ಕಡಬ ತಾಲೂಕು ಆಡಳಿತದಿಂದ ಸನ್ಮಾನಗೊಂಡ ಮೀರಾ ಸಾಹೇಬ್‌ರವರಿಗೆ ಕಸ್ತೂರಿ ರಂಗನ್ ಹೋರಾಟ ಸಮಿತಿ ವತಿಯಿಂದ ಸನ್ಮಾನ

0

ಕಡಬ: ಜ.26ರಂದು ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಡಬ ತಾಲೂಕು ಆಡಳಿತ ಹಾಗೂ ಕಡಬ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸಮಾಜ ಸೇವೆಗಾಗಿ ಸನ್ಮಾನ ಸ್ವೀಕರಿಸಿದ ದ.ಕ ಜಿಲ್ಲಾ ಪರಿಷತ್ ಮಾಜಿ ಸದಸ್ಯರು, ಕಸ್ತೂರಿ ರಂಗನ್ ವರದಿ ವಿರುದ್ದದ ಹೋರಾಟ ಸಮಿತಿಯ ಮುಂಚೂಣಿ ನಾಯಕರೂ ಆದ ಸಯ್ಯದ್ ಮೀರಾ ಸಾಹೇಬ್ ಕಡಬ ಅವರಿಗೆ ಕಸ್ತೂರಿ ರಂಗನ್ ವರದಿ ವಿರುದ್ದದ ಹೋರಾಟ ಸಮಿತಿ ವತಿಯಿಂದ ಸುಬ್ರಹ್ಮಣ್ಯದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು.

ಹೋರಾಟ ಸಮಿತಿಯ ಸಂಚಾಲಕ ಕಿಶೋರ್ ಶೀರಾಡಿ, ನಿವೃತ್ತ ಪ್ರಾಂಶುಪಾಲ ತಿಲಕ್, ಎಂ.ಬಿ ಅಶೋಕ್ ಕುಮಾರ್, ಅಚ್ಚುತ ಗೌಡ ಕೆ, ಜಯಪ್ರಕಾಶ್ ಕೂಜುಗೋಡು ಹಾಗೂ ಗ್ರಾ.ಪಂ ಪ್ರತಿನಿಧಿಗಳು, ಸಹಕಾರಿ ಸಂಘಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here