ನೆಲ್ಯಾಡಿ: ನೆಲ್ಯಾಡಿಯ ಹಿರಿಯ ವರ್ತಕ, ದಿನಸಿ ಸಾಮಾಗ್ರಿಗಳ ಮಾರಾಟ ಮಳಿಗೆ ಅಕ್ಷಯ ಸ್ಟೋರ್ ಇದರ ಮಾಲಕ ಪಿ.ಎಸ್.ಸುಭಾಷ್ ಯಾನೆ ಮಣಿ(69ವ.)ಅವರು ಫೆ.8ರಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ನಾಲ್ಕು ದಿನದ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದ ಸುಭಾಷ್ ಅವರನ್ನು ಮಂಗಳೂರಿನ ಯೆನೆಪೋಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಯಲ್ಲಿದ್ದ ಅವರು ಫೆ.8ರಂದು ಬೆಳಿಗ್ಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಬರುತ್ತಿದ್ದ ವೇಳೆ ದಾರಿಮಧ್ಯೆ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟರು ಎಂದು ವರದಿಯಾಗಿದೆ. ಸುಭಾಷ್ ಅವರು ನೆಲ್ಯಾಡಿಯಲ್ಲಿ 20ವರ್ಷಕ್ಕೂ ಹೆಚ್ಚು ಸಮಯಗಳಿಂದ ದಿನಸಿ ಸಾಮಾಗ್ರಗಳ ಮಾರಾಟ ಮಳಿಗೆ ಅಕ್ಷಯ್ ಸ್ಟೋರ್ ಹೊಂದಿದ್ದು ಮಣಿ ಅಣ್ಣ ಎಂದೇ ಚಿರಪರಿಚಿತರಾಗಿದ್ದರು.
ಮೃತರು ಪತ್ನಿ ಗೀತಾ, ಪುತ್ರರಾದ ಆದರ್ಶಕುಮಾರ್, ಅಕ್ಷಯ್ ಅವರನ್ನು ಅಗಲಿದ್ದಾರೆ.