ಪುತ್ತೂರು:ಪುತ್ತೂರಿನ ಎರಡನೇ ಅತಿ ದೊಡ್ಡ ಜಾತ್ರೆ ಎಂದೇ ಕರೆಯಲಾಗುತ್ತಿರುವ, ಕಾರಣಿಕ ಕ್ಷೇತ್ರವಾದ ಇತಿಹಾಸ ಪ್ರಸಿದ್ದ ಕಲ್ಲೇಗ ಶ್ರೀ ಕಲ್ಕುಡ ದೈವಸ್ಥಾನದಲ್ಲಿ ಫೆ.11ರಂದು ಶ್ರೀ ಕಲ್ಕುಡ ಕಲ್ಲುರ್ಟಿ ದೈವಗಳ ವರ್ಷಾವಽ ನೇಮೋತ್ಸವ ವೈಭವೋಪೇತವಾಗಿ ನಡೆಯಿತು.ರಾತ್ರಿ ವಿವಿಧ ಬಿರುದಾವಳಿಗಳು, ದಂಡ್ ಶಿಲಾಲ್, ಕೊಂಬು, ಶಂಖ, ಜಾಗಟೆ, ಟಾಸೆ, ಚೆಂಡೆಯ ಸದ್ದು ಮತ್ತು ಬೆಳಕಿನ ಸೂಟೆಯೊಂದಿಗೆ ದೈವಗಳ ಮೂಲ ನೆಲೆ ಕಾರ್ಜಾಲು ಗುತ್ತುವಿನಿಂದ ದೈವಗಳ ಭಂಡಾರ ಬರುವುದೇ ವಿಶೇಷವಾಗಿತ್ತು.ದೈವಗಳ ಭಂಡಾರದ ಜೊತೆ ಪಲ್ಲಕ್ಕಿಯ ಅಕ್ಕಪಕ್ಕ ದಂಡ್ ಶಿಲಾಲ್ ಬೆಳಕಿತ್ತು.ಮಧ್ಯಾಹ್ನ ಕಲ್ಲೇಗ ದೈವಸ್ಥಾನದಲ್ಲಿ ಸಹಸ್ರಾರು ಮಂದಿ ಭಕ್ತರಿಗೆ ಅನ್ನಪ್ರಸಾದ ವಿತರಣೆ ಮಾಡಲಾಯಿತು.
![](https://puttur.suddinews.com/wp-content/uploads/2025/02/hhh.jpg)
ಬೆಳಿಗ್ಗೆ ಕಾರ್ಜಾಲು ಗುತ್ತಿನಲ್ಲಿ ಸ್ಥಳಶುದ್ಧಿ ಹೋಮ, ಕಲಶ ಪ್ರತಿಷ್ಠೆ, ಶ್ರೀ ದೈವಸ್ಥಾನದಲ್ಲಿ ಗಣಹೋಮ, ಶ್ರೀ ದೈವಗಳ ತಂಬಿಲ, ನಾಗತಂಬಿಲ, ಮಧ್ಯಾಹ್ನ ದೈವಸ್ಥಾನದ ಬಳಿ ಶ್ರೀ ದೈವಗಳ ಭಂಡಾರದ ವತಿಯಿಂದ ಅನ್ನಸಂತರ್ಪಣೆ ನಡೆಯಿತು.ರಾತ್ರಿ ಕಾರ್ಜಾಲು ಗುತ್ತಿನಿಂದ ಶ್ರೀ ದೈವಗಳ ಭಂಡಾರ ದೈವಸ್ಥಾನಕ್ಕೆ ಬಂದ ಬಳಿಕ ಗೋಂದೊಲು ಪೂಜೆ, ಶ್ರೀ ಕಲ್ಕುಡ ಕಲ್ಲುರ್ಟಿ ದೈವಗಳ ವರ್ಷಾವಧಿ ನೇಮೋತ್ಸವ ನಡೆಯಿತು.ಶಾಸಕ ಅಶೋಕ್ ಕುಮಾರ್ ರೈ, ಪುಡಾ ಸದಸ್ಯ ನಿಹಾಲ್ ಪಿ ಶೆಟ್ಟಿ, ದೈವಸ್ಥಾನದ ಆಡಳಿತಾಧಿಕಾರಿಯಾಗಿರುವ ಕಬಕದ ವಿ.