ರಾಮಕುಂಜ: ವಿವಿಧ ದೇವಸ್ಥಾನ, ದೈವಸ್ಥಾನಗಳಲ್ಲಿ ನಡೆಯುವ ವಾರ್ಷಿಕ ಜಾತ್ರೆ, ನೇಮೋತ್ಸವ ಸಂದರ್ಭದಲ್ಲಿ ವಾದ್ಯ ನುಡಿಸುತ್ತಿದ್ದ ಹಳೆನೇರೆಂಕಿ ಗ್ರಾಮದ ರಾಮಜಾಲು ನಿವಾಸಿ ಕೊರಗಪ್ಪ ಶೇರಿಗಾರ(70ವ.)ಅವರು ಅಲ್ಪಕಾಲದ ಅಸೌಖ್ಯದಿಂದ ಫೆ.5ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು.
ಕಿರಿಯ ವಯಸ್ಸಿನಲ್ಲೇ ವಾದ್ಯ ನುಡಿಸುತ್ತಿದ್ದ ಕೊರಗಪ್ಪ ಶೇರಿಗಾರ ಅವರು ನಡುಮಜಲು ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ರಾಮಕುಂಜ ಶ್ರೀ ರಾಮಕುಂಜೇಶ್ವರ ದೇವಸ್ಥಾನ, ಹಳೆನೇರೆಂಕಿ ನೇರೆಂಕಿಗುತ್ತು ದೈವಸ್ಥಾನ, ಕೊಣಾಲು ಗ್ರಾಮದ ಕೊಣಾಲು ದೇವತೆ ದೈವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನ, ದೈವಸ್ಥಾನಗಳಲ್ಲಿ ನಡೆಯುವ ವಾರ್ಷಿಕ ಜಾತ್ರೆ, ನೇಮೋತ್ಸವದ ಸಂದರ್ಭದಲ್ಲಿ ವಾದ್ಯ ನುಡಿಸುತ್ತಿದ್ದರು. ಕಳೆದ 1 ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದರು.
ಮೃತರು ಪತ್ನಿ ಚಂದ್ರಾವತಿ, ಪುತ್ರಿಯರಾದ ಯಶೋಧ, ಸುನಂದ, ಜಯಶ್ರೀ, ಪುತ್ರರಾದ ಗಣೇಶ, ಜ್ಞಾನಚಂದ್ರ, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ. ಮೃತರ ಮನೆಗೆ ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗುರುಪ್ರಸಾದ ರಾಮಕುಂಜ, ರಾಮಕುಂಜ ಗ್ರಾ.ಪಂ.ಸದಸ್ಯ ಪ್ರಶಾಂತ್ ಆರ್.ಕೆ.ಸಹಿತ ಹಲವು ಗಣ್ಯರು ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.