ಉಪ್ಪಿನಂಗಡಿ: ಇಲ್ಲಿನ ಹಳೆ ಬಸ್‌ನಿಲ್ದಾಣದ ಬಳಿಯ ಡಾ. ಶೆಣೈ ಕಟ್ಟಡದಲ್ಲಿ ಆರ್.ಕೆ. ಬ್ರೈಡಲ್ ಗ್ಯಾಲರಿ ಮತ್ತು ಆರ್.ಕೆ. ಫೂಟ್‌ವೇರ್ ಫೆ.9ರಂದು ಶುಭಾರಂಭಗೊಳ್ಳಲಿದೆ.
ಆರ್.ಕೆ. ಬ್ರೈಡಲ್ ಗ್ಯಾಲರಿಯಲ್ಲಿ ನೆಕ್ಲೆಸ್, ಬಳೆಗಳು, ಈರಿಂಗ್ಸ್, ಹ್ಯಾಂಡ್‌ಬ್ಯಾಗ್, ಗಿಫ್ಟ್ ಮತ್ತು ಕ್ರಾಫ್ಟ್ ಐಟಮ್ಸ್, ಆಂಟಿಕ್ ಒಡವೆಗಳು ಹಾಗೂ ಮದುವೆಗೆ ಬೇಕಾಗುವ ಎಲ್ಲಾ ತರಹದ ಫ್ಯಾನ್ಸಿಗಳು ಲಭ್ಯವಿದೆ. ಆರ್.ಕೆ. ಫೂಟ್‌ವೇರ್‌ನಲ್ಲಿ ಪುರುಷರ, ಮಹಿಳೆಯರ ಹಾಗೂ ಮಕ್ಕಳ ಎಲ್ಲಾ ಮಾದರಿಯ ಚಪ್ಪಲಿ, ಶೂಗಳು ಲಭ್ಯವಿದೆ.
ಶುಭಾರಂಭದ ಪ್ರಯುಕ್ತ 1000 ರೂ.ಗಿಂತ ಹೆಚ್ಚಿನ ಖರೀದಿ ಮಾಡಿದವರಿಗೆ ಲಕ್ಷಗಳಲ್ಲಿ ಗೆಲ್ಲುವ ಅವಕಾಶವಿದ್ದು, 1000 ಕ್ಕೂ ಮಿಕ್ಕ ಖರೀದಿ ಮಾಡುವ ಎಲ್ಲಾ ಗ್ರಾಹಕರಿಗೆ ಒಂದು ಕೂಪನ್ ನೀಡಲಾಗುತ್ತದೆ. ಪ್ರಥಮ ಅದೃಷ್ಟಶಾಲಿಗೆ ಎರಡು ಪವನ್ ಚಿನ್ನ, ದ್ವಿತೀಯ 1 ಪವನ್ ಚಿನ್ನ, ತೃತೀಯ ನಾಲ್ಕು ಗ್ರಾಂ ಚಿನ್ನ ಹಾಗೂ ತಲಾ 10 ಅದೃಷ್ಟಶಾಲಿಗಳಿಗೆ 1 ಗ್ರಾಂ ಗೋಲ್ಡ್ ಸಿಗಲಿದೆ. ಅದೃಷ್ಟಶಾಲಿಗಳನ್ನು ನಿಗದಿತ ದಿನಾಂಕದಂದು ಡ್ರಾ ಮೂಲಕ ಆರಿಸಲಾಗುವುದು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.