ಪುತ್ತೂರು:2016ರಿಂದ ಜಿ.ಎಲ್ ಕಾಂಪ್ಲೆಕ್ಸ್ ನ ಮೊದಲ ಮಹಡಿಯಲ್ಲಿ ಈ ವರೆಗೆ ಕಾರ್ಯನಿರ್ವಹಿಸುತ್ತಿದ್ದ ಶ್ರೀ ಭುವನೇಂದ್ರ ಸ್ವಾಮೀಜಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ (ನಿ). ಮಂಗಳೂರು ಇದರ ಪುತ್ತೂರು ಶಾಖೆಯು ಇದೀಗ ನವೀಕರಣಗೊಂಡು ಪುತ್ತೂರಿನ ಕೋರ್ಟ್ ರಸ್ತೆಯ ಶ್ರೀ ಹರಿ ಕಾಂಪ್ಲೆಕ್ಸ್ ನ ನೆಲ ಅಂತಸ್ತಿಗೆ ಫೆ.10 ರಂದು ಸ್ಥಳಾಂತರಗೊಂಡು ಉದ್ಘಾಟನೆಗೊಂಡಿತು.
ಶ್ರೀಹರಿ ಕಾಂಪ್ಲೆಕ್ಸ್ ಮಾಲಕರಾದ ಹಿರಿಯರಾದ ಕೃಷ್ಣ ಕಾಮತ್ ರವರು ರಿಬ್ಬನ್ ಕತ್ತರಿಸಿ, ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.
ಸಹಕಾರಿ ಸಂಘದ ಅಧ್ಯಕ್ಷ ಎಸ್.ಸತೀಶ್ ನಾಯಕ್ ರವರು ಮಾತನಾಡಿ, ಪುತ್ತೂರಿನ ಗ್ರಾಹಕರು ನಮ್ಮ ಸಹಕಾರಿ ಸಂಘಕ್ಕೆ ಠೇವಣಿದಾರರಾಗಿ, ಪಿಗ್ಮಿದಾರರಾಗಿ ಅಥವಾ ಇತರ ಯಾವುದೇ ಚಟುವಟಿಕೆಗಳಲ್ಲಿ ವ್ಯವಹಾರದಲ್ಲಿ ಭಾಗಿಯಾಗಿ ಸಹಕಾರಿ ಸಂಘವನ್ನು ಅಭಿವೃದ್ಧಿಯತ್ತ ಕೊಂಡೊಯ್ದಿರುತ್ತಾರೆ. ನಮ್ಮ ಸಹಕಾರಿ ಸಂಘದಲ್ಲಿ ಗ್ರಾಹಕರಿಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಹೊಂದಿದ್ದು ಗ್ರಾಹಕರು ನಮಗೆ ಪ್ರೋತ್ಸಾಹಿಸಬೇಕು ಎಂದು ಹೇಳಿ ಪ್ರತಿಯೋರ್ವರಿಗೆ ಶ್ರೀ ಮಹಾಲಿಂಗೇಶ್ವರ ದೇವರು ಆಶೀರ್ವದಿಸಲಿ ಎಂದರು.
ಸಹಕಾರಿ ಸಂಘದ ಉಪಾಧ್ಯಕ್ಷ ಸಿಎ ಎಂ.ಜಗನ್ನಾಥ್ ಕಾಮತ್ ಸ್ವಾಗತಿಸಿ ಮಾತನಾಡಿ, 2016ರಲ್ಲಿ ಪುತ್ತೂರಿನಲ್ಲಿ ಸ್ಥಾಪನೆಯಾದ ಈ ಸಹಕಾರಿ ಸಂಘವು ಗ್ರಾಹಕರ ಸಹಕಾರದಿಂದ ಎಂಭತ್ತು ಕೋಟಿ ವ್ಯವಹಾರ ನಡೆಸುತ್ತಿದ್ದು ಇದು ಮುಂದಿನ ದಿನಗಳಲ್ಲಿ ನೂರು ಕೋಟಿಯತ್ತ ಸಾಗುವ ಪ್ರಯತ್ನ ನಮ್ಮದಾಗಿದೆ. ಗ್ರಾಹಕರ ಒತ್ತಾಸೆಯಂತೆ ನಮ್ಮ ಸಹಕಾರಿ ಸಂಘವನ್ನು ಇದೀಗ ನೆಲ ಅಂತಸ್ತಿಗೆ ವರ್ಗಾಯಿಸಿಕೊಂಡು ವ್ಯವಹಾರ ನಡೆಸುವತ್ತ ಚಿತ್ತ ಹರಿಸಿದ್ದು ಗ್ರಾಹಕರ ಸಂತೃಪ್ತಿಯೇ ನಮ್ಮ ಸಹಕಾರ ಸಂಘದ ಜೀವಾಳ ಎಂದರು.
