ಬೆಳ್ತಂಗಡಿ: ಶಾಸಕ ಹರೀಶ್ ಪೂಂಜ ಅವರಿಗೆ ಸಂಬಂಧಿಸಿದಂತೆ ಇಡೀ ತಾಲೂಕಿನಾದ್ಯಂತ ಸಂಚಲನ ಸೃಷ್ಠಿಸುವ ಸುದ್ದಿಯೊಂದು ಹರಿದಾಡುತ್ತಿದೆ. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರವನ್ನು ಎರಡನೇ ಬಾರಿ ಪ್ರತಿನಿಧಿಸುತ್ತಿರುವ ಹರೀಶ್ ಪೂಂಜ ಅವರು ಮುಂದಿನ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಸ್ಪರ್ಧಿಸದೇ ಇರಲು ನಿರ್ಧರಿಸಿದ್ದಾರೆ ಎಂದು ಸಖತ್ ಸದ್ದು ಮಾಡುತ್ತಿರುವ ಈ ಸುದ್ದಿ ಸುಳ್ಳಾಗಲಿ ಎಂದು ಅವರ ಅಭಿಮಾನಿಗಳು ಹಾರೈಸುತ್ತಿದ್ದಾರೆ. ಕೆಲವು ದಿನಗಳಿಂದ ಸ್ವತಃ ಹರೀಶ್ ಪೂಂಜ ಅವರೇ ತನ್ನ ಅತ್ಯಾಪ್ತರಲ್ಲಿ ತಾನು ಮುಂದಿನ ಚುನಾವಣೆಯಲ್ಲಿ ಬೆಳ್ತಂಗಡಿಯಿಂದ ಸ್ಪರ್ಧಿಸುವುದಿಲ್ಲ, ತಾನು ಬೆಂಗಳೂರು / ಪುತ್ತೂರಿನಲ್ಲಿ ಟಿಕೆಟ್ ಆಕಾಂಕ್ಷಿ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ಎಷ್ಟು ಸತ್ಯ ಎಷ್ಟು ಮಿಥ್ಯ ಎಂಬುದನ್ನು ರಾಜ್ಯ ಬಿಜೆಪಿ ಯುವಮೋರ್ಚಾದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಹರೀಶ್ ಪೂಂಜ ಅವರೇ ಸ್ಪಷ್ಟಪಡಿಸಬೇಕಿದೆ. ಏನೇ ಆಗಲಿ ಭ್ರಷ್ಟಾಚಾರದ ವಿರುದ್ಧ ತೊಡೆ ತಟ್ಟಿ ಪ್ರತಿಜ್ಞೆ ಮಾಡಿರುವ ಹರೀಶ್ ಪೂಂಜ ಅವರು ಯಾವುದೇ ಕಾರಣಕ್ಕೂ ಬೆಳ್ತಂಗಡಿ ಕ್ಷೇತ್ರ ತ್ಯಜಿಸಬಾರದು ಎಂದು ಸುದ್ದಿ ಬಳಗ ಮನವಿ ಮಾಡುತ್ತಿದೆ.
ಮತ್ತು ಸುದ್ದಿ ಉದಯ ಮರ್ಜ್ ಆಗಿ ಒಂದೇ ಪತ್ರಿಕೆ ಆದರೆ, ಚಾನೆಲ್‌ಗಳು ಸೇರಿ ಕೆಲಸ ಮಾಡಿದರೆ ಹೇಗೆ
*ಬೆಳ್ತಂಗಡಿ ಸುದ್ದಿ ಬಿಡುಗಡೆಗೆ 39ನೇ ವರ್ಷದಲ್ಲಿದೆ. 40ನೇ ವರ್ಷದ ಆಚರಣೆ ನಡೆಯಲಿದೆ
*ಇಷ್ಟವರೆಗೆ ಸುದ್ದಿಬಿಡುಗಡೆಯಲ್ಲಿ ಕೆಲಸ ಮಾಡಿದ ಎಲ್ಲರನ್ನೂ ಗುರುತಿಸಲಿದ್ದೇವೆ.
*ಈ ಹಿನ್ನೆಲೆಯಲ್ಲಿ – ಸುದ್ದಿ ಉದಯ ಮರ್ಜ್ ಆಗಿ ಒಂದೇ ಪತ್ರಿಕೆ ಆದರೆ ಹೇಗೆ ಎಂಬ ಪ್ರಶ್ನೆ ಕೆಲವರು ಕೇಳಿದ್ದಾರೆ.
*ಪತ್ರಿಕೋದ್ಯಮ ನಮಗೆ ಪ್ರತಿಷ್ಟೆ ಅಲ್ಲ. ಜನಪರವಾಗಿ ಕೆಲಸ ಮಾಡುವ ಎಲ್ಲರನ್ನೂ ನಾವು ಸ್ವೀಕರಿಸುತ್ತೇವೆ, ಸೇರಿ ಕೊಳ್ಳುತ್ತೇವೆ. ಜನರಿಗೆ ಪ್ರಯೋಜನವಾಗುವ ನಷ್ಟ ಕಡಿಮೆ ಮಾಡುವ ಎಲ್ಲಾ ಕೆಲಸಕ್ಕೆ ನಮ್ಮ ಬೆಂಬಲ ಸದಾ ಇರುತ್ತದೆ.
*ಚಾನೆಲ್‌ಗಳು ಅನಾರೋಗ್ಯಕರವಾಗಿ ಸ್ಪರ್ಧಿಸದೆ, ಹಣ ಕೊಡುವವರ ಹಿಂದೆ ಬೀಳದೆ, ಗುಣಮಟ್ಟ ಹಾಳು ಮಾಡಿಕೊಳ್ಳದೆ, ಒಟ್ಟಾಗಿ ಸೇರಿ ಉತ್ತಮ ಗುಣಮಟ್ಟದೊಡನೆ, ಗೌರವಪೂರ್ವಕವಾಗಿ ಸಂಪಾದನೆ ಹೆಚ್ಚಿಸಿಕೊಂಡು, ಖರ್ಚು ಕಡಿಮೆ ಮಾಡಿಕೊಳ್ಳುವ ವಿಷಯಕ್ಕೂ ನಮ್ಮ ಬೆಂಬಲವಿದೆ.