ಎ ಚಂಗಪ್ಪ, ಶ್ರೀ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ನೂತನ ಸದಸ್ಯರಾಗಿರುವ ಅಜಿತ್ ಕುಮಾರ್ ಕಲ್ಲೇಗ, ಜಿನ್ನಪ್ಪ ಗೌಡ, ನಾರಾಯಣ ಮುಗೇರ, ಪ್ರತೀಕ ಪಿ, ಜಾನಕಿ, ಚಂದ್ರಶೇಖರ, ಕೃಷ್ಣಪ್ಪ, ಪ್ರಶಾಂತ್ ಮುರ, ಪಿ.ರಾಮಚಂದ್ರ ನಾಯ್ಕ,ನಗರಸಭಾ ನಿಕಟಪೂರ್ವ ಅಧ್ಯಕ್ಷ ಜೀವಂಧರ್ ಜೈನ್, ಕಲ್ಲೇಗ ರೂರಲ್ ಡೆವಲಪ್‌ಮೆಂಟ್ ಟ್ರಸ್ಟ್‌ನ ಅಧ್ಯಕ್ಷ ಕಲ್ಲೇಗ ಸಂಜೀವ ನಾಯಕ್ ಕಲ್ಲೇಗ, ನವೀನ್ ಕುಮಾರ್, ವಸಂತ ಕಾರೆಕ್ಕಾಡು, ಕಬಕ ಗ್ರಾ.ಪಂ ಸದಸ್ಯ ವಿನಯ ಕಲ್ಲೇಗ, ಜಿನ್ನಪ್ಪ ಪೂಜಾರಿ ಮುರ, ಪ್ರಶಾಂತ್ ಎಸ್, ರಾಘವೇಂದ್ರ ಪ್ರಭು, ಮಾಧವ ಪೂಜಾರಿ ಪಟ್ಲ, ಪ್ರಸಾದ್ ಬೀಡಿಗೆ, ಬಿ.ರವಿಕಿರಣ, ಚಂದ್ರಶೇಖರ್ ಗೌಡ ಕಲ್ಲೇಗ, ಸಂತೋಷ್ ಶೆಟ್ಟಿ, ಶ್ರೀಧರ್ ಪಟ್ಲ, ಉಮೇಶ್ ಅಜೇಯನಗರ, ಮಹೇಶ್ ಕಲ್ಲೇಗ, ಉಳಿಯ ಶ್ರೀಧರ್, ರಂಜಿತ್ ಬಂಗೇರ, ಪೂರ್ಣೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಕರಾವಳಿ ಅಭಿವೃದ್ಧಿ ಪ್ರಾಽಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಸಹಿತ ಸಾವಿರಾರು ಭಕ್ತರು ರಾತ್ರಿ ಭಂಡಾರ ಬರುವ ಸಂದರ್ಭ ಜೊತೆಗಿದ್ದರು.
ರಸ್ತೆಯುದ್ದಕ್ಕೂ ಬಣ್ಣದ ವಿದ್ಯುತ್ ದೀಪ, ವಿಶೇಷ ಸುಡುಮದ್ದು ಪ್ರದರ್ಶನ
ರಾತ್ರಿ ಕಾರ್ಜಾಲು ಗುತ್ತುವಿನಿಂದ ಭಂಡಾರ ಬರುವ ಸಂದರ್ಭ ಮುಖ್ಯರಸ್ತೆಯುದ್ದಕ್ಕೂ ಮಾಲೆ ಪಟಾಕಿ, ಬಣ್ಣ ಬಣ್ಣದ ಸುಡುಮದ್ದು ಪ್ರದರ್ಶನಗೊಂಡಿತು.ಅದೇ ರೀತಿ ರಸ್ತೆಯುದ್ದಕ್ಕೂ ಬಣ್ಣ ಬಣ್ಣದ, ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು.ದೈವಸ್ಥಾನವನ್ನು ಹೂವಿನಿಂದ ಅಲಂಕರಿಸಲಾಗಿತ್ತು.