ಈ ಸಂದರ್ಭದಲ್ಲಿ ಸಹಕಾರಿ ಸಂಘದ ನಿರ್ದೇಶಕ ಹಾಗೂ ಪುತ್ತೂರು ಪುಡಾ ಮಾಜಿ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಪೊಪ್ಯುಲರ್ ಸ್ವೀಟ್ಸ್ ಮಾಲಕ ನರಸಿಂಹ ಕಾಮತ್, ವರದರಾಜ್ ಟ್ರೇಡರ್ಸ್ ಮಾಲಕ ಇಂದಾಜೆ ವಿನಾಯಕ ನಾಯಕ್, ಕೃಷ್ಣಾನಂದ ನಾಯಕ್, ಶ್ರೀಹರಿ ಕಾಂಪ್ಲೆಕ್ಸ್ ಮಾಲಕ ಕೃಷ್ಣ ಕಾಮತ್ ರವರ ಪತ್ನಿ ನಳಿನಿ ಕಾಮತ್, ಸೊಸೆ ಸುಜಾತಾ ಕಾಮತ್, ದರ್ಬೆ ಶ್ರೀ ಲಕ್ಷ್ಮೀ ಇಂಡಸ್ಟ್ರೀಸ್ ನ ಜಯಶ್ರೀ ಆರ್.ಪೈ, ಕಾಮತ್ ಸ್ವೀಟ್ಸ್ ನ ವರದರಾಯ ಕಾಮತ್, ರಾಧಾಕೃಷ್ಣ ನಾಯಕ್, ನಾಗೇಂದ್ರ ಬಾಳಿಗ, ಹರಿರಾಯ ಕಾಮತ್, ನರೇಂದ್ರ ನಾಯಕ್, ನ್ಯಾಯವಾದಿ ಸತೀಶ್ ವಾಗ್ಳೆ, ಶ್ರೀ ಭುವನೇಂದ್ರ ಸ್ವಾಮೀಜಿ ವಿವಿಧೋದ್ಧೇಶ ಸೌಹಾರ್ದ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಮಲಾಕ್ಷ ಎಚ್, ಮಂಗಳೂರು ಶಾಖೆಯ ಪ್ರಬಂಧಕಿ ಪ್ರತೀಕ್ಷ ಪ್ರಭು, ಬೆಳ್ತಂಗಡಿ ಶಾಖೆಯ ಪ್ರಬಂಧಕ ಪ್ರಕಾಶ್, ಪುತ್ತೂರು ಶಾಖೆಯ ಪ್ರಬಂಧಕ ಪ್ರಕಾಶ್ ಡಿ’ಸೋಜ, ಪುತ್ತೂರು ಶಾಖೆಯ ಸಿಬ್ಬಂದಿಗಳಾದ ಅಂಕಿತಾ, ರಾಜೇಶ್, ಪಿಗ್ಮಿ ಸಂಗ್ರಹಕರಾದ ಗಿರಿಧರ ರಾವ್, ನರಸಿಂಹ ಕುಡ್ವ, ಗಜಾನನ ಬಾಳಿಗ ಸಹಿತ ಹಲವರು ಉಪಸ್ಥಿತರಿದ್ದು ಶುಭ ಹಾರೈಸಿದರು.
![](https://puttur.suddinews.com/wp-content/uploads/2025/02/Bhuvanendra-2.jpg)
ಗ್ರಾಹಕರ ಹೆಚ್ಚಿನ ಅನುಕೂಲಕ್ಕಾಗಿ ಜೆರಾಕ್ಸ್ ಮತ್ತು ಪ್ರಿಂಟಿಂಗ್ ಸೇವೆಗಳನ್ನು ಹೊಸ ನಿವೇಶನದಲ್ಲಿ ಪ್ರಾರಂಭಿಸಲಾಗುತ್ತಿದೆ. ಆಕರ್ಷಕ ಠೇವಣಿ ಯೋಜನೆಗಳು ಹಾಗೂ ಕಡಿಮೆ ಬಡ್ಡಿದರದಲ್ಲಿ ಚಿನ್ನಾಭರಣ ಸಾಲ ಸಹಿತ ಇತರ ಸಾಲಗಳ ಸೌಲಭ್ಯಗಳು ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.