ಲಕ್ಷ್ಮೀದೇವಿ ಬೆಟ್ಟದ ಲಕ್ಷ್ಮೀ ಅರ್ಪಣ್‌ರವರ ಬ್ರಹ್ಮೋಪದೇಶ

0

ಮಠಾಧೀಶರು,ತಂತ್ರಿಗಳು, ಅರ್ಚಕರು ಸಹಿತ ಸಾವಿರಾರು ಗಣ್ಯರ ಶುಭಾಶೀರ್ವಾದ

ಪುತ್ತೂರು:ಲಕ್ಷ್ಮೀದೇವಿ ಬೆಟ್ಟದ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಧರ್ಮದರ್ಶಿ ಐತ್ತಪ್ಪ ಸಪಲ್ಯರ ಮೊಮ್ಮಗ, ಕೃಷ್ಣಪ್ರಸಾದ್ ಬೆಟ್ಟ ಮತ್ತು ಮಂಜುಳಾ ದಂಪತಿ ಪುತ್ರ ಲಕ್ಷ್ಮೀ ಅರ್ಪಣ್‌ರವರಿಗೆ ಫೆ.7ರಂದು ಕ್ಷೇತ್ರದಲ್ಲಿ ನಡೆದ ಬ್ರಹ್ಮೋಪದೇಶ ಕಾರ್ಯಕ್ರಮಗಳು ಮಠಾಧೀಶರು, ತಂತ್ರಿಗಳು, ಅರ್ಚಕರು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡರು ಹಾಗೂ ಸಾವಿರಾರು ಮಂದಿ ಗಣ್ಯರ ಶುಭಾಶೀರ್ವಾದದೊಂದಿಗೆ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಯಿತು.


ವೇ.ಮೂ ನಾಗರಾಜ್ ಭಟ್‌ರವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಳಿಗ್ಗೆ ಕ್ಷೇತ್ರದಲ್ಲಿ ವಿವಿಧ ವೈದಿಕ ಹಾಗೂ ಧಾರ್ಮಿಕ ವಿಧಿ ವಿಧಾನಗಳು ನೆರವೇರಿತು. ನಂತರ ವೈದಿಕ ವಿದ್ವಾಂಸ ಗಾಯತ್ರಿ ಉಪದೇಶದೊಂದಿಗೆ ಸಂಪ್ರದಾಯದಂತೆ ಲಕ್ಷ್ಮೀ ಅರ್ಪಣ್‌ಗೆ ಬ್ರಹ್ಮೋಪದೇಶ ನೆರವೇರಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳ ನಿಧಿ ಕಾರ್ಯಕ್ರಮದ ಮೂಲಕ ಧಾರ್ಮಿಕ ವಿಧಿ ವಿಧಾನಗಳು ಪೂರ್ಣಗೊಂಡಿತು. ಆರ್‌ಎಸ್‌ಎಸ್‌ನ ಮುಖಂಡರಾದ ಪ್ರವೀಣ್ ಸರಳಾಯ, ನವೀನ್ ಕುಮಾರ್ ಕೈಕಾರ, ರವೀಂದ್ರ ಪಿ.ಜಿ.,ಮೊದಲಾದವರು ಮಂಗಳ ನಿಧಿ ಕಾರ್ಯಕ್ರಮ ನೇರವೇರಿಸಿದರು.


ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮಿಜಿ ಮಾತನಾಡಿ, ಬ್ರಾಹ್ಮಣ, ಕ್ಷತ್ರೀಯ, ವೈಶ್ಯ, ಶೂದ್ರಗಳು ವರ್ಣಾಶ್ರಮಗಳು. ಇದು ಜಾತಿ ಅಲ್ಲ. ಈ ಎಲ್ಲ ನಾಲ್ಕು ವರ್ಣಾಶ್ರಮಗಳಿಗೂ ಮುಂಚೆ ಜನಿವಾರ ಇತ್ತು. ಗುಣ ಕರ್ಮಗಳ ವ್ಯತ್ಯಾಸದಿಂದ ಅದು ಹೋಗುತ್ತಾ ಬಂದಿದೆ. ಈಗ ಸಮಾಜಕ್ಕೆ ಸಂಕ್ರಮಣ ಕಾಲವಾಗಿದೆ. ಲಕ್ಷ್ಮೀ ದೇವಿ ಬೆಟ್ಟದಲ್ಲಿ ಬ್ರಹ್ಮೋಪದೇಶ ನೆರವೇರಿಸುವ ಮೂಲಕ ಸಮಾಜದಲ್ಲಿ ದೇವಿಬೆಟ್ಟ ಕ್ರಾಂತಿಮಾಡಿದೆ. ಈ ಕ್ರಾಂತಿಯಿಂದ ದ್ವಿಜತ್ವದ ಸಂತತಿ ಹೆಚ್ಚಾಗಲಿ. ಈ ಕ್ರಾಂತಿಯನ್ನು ಸಮಾಜ ಧನಾತ್ಮಕವಾಗಿ ಸ್ವೀಕರಿಸಿದಾಗ ದೊಡ್ಡ ಪರಿಣಾಮ ಬೀಳಲಿದೆ. ಲಕ್ಷ್ಮೀಅರ್ಪಣ್‌ಗೆ ಬ್ರಹ್ಮೋಪದೇಶ ಮಾಡುವ ಮೂಲಕ ಅವನಿಗೆ ದಿಜತ್ವದ ಎರಡನೇ ಕಣ್ಣು ತೆರೆಸಿಕೊಟ್ಟಿದೆ ಎಂದ ಅವರು ಮಹಾಕುಂಭ ಮೇಳದ ಸುಸಂದರ್ಭದಲ್ಲಿ ನಡೆಯುತ್ತಿರುವ ಈ ಕ್ರಾಂತಿಯು ದೇಶ, ಜಗತ್ತಿನಲ್ಲಿ ನಡೆದು ಹಿಂದೂ ಸಮಾಜದ ಸದೃಢವಾಗಲು ಸಹಕಾರಿಯಾಗಲಿ ಎಂದು ಹೇಳಿದರು.


ಮಾಣಿಲ ಶ್ರೀಧಾಮ ಕ್ಷೇತ್ರದ ಶ್ರೀ ಮೋಹನದಾಸ ಸ್ವಾಮೀಜಿ ಮಾತನಾಡಿ, ಬ್ರಹ್ಮತ್ವ ಪಡೆಯಲು ಪ್ರತಿಯೊಬ್ಬರಿಗೂ ಅವಕಾಶ. ಲಕ್ಷ್ಮೀ ಆರಾಧನೆ ಮಾಡುತ್ತಿರುವ ಲಕ್ಷ್ಮೀ ದೇವಿ ಬೆಟ್ಟದಲ್ಲಿ ಲಕ್ಷ್ಮೀ ಅರ್ಪಣೆಗೆ ಬ್ರಹ್ಮೋಪದೇಶವಾಗಿದೆ. ಇಂತಹ ಸತ್ಕರ್ಮಗಳನ್ನು ಮಾಡುವ ಯೋಗ ಎಲ್ಲರಿಗೂ ದೊರೆಯಲಿ ಎಂದರು. ಕ್ಷೇತ್ರದ ಜೀರ್ಣೋದ್ಧಾರ ಶೀಘ್ರ ನಡೆಸಿ ಬ್ರಹ್ಮಕಲಶೋತ್ಸವ ನಡೆಯಬೇಕು. ಕ್ಷೇತ್ರದ ಧರ್ಮದರ್ಶಿಯವರು ಕಷ್ಟದ ದಿನಗಳಲ್ಲಿ ಕ್ಷೇತ್ರ ಬೆಳೆಸಿದವರು. ನಾನಾ ಸಮಸ್ಯೆಗಳಿಗೆ ಕ್ಷೇತ್ರದಲ್ಲಿ ಪ್ರಾರ್ಥಿಸಿ ತಮ್ಮ ಸಂಕಷ್ಟ ಪರಿಹರಿಸಿಕೊಂಡಿರುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಬ್ರಹ್ಮೋಪದೇಶ ಪಡೆದ ಲಕ್ಷ್ಮೀ ಅರ್ಪಣ್‌ರವರ ಸಾಧನೆಯಲ್ಲಿ ಇನ್ನಷ್ಟು ಭಕ್ತರನ್ನು ಆಕರ್ಷಿಸುವ ಕ್ಷೇತ್ರವಾಗಿ ಬೆಳೆಯಲಿ. ಪಾಶ್ಚಾತ್ಯ ದೇಶದ ಭಕ್ತರನ್ನು ಆಕರ್ಷಿಸುವ ಮೂಲಕ ಲಕ್ಷ್ಮೀದೇವಿ ಬೆಟ್ಟವು ಇತಿಹಾಸ ನಿರ್ಮಿಸುವ ಕ್ಷೇತ್ರವಾಗಿ ಬೆಳೆಯಲಿ ಎಂದು ಹಾರೈಸಿದರು.


ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಮಾತನಾಡಿ, ಬ್ರಹ್ಮೋಪದೇಶದ ಮೂಲಕ ವೇದಾದ್ಯಯನದ ಅರ್ಹತೆ ನೀಡಲಾಗುತ್ತಿದೆ. ಯಾರೂ ಬೇಕಾದರೂ ಯಾವ ಅರ್ಹತೆ ಪಡೆಬಹುದು ಎಂದು ಸನಾತನ ಹಿಂದೂ ಧರ್ಮದಲ್ಲಿದೆ. ಯಾರೂ, ಯಾವ ಜಾತಿಯಲ್ಲಿ ಹುಟ್ಟಿದರೂ ಅವರು ಪಡೆದುಕೊಳ್ಳುವ ಅರ್ಹತೆ ಮೂಲಕ ವಿವಿಧ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳುವಂತೆ ಬ್ರಾಹ್ಮಣ್ಯವನ್ನು ಪಡೆದುಕೊಳ್ಳಬಹುದು ಎನ್ನುವುದಕ್ಕೆ ಲಕ್ಷ್ಮೀದೇವಿ ಬೆಟ್ಟದ ಕಾರ್ಯ ಜ್ವಲಂತ ಉದಾಹರಣೆಯಾಗಿದ್ದು ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿದ್ದು ಈ ಕಾರ್ಯಕ್ರಮದಿಂದ ಇತಿಹಾಸ ನಿರ್ಮಾಣವಾಗಿದೆ. ವೇದದಲ್ಲಿ ಎಲ್ಲರೂ ಹುಟ್ಟಿನಿಂದ ನಾವು ಸಮಾನರು. ಆಯಾ ಕಾರ್ಯಗಳಿಗೆ ಒಂದು ಅರ್ಹತೆಯಿದೆ. ನ್ಯಾಯಾಲಯದಲ್ಲಿ ನಮ್ಮ ಪರವಾಗಿ ವಾದ ಮಾಡಲು ವಕೀಲರು ಇರುವಂತೆ, ದೇವರಲ್ಲಿ ನಮ್ಮ ಪರವಾಗಿ ಪ್ರಾರ್ಥನೆ ಮಾಡಲು ವೇದಾದ್ಯಯನ ಮುಖ್ಯ. ಅದಕ್ಕೆ ಬ್ರಹ್ಮೋಪದೇಶ ಪಡೆಯುವುದು ಆವಶ್ಯಕವಾಗಿದ್ದು ಕಳೆದ 40ವರ್ಷಗಳಿಂದ ಅದೇ ಸಂಸ್ಕಾರದಲ್ಲಿ ಮುನ್ನಡೆಯುತ್ತಿರುವ ಧರ್ಮದರ್ಶಿ ಐತ್ತಪ್ಪ ಸಪಲ್ಯರ ಕುಟುಂಬ ಇಂದು ಲಕ್ಷ್ಮೀಅರ್ಪಣ್‌ಗೆ ಬ್ರಹ್ಮೋಪದೇಶ ಮಾಡುತ್ತಿದೆ ಎಂದರು.


ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ, ಸಪ್ತ ಋಷಿಗಳು ಯಾರೂ ಬ್ರಾಹ್ಮಣರಲ್ಲ. ಗಾಯತ್ರಿ ಮಂತ್ರ ಉಪದೇಶ ಮಾಡಿದ ವಿಶ್ವಾಮಿತ್ರರೂ ಬ್ರಾಹ್ಮಣರಲ್ಲ. ಆದರೆ ಅವರೇ ಶ್ರೇಷ್ಠ ಎಂದು ಬ್ರಾಹ್ಮಣ ಸಮುದಾಯ ಆರಾಧನೆ ಮಾಡುತ್ತಿದ್ದಾರೆ. ಲಕ್ಷ್ಮೀದೇವಿ ಬೆಟ್ಟದಲ್ಲಿ ಲಕ್ಷ್ಮೀ ಅರ್ಪಣ್‌ಗೆ ಬ್ರಹ್ಮೋಪದೇಶದ ಮೂಲಕ ಅದು ಮತ್ತೆ ಪುನಾರ್ಜನೆಯಾಗುತ್ತಿದೆ. ಈ ಕಾರ್ಯ ಲಕ್ಷ್ಮೀದೇವಿ ಬೆಟ್ಟಕ್ಕೆ ಸೀಮಿತವಾಗಿರದೇ ಎಲ್ಲೆಲ್ಲಿಯೂ ಮೂಡಿಬರಬೇಕು. ಇಡೀ ಹಿಂದೂ ಸಮಾಜಕ್ಕೆ ಧಾರ್ಮಿಕ ಶಿಕ್ಷಣ ಕೊಡುವ ಕೆಲಸ ಇಲ್ಲಿಂದ ಆಗಬೇಕು. ಈ ಕಾರ್ಯವು ರಾಜ್ಯಕ್ಕೆ ಮಾದರಿಯಾಗಿದೆ. ಇದನ್ನು ಅನುಕರಣೆ ಮಾಡುವ ಮೂಲಕ ಹಿಂದೂ ಸಮಾಜ ಮೈದೇಲಬೇಕು. ವಿಶ್ವಕ್ಕೆ ಶಕ್ತಿ ಪ್ರದರ್ಶನವಾಗಬೇಕು. ಸಪ್ತ ಋಷಿಯಂತೆ ಮಾಡಿದ ಮಾರ್ಗದರ್ಶನ ಮಾಡಿದಂತೆ ಲಕ್ಷ್ಮೀಅರ್ಪಣ್‌ರವರು ವಿದ್ವತ್ ವಿಶ್ವಕ್ಕೆ ಪ್ರಕಾಶಮಾನವಾಗಿ ಮೂಡಿಬರಲಿ ಎಂದರು.


