಲ್ಲಿಂದ ಪರಾರಿಯಾಗಿರುತ್ತಾರೆ ಎಂದು ದೂರು ನೀಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಎನ್‌ಎಸ್2023 ಯು/ಎಸ್‌ 189(2)191(2),329(3),324(5),351(2),190ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here