ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ಕಡಬ ಇದರ ಸಮುದಾಯ ಅಭಿವೃದ್ಧಿ ವಿಭಾಗದಿಂದ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಸವಣೂರು ಮೊಗರಿಗೆ ಸುಮಾರು 68,000/- ವೆಚ್ಚದ ಹತ್ತು ಡೆಸ್ಕ್ ಮತ್ತು ಬೆಂಚ್ ಕ್ಷೇತ್ರದ ವತಿಯಿಂದ ಕಡಬ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆಯ ಅಧ್ಯಕ್ಷ, ನ್ಯಾಯವಾದಿ ಮಹೇಶ್ ಕೆ ಸವಣೂರು ರವರು ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಜುಸ್ವಿನಾ ಲಿಡ್ವನಾ ಡಿಸೋಜ ರವರಿಗೆ ಹಸ್ತಾಂತರ ಮಾಡಿದರು.
ಎಸ್.ಡಿ.ಎಂ.ಸಿ ಅಧ್ಯಕ್ಷ ರಫೀಕ್ ಮಾಂತೂರು, ತಾಲೂಕು ಜ್ಞಾನ ವಿಕಾಸದ ಸಮನ್ವಯ ಅಧಿಕಾರಿ ಚೇತನಾ, ಸವಣೂರು ವಲಯ ಮೇಲ್ವಿಚಾರಕರಾದ ವೀಣಾ ಕೆ,ಸೇವಾ ಪ್ರತಿನಿಧಿ ಮೀನಾಕ್ಷಿ ಡಿ ಎಸ್ ಡಿ ಎಂ ಸಿ ಪದಾಧಿಕಾರಿಗಳಾದ ಪುಷ್ಪಲತಾ, ,ಶಿಕ್ಷಕರಾದ ಜಾನಕಿ, ಮೊದಲಾದವರು ಉಪಸ್ಥಿತರಿದ್ದರು.