ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿಯಾಗಿ ಇಬ್ರಾಹಿಂ ಬಾತಿಷಾ ಆತೂರು ಆಯ್ಕೆಯಾಗಿದ್ದಾರೆ. ಜಿಲ್ಲಾ ಯುವ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಅವರು 4262 ಭರ್ಜರಿ ಮತಗಳನ್ನು ಪಡೆದುಕೊಂಡಿದ್ದಾರೆ.
ಆತೂರು ಬೈಲ್ ನಿವಾಸಿಯಾಗಿರುವ ಇಬ್ರಾಹಿಂ ಬಾತಿಷಾ ಆತೂರು ಅವರು ವಿದ್ಯಾರ್ಥಿ ಜೀವನದಲ್ಲೇ ಕಾಂಗ್ರೆಸ್ ಪಕ್ಷದ ಪರ ಒಲವು ಹೊಂದಿದ್ದರು. ಎನ್.ಎಸ್.ಯು.ಐ ಕಾಲೇಜ್ ಘಟಕದ ಅಧ್ಯಕ್ಷರಾಗಿ, ಎನ್.ಎಸ್.ಯು. ಐ ಪುತ್ತೂರು ತಾಲೂಕು ಪ್ರಧಾನ ಕಾರ್ಯದರ್ಶಿಯಾಗಿ, ಎನ್.ಎಸ್.ಯು.ಐ ಪುತ್ತೂರು ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷರಾಗಿ, ಎನ್.ಎಸ್.ಯು.ಐ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ಯುವ ಕಾಂಗ್ರೆಸ್ ಕಡಬ ತಾಲೂಕು ಉಪಾದ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಪ್ರಸುತ್ತ ಐ ಬಿ ವೆಲ್ಪ್ರೇರ್ ಅಸೋಷಿಯೇಷನ್ ಪುತ್ತೂರು ಇದರ ಅಧ್ಯಕ್ಷರಾಗಿ, ಎಂ.ಎಂ.ವೈ.ಸಿ ಬೆಂಗಳೂರು ಇದರ ನಿರ್ದೇಶಕರಾಗಿ, ಅಲ್ ಸಫರ್ ಹೆಲ್ಪ್ ಲೈನ್ ಆತೂರು ಬೈಲ್ ಇದರ ಅಧ್ಯಕ್ಷರಾಗಿ, ಬೆಂಗಳೂರು ಜಿಲ್ಲಾ ವಿಖಾಯ ಚೆಯರ್ಮನ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.
ಇವರು ಆತೂರು ಬೈಲ್ ಮಸೀದಿಯ ಮಾಜಿ ಅಧ್ಯಕ್ಷ ಮತ್ತು ಹಿರಿಯ ಕಾಂಗ್ರೆಸಿಗ ಡಿ.ಎ ಪುತ್ತುಮೋನು ಹಾಗೂ ಡಿ.ಎ ಶಹನಾಝ್ ದಂಪತಿಯ ಪುತ್ರ.