ಪುತ್ತೂರು: ಯಾವದ ಸಭಾ ಕರ್ನಾಟಕ ಕೇಂದ್ರ ಸಮಿತಿ ಮಂಗಳೂರು, ಸುಳ್ಯ, ಬಂಟ್ವಾಳ,ಮಂಗಳೂರು, ತಾಲೂಕು ಸಮಿತಿಗಳ ಸಹಯೋಗದದಲ್ಲಿ ಪುತ್ತೂರು ತಾಲೂಕು ಸಮಿತಿ ಆಶ್ರಯದಲ್ಲಿ ಎ.20ರಂದು ಪುತ್ತೂರು ತಾಲೂಕಿನ ಆರ್ಲಪದವಿನಲ್ಲಿ ನಡೆಯುವ ಜಿಲ್ಲಾ ಯಾದವ ಸಮ್ಮೇಳನದ ಪ್ರಚಾರ ಪತ್ರ ಅನಾವರಣ ಫೆ.9ರಂದು ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.
ಬೆಳಿಗ್ಗೆ ಶ್ರೀ ದೇವರ ಸತ್ಯಧರ್ಮ ನಡೆಯಲ್ಲಿ ದೇವಳದ ಪ್ರಧಾನ ಅರ್ಚಕ ವೇ ಮೂ ವಿ.ಎಸ್ ಭಟ್ ಅವರು ಪ್ರಾರ್ಥನೆ ಮಾಡಿ ಪ್ರಸಾದ ನೀಡಿದರು. ಬಳಿಕ ಮಂಗಳೂರು ಬಂದರ್‌ನ ಆದಿಶಕ್ತಿ ಪಾರ್ಸೆಲ್ ಸರ್ವಿಸಸ್‌ನ ಮಾಲಕ ರಮೇಶ್ ಎಂ.ಎಸ್ ಅವರು ಪ್ರಚಾರ ಪತ್ರ ಬಿಡುಗಡೆಗೊಳಿಸಿದರು.
ಈ ಸಂದರ್ಭ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸುಭಾಷ್ ರೈ ಬೆಳ್ಳಿಪ್ಪಾಡಿ, ಈಶ್ವರ ಬೇಡೆಕರ್, ಯಾದವ ಸಭಾ ಕೇಂದ್ರ ಸಮಿತಿ ಅಧ್ಯಕ್ಷ ಎ.ಕೆ.ಮಣಿಯಾಣಿ ಬೆಳ್ಳಾರೆ, ತಾಲೂಕು ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ, ಎಸ್.ಅಪ್ಪಯ್ಯ ಮಣಿಯಾಣಿ, ವಿವಿಧ ಸಮಿತಿ ಪದಾಧಿಕಾರಿಗಳು, ತಾಲೂಕು ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.