ಇರ್ದೆ ಕದಿಕೆ ಚಾವಡಿಯಲ್ಲಿ ರಾಜನ್ ದೈವ, ಮಲರಾಯ ದೈವಗಳ ನೇಮೋತ್ಸವ

0

ಪುತ್ತೂರು:ಇರ್ದೆ ಶ್ರೀ ವಿಷ್ಣುಮೂರ್ತಿ ದೇವಾಲಯ ಗೋಪಾಲಕ್ಷೇತ್ರ ಹಾಗೂ ಪೂಮಾಣಿ-ಕಿನ್ನಿಮಾಣಿ ಮತ್ತು ರಾಜನ್ ದೈವಗಳ ಕದಿಕೆ ಚಾವಡಿ ಬೆಂದ್ರ್‌ತೀರ್ಥದಲ್ಲಿ ವರ್ಷಾವಧಿ ಜಾತ್ರೋತ್ಸವದ ಅಂಗವಾಗಿ ಫೆ.6ರಂದು ಮಲರಾಯ ಹಾಗೂ ರಾಜನ್ ದೈವಗಳ ನೇಮೋತ್ಸವ ನಡೆಯಿತು.


ಜಾತ್ರೋತ್ಸವದ ಕೊನೆಯ ದಿನವಾದ ಫೆ.6ರಂದು ಬೆಳಿಗ್ಗೆ ಮಲರಾಯ ಮಧ್ಯಾಹ್ನ ರಾಜನ್ ದೈವ(ಹುಲಿಭೂತ)ಗಳ ನೇಮ ನಡೆಯಿತು. ಸಂಜೆ ನವಕ ಗಣಹೋಮ, ತಂಬಿಲ, ದೈವಗಳ ಭಂಡಾರ ಕದಿಕೆ ಚಾವಡಿಯಿಂದ ದೇವಸ್ಥಾನಕ್ಕೆ ಆಗಮನ ಬಳಿಕ ದೇವಾಲಯದಲ್ಲಿ ಪಿಲಿಚಾಮುಂಡಿ ದೈವದ ನೇಮ ನಡೆದು ರಾತ್ರಿ ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ದೈವಗಳ ಭಂಡಾರ ನಿರ್ಗಮನದೊಂದಿಗೆ ಜಾತ್ರೋತ್ಸವ ಸಂಪನ್ನಗೊಂಡಿತು.


ದೈವಗಳಿಗೆ ಬಂಡಿ ಸಮರ್ಪಣೆ:
ಬಾಲ್ಯೊಟ್ಟುಗುತ್ತು ದಿ. ಪದ್ಮಾವತಿ ಮತ್ತು ಶೀನಪ್ಪ ರೈ ಸ್ಮರಣಾರ್ಥ ಅವರ ಮಕ್ಕಳು ಸೇವಾ ರೂಪವಾಗಿ ರಾಜನ್ ದೈವಕ್ಕೆ ನೀಡಿದ ಬಂಡಿ(ಹುಲಿವಾಹನ)ಯನ್ನು ಇದೇ ಸಂದರ್ಭದಲ್ಲಿ ಸಮರ್ಪಣೆಗೊಂಡಿತು. ಬಾಲ್ಯೊಟ್ಟುಗುತ್ತು ವಿಠಲ ರೈ, ಶರತ್ ಕುಮಾರ್ ಮಾರ್ಲ ಹಾಗೂ ತಿಮ್ಮಣ್ಣ ರೈಯವರು ಪೂಮಾಣಿ, ಕಿನ್ನಿಮಾಣಿ ದೈವಕ್ಕೆ ನೀಡಿದ ಕುದುರೆ ವಾಹನವು ಫೆ.4ರಂದು ಸಮರ್ಪಣೆಗೊ‌ಂಡಿತ್ತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರು, ಸದಸ್ಯರು ‌ಸೇರಿದಂತೆ ಸಾವಿರಾರು ಮಂದಿ ನೇಮೋತ್ಸವದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here