ಲಕ್ಷ್ಮೀದೇವಿ ಬೆಟ್ಟದ ಧರ್ಮದರ್ಶಿ ಐತ್ತಪ್ಪ ಸಪಲ್ಯ, ಕೃಷ್ಣಪ್ರಸಾದ್ ಬೆಟ್ಟ, ಜನಾರ್ದನ ಬೆಟ್ಟ, ಲಕ್ಷ್ಮೀಪ್ರಸಾದ್ ಬೆಟ್ಟ ಹಾಗೂ ಮನೆಯವರು ಉಪಸ್ಥಿತರಿದ್ದರು. ಕುಂಟಾರು ರವೀಶ ತಂತ್ರಿ, ಮಹಾಲಿಂಗೇಶ್ವರ ದೇವಸ್ಥಾನ ಅರ್ಚಕ ವಸಂತ ಕೆದಿಲಾಯ, ಮಾಜಿ ಶಾಸಕರಾದ ಶಕುಂತಳಾ ಟಿ.ಶೆಟ್ಟಿ, ಸಂಜೀವ ಮಠಂದೂರು, ಅಂಬಿಕಾ ಸಮೂಹ ಸಂಸ್ಥೆಗಳ ನಿರ್ದೇಶಕಿ ರಾಜಶ್ರೀ ನಟ್ಟೋಜ, ಜಿಲ್ಲಾ ಧಾರ್ಮಿಕ ಪರಿಷತ್ ಮಾಜ ಸದಸ್ಯ ಮುರಳಿಕೃಷ್ಣ ಹಸಂತಡ್ಕ, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ನ್ಯಾಯವಾದಿ ಚಿದಾನಂದ ಬೈಲಾಡಿ, ನಗರ ಸಭಾ ಸದಸ್ಯರಾದ ಜೀವಂಧರ್ ಜೈನ್, ಸುಂದರ ಪೂಜಾರಿ ಬಡಾವು, ಪಿ.ಜಿ ಜಗನ್ನಿವಾಸ ರಾವ್, ನಗರ ಸಭಾ ಮಾಜಿ ಅಧ್ಯಕ್ಷ ಜಗದೀಶ ಶೆಟ್ಟಿ ನೆಲ್ಲಿಕಟ್ಟೆ, ಮಾಜಿ ಸದಸ್ಯರಾದ ವಿನಯ ಭಂಡಾರಿ, ವಿಶ್ವನಾಥ ಗೌಡ ಬನ್ನೂರು, ಗುರುದೇವ ಸೇವಾ ಬಳಗದ ಅಧ್ಯಕ್ಷ ಸುಧೀರ್ ನೊಂಡಾ, ಗಾನಸಿರಿಯ ಕಿರಣ್ ಕುಮಾರ್, ವೈದಿಕ ವಿದ್ವಾಂಸ ನರಸಿಂಹ ಮಯ್ಯ, ಸವಿತ್ರ ಶರ್ಮ, ಮಂಗಲ್ ಸ್ಟೋರ್‌ನ ರಾಘವೇಂದ್ರ ಪ್ರಭು, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್, ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್, ಕಾರ್ಯದರ್ಶಿ ನಾಗೇಶ್ ಪ್ರಭು, ಯುವರಾಜ್ ಪೆರಿಯತ್ತೋಡಿ, ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯರ್ ರಾಧಾಕೃಷ್ಣ ರೈ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಗುರು ಸತೀಶ್ ರೈ, ದಕ್ಷ ಕನ್‌ಸ್ಟ್ರಕ್ಷನ್‌ನ ರವೀಂದ್ರ, ಉದ್ಯಮಿ ಪ್ರಸನ್ನ ಶೆಟ್ಟಿ ಸಾಮೆತ್ತಡ್ಕ, ಗೋಪಾಲಕೃಷ್ಣ ಹೇರಳೆ, ಪದ್ಮಶ್ರೀ ಸೋಲಾರ್‌ನ ಸೀತಾರಾಮ ರೈ, ಟಿಎಪಿಸಿಎಂಎಸ್ ಅಧ್ಯಕ್ಷ ಕೃಷ್ಣ ಕುಮಾರ್ ರೈ ಕೆದಂಬಾಡಿ ಗುತ್ತು, ಹರಿಪ್ರಸಾದ್ ಯಾದವ್, ಯುವ ಮೋರ್ಛಾ ಜಿಲ್ಲಾ ಉಪಾಧ್ಯಕ್ಷ ವಿರೂಪಾಕ್ಷ ಭಟ್, ಪರಿವಾರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಸಂತೋಷ್ ಕುಮಾರ್, ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ಜಿ.ಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಕಾವು, ಬ್ಲಾಕ್ ಕಾಂಗ್ರೆಸ್ ರೋಷಣ್ ರೈ ಬನ್ನೂರು, ವಿಟ್ಲ ಮುಡ್ನೂರು ಗ್ರಾ.ಪಂ ಅಧ್ಯಕ್ಷ ಪುನೀತ್ ಮಾಡತ್ತಾರು, ಅಜಿತ್ ರೈ ಹೊಸಮನೆ, ವಿಶ್ವಹಿಂದು ಪರಿಷತ್ ಜಿಲ್ಲಾಧ್ಯಕ್ಷ ಡಾ.ಕೃಷ್ಣ ಪ್ರಸನ್ನ, ದಾಮೋದರ ಪಾಟಾಳಿ, ನ್ಯಾಯವದಿ ಶಿವಪ್ರಸಾದ್ ಇ., ಆರ್‌ಎಸ್‌ಎಸ್ ಮುಖಂಡ ಅಚ್ಚುತ್ತ ನಾಯಕ್, ಪುರಸಭಾ ಮಾಜಿ ಅಧ್ಯಕ್ಷ ಲೋಕೇಶ್ ಹೆಗ್ಡೆ, ತಾ.ಪಂ ಮಾಜಿ ಸದಸ್ಯ ಉಮೇಶ್ ಶೆಣೈ, ಗಣರಾಜ ಭಟ್ ಕೆದಿಲ, ಸಂತೋಷ್ ಬೋನಂತಾಯ, ಕಡಮಜಲು ಸುಭಾಸ್ ರೈ, ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ನ್ಯಾಯವಾದಿ ಹರಿಣಾಕ್ಷಿ ಜೆ.ಶೆಟ್ಟಿ, ರಾಧಾಕೃಷ್ಣ ನಂದಿಲ, ನಾಗೇಶ್ ಟಿ.ಎಸ್., ಸತೀಶ್ ನಾಯ್ಕ್ ಸೇರಿದಂತೆ ಸಾವಿರಾರು ಮಂದಿ ಗಣ್ಯರು ಆಗಮಿಸಿ ಶುಭಹಾರೈಸಿದರು.

LEAVE A REPLY

Please enter your comment!
Please enter